More

    ಜುಲೈ 31 ರೊಳಗೆ ದ್ವಿತೀಯ ಪಿಯುಸಿ ಫಲಿತಾಂಶ; ರಿಪೀಟರ್ಸ್​​ಗೆ ಸಿಹಿ ಸುದ್ದಿ!

    ಬೆಂಗಳೂರು : ದ್ವಿತೀಯ ಪಿಯುಸಿ ರಿಪೀಟರ್ಸ್​ಗೆ ಕರ್ನಾಟಕ ಸರ್ಕಾರ ಸಿಹಿ ಸುದ್ದಿ ನೀಡಿದೆ. ಎಲ್ಲಾ ರಿಪೀಟರ್ಸನ್ನೂ ಶೇ. 35 ರಷ್ಟು ಅಂಕ ನೀಡಿ ಪಾಸ್ ಮಾಡಲು ಸರ್ಕಾರ ನಿರ್ಧಾರ ಮಾಡಿದೆ ಎಂದು ಹೈಕೋರ್ಟ್ ಮುಂದೆ ಇಂದು ಸರ್ಕಾರಿ ವಕೀಲರು ಹೇಳಿಕೆ ನೀಡಿದ್ದಾರೆ. ಮತ್ತೊಂದೆಡೆ, 2020-21 ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ(ಫ್ರೆಶರ್ಸ್) ಮೌಲ್ಯಾಂಕನ ಮಾಡಲು ಮಾನದಂಡವನ್ನು ನಿಗದಿಪಡಿಸಿದ್ದು, ಜುಲೈ 31 ರೊಳಗೆ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಸರ್ಕಾರ ಹೇಳಿದೆ.

    ಕರೊನಾ ಹಿನ್ನೆಲೆಯಲ್ಲಿ ಪಿಯುಸಿ ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪಾಸಿಗೆ ಮಾನದಂಡವನ್ನು ರೂಪಿಸಲಾಗಿದೆ. ಶೇ.45 ರಷ್ಟು ಎಸ್ಎಸ್ಎಲ್ಸಿ ಅಂಕಗಳು, ಪ್ರಥಮ ಪಿಯುಸಿಯ ಶೇ.45 ರಷ್ಟು ಅಸೆಸ್​​ಮೆಂಟ್ ಅಂಕ ಮತ್ತು ದ್ವಿತೀಯ ಪಿಯುಸಿಯ ಶೇ. 10 ರಷ್ಟು ಇಂಟರ್ನಲ್ ಅಸೆಸ್​ಮೆಂಟ್ ಅಂಕಗಳು – ಈ ಮೂರು ಮಾನದಂಡಗಳಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶಗಳನ್ನು ನೀಡಲಾಗುವುದು ಎಂದು ಸರ್ಕಾರ ಹೇಳಿದೆ.

    ಇದನ್ನೂ ಓದಿ: ಕರೊನಾ ಸೇನಾನಿಗಳ ಸೇವೆಗೆ ಬೆಲೆಕಟ್ಟಲಾಗದು: ಕೆಎಚ್‌ಪಿ ಫೌಂಡೇಷನ್ ಅಧ್ಯಕ್ಷ ಕೆ.ಎಚ್.ಪುಟ್ಟಸ್ವಾಮಿಗೌಡ

    ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ತೇರ್ಗಡೆಗೊಳಿಸುವ ಬಗೆಗಿನ ಸರ್ಕಾರದ ಅಧಿಸೂಚನೆ ಪ್ರಶ್ನಿಸಿ, ನಗರದ ಜ್ಞಾನಮಂದಿರ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಎಸ್.ವಿ. ಸಿಂಗ್ರೇಗೌಡ (75) ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರ ಈ ಹೇಳಿಕೆ ನೀಡಿತು. ಸರ್ಕಾರದ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ದ್ವಿತೀಯ ಪಿಯು ಫ್ರೆಷರ್ಸ್ ಹಾಗೂ ರಿಪೀಟರ್ಸ್‌ಗಳಿಗೆ ನಿಗದಿಪಡಿಸಿರುವ ಮಾನದಂಡಗಳ ಅನುಸಾರ ಪರೀಕ್ಷಾ ಫಲಿತಾಂಶವನ್ನು ಶೀಘ್ರವಾಗಿ ಪ್ರಕಟಿಸಬೇಕೆಂದು ಹೇಳಿತು.

    ಖಾಸಗಿ ವಿದ್ಯಾರ್ಥಿಗಳ ಪರೀಕ್ಷೆ : ಇನ್ನು ನೇರವಾಗಿ ಮೊದಲ ಬಾರಿ ಪರೀಕ್ಷೆ ತೆಗೆದುಕೊಳ್ಳುತ್ತಿರುವ ದ್ವಿತೀಯ ಪಿಯುಸಿ ಖಾಸಗಿ ವಿದ್ಯಾರ್ಥಿಗಳಿಗೆ ಆಗಸ್ಟ್​ನಲ್ಲಿ ಪರೀಕ್ಷೆ ನಡೆಸಲು ಸರ್ಕಾರ ಸಿದ್ದತೆ ನಡೆಸಿದೆ. ಸುಮಾರು 17,477 ಖಾಸಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಬೇಕಾಗಿದೆ ಎಂದು ಹೈಕೋರ್ಟ್​​ಗೆ ಸರ್ಕಾರಿ ಪರ ವಕೀಲ ತಿಳಿಸಿದರು.

    ಇದನ್ನೂ ಓದಿ: ‘ಬಿಗ್​ಬಾಸ್ ವಿನ್ನರ್ ಮಂಜು, ರನ್ನರ್ ಅಪ್ ವೈಷ್ಣವಿ’ ಇದೇ ಆಗೋದು ಅಂತಿದ್ದಾರೆ ಆ ಸ್ಪರ್ಧಿ

    ಸರ್ಕಾರದ ಹೇಳಿಕೆ ಪರಿಗಣಿಸಿದ ಹೈಕೋರ್ಟ್​, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ಪರೀಕ್ಷೆಗಳನ್ನು ಬೇಗ ನಡೆಸಿ ಎಂದಿತು. ಆಗಸ್ಟ್ 31 ರೊಳಗೆ ಖಾಸಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ, ಸೆಪ್ಟೆಂಬರ್ 20 ರೊಳಗೆ ಫಲಿತಾಂಶ ಪ್ರಕಟಿಸಿ ಎಂದು ಶಿಕ್ಷಣ ಇಲಾಖೆಗೆ ಸೂಚನೆ ನೀಡಿತು. ಪರೀಕ್ಷೆ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಹೇಳಿ ಅರ್ಜಿ ಇತ್ಯರ್ಥಪಡಿಸಿತು.

    VIDEO | ಆಕಾಶದಲ್ಲಿ ಹಾರುವ ಕಾರು​! ಕಲ್ಪನೆಯಲ್ಲ.. ನೀವೇ ನೋಡಿ

    ಆಮೀರ್​ ಖಾನ್ ಮೊದಲನೇ ಮದುವೆ ಸಾಗಿದ್ದೂ ಹದಿನಾರೇ ವರ್ಷ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts