More

    ಲಾಕ್​ಡೌನ್​ ಕರ್ತವ್ಯದಲ್ಲಿದ್ದ ಮೂವರು ಪೇದೆಗಳು ಅಮಾನತು; ಅವರು ಹೀಗೆ ಮಾಡಬಾರದಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ ಡೆಪ್ಯುಟಿ ಕಮಿಷನರ್​

    ನವದೆಹಲಿ: ಕೊವಿಡ್​ -19ರ ಲಾಕ್​ಡೌನ್​ ಕರ್ತವ್ಯದಲ್ಲಿದ್ದ ಮೂವರು ಪೊಲೀಸ್ ಪೇದೆಗಳನ್ನು ಅಮಾನತುಗೊಳಿಸಲಾಗಿದೆ. ಇದಕ್ಕೆ ಕಾರಣ ಸುಳ್ಳು ಹೇಳಿದ್ದು.

    ಮೂವರು ಪೊಲೀಸ್ ಪೇದೆಗಳೂ ಶಾಸ್ತ್ರಿ ಪಾರ್ಕ್​ ಪೊಲೀಸ್​ ಠಾಣೆಯವರು. ಆ ಠಾಣೆಯ ಸಬ್​ ಇನ್ಸ್​ಪೆಕ್ಟರ್​ಗೆ ಏಪ್ರಿಲ್​ 28ರಂದು ಕರೊನಾ ಸೊಂಕು ಇರುವುದು ದೃಢಪಟ್ಟಿತ್ತು.

    ಸಬ್​ ಇನ್ಸ್​ಪೆಕ್ಟರ್​ಗೆ ಕರೊನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನೆಲ್ಲ ಗುರುತಿಸಿ, ಕ್ವಾರಂಟೈನ್​ಗೆ ಒಳಪಡಿಸಲಾಗುತ್ತಿದೆ. ಈ ಮೂವರು ಪೇದೆಗಳು ತಾವೂ ಸಹ ಸೋಂಕಿತ ಸಬ್​ ಇನ್ಸ್​ಪೆಕ್ಟರ್ ಜತೆಗೇ ಕಾರ್ಯನಿರ್ವಹಿಸಿದ್ದೇವೆ. ಅವರ ಪ್ರೈಮರಿ ಸಂಪರ್ಕ ಹೊಂದಿದ್ದೇವೆ ಎಂದು ಹೇಳಿಕೊಂಡಿದ್ದರು.
    ಅದನ್ನು ಮೊದಲು ಹಿರಿಯ ಅಧಿಕಾರಿಗಳು ನಂಬಿಕೊಂಡು, ಅವರನ್ನು ಕ್ವಾರಂಟೈನ್​ಗೆ ಒಳಪಡಿಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಈ ಮೂವರೂ ಪೇದೆಗಳು ಕರ್ತವ್ಯವನ್ನು ತಪ್ಪಿಸಿಕೊಳ್ಳುವ ಸಲುವಾಗಿ ಸುಳ್ಳು ಹೇಳಿದ್ದಾರೆ. ಇವರ್ಯಾರೂ ಆ ಪೊಲೀಸ್ ಅಧಿಕಾರಿಯ ಸಂಪರ್ಕಕ್ಕೆ ಹೋಗೇ ಇಲ್ಲ ಎಂಬುದು ಪರಿಶೀಲನೆ ಬಳಿಕ ಬೆಳಕಿಗೆ ಬಂತು.

    ಸೋಂಕಿತ ಸಬ್​ ಇನ್ಸ್​ಪೆಕ್ಟರ್​​ಗೆ ಮೊದಲು ಏಪ್ರಿಲ್​ 21ರಂದು ಜ್ವರ ಕಾಣಿಸಿಕೊಂಡಿತ್ತು. ಅಂದೇ ಅವರಿಗೆ ರಜೆ ಕೊಟ್ಟು ಮನೆಗೆ ಕಳಿಸಲಾಗಿತ್ತು. ಆ ಮೇಲೆ ಅವರು ಠಾಣೆಗೆ ಬಂದೇ ಇರಲಿಲ್ಲ. ಮೊದಲೂ ಕೂಡ ಈ ಮೂವರು ಪೇದೆಗಳು ಅವರ ಸಂಪರ್ಕಕ್ಕೆ ಹೋಗಿರಲಿಲ್ಲ ಎಂದು ಪೊಲೀಸ್​ ಉಪ ಆಯುಕ್ತ ಹರೇಂದ್ರ ಕುಮಾರ್​ ಸಿಂಗ್​ ತಿಳಿಸಿದ್ದಾರೆ.

    ಹಲಸಿನ ಹಣ್ಣಿಗೂ ತಗ್ಗಿದ ಬೇಡಿಕೆ, ಬೆಳೆಗಾರರು, ಗುತ್ತಿಗೆ ಪಡೆದ ವ್ಯಾಪಾರಿಗಳಿಗೆ ನಷ್ಟ, ಉತ್ತಮ ಇಳುವರಿ ಬಂದರೂ ಮಾರುಕಟ್ಟೆ ಇಲ್ಲ

    ಪೇದೆಗಳು ಹೀಗೆ ಸುಳ್ಳು ಹೇಳುವ ಬದಲು ರಜೆ ಕೇಳಬಹುದಿತ್ತು. ವಿಶ್ರಾಂತಿ ಬೇಕು ಎಂದು ಹೇಳಬಹುದಿತ್ತು. ಪೊಲೀಸ್​ ಸಿಬ್ಬಂದಿಯನ್ನು ರೊಟೇಶನ್​ನಲ್ಲಿ ಕೆಲಸಕ್ಕೆ ನಿಯೋಜಿಸಲಾಗುತ್ತಿದೆ. ಹಾಗಾಗಿ ಯಾರಿಗೂ ಬರ್ಡನ್​ ಆಗುತ್ತಿಲ್ಲ. ಇಷ್ಟಾದರೂ ಸುಳ್ಳು ಹೇಳಿದ್ದರಿಂದ ಅಮಾನತು ಮಾಡಿದ್ದಾಗಿ ಮಾಹಿತಿ ನೀಡಿದ್ದಾರೆ.
    ಇವರನ್ನು ಹೊರತು ಪಡಿಸಿ ಇನ್ನು ಮೂವರು ಪೇದೆಗಳು ಸೋಂಕಿತ ಸಬ್​ ಇನ್ಸ್​ಪೆಕ್ಟರ್​ ಜತೆ ಕೆಲಸ ಮಾಡಿದ್ದರು. ಹಾಗಾಗಿ ಅವರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಕೊವಿಡ್​-19 ಟೆಸ್ಟ್ ಮಾಡಲಾಗಿದ್ದು ಇನ್ನೂ ವರದಿ ಬಂದಿಲ್ಲ. (ಏಜೆನ್ಸೀಸ್​)

    ಇದನ್ನೂ ಓದಿ: ಸುಂದರಿ ಅಂತ ನಿನ್ನ ಸೆಲೆಕ್ಟ್ ಮಾಡಿಲ್ಲ … ಹಾಗಂತ ಅನುಷ್ಕಾ ಶರ್ಮಗೆ ಹೇಳಿದ್ದು ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts