More

    ಇಂದು ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಏಕದಿನ, ತಿರುಗೇಟಿನ ತವಕದಲ್ಲಿ ರಾಹುಲ್ ಪಡೆ

    ಪಾರ್ಲ್: ಟೆಸ್ಟ್ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳುವ ತುಡಿತದಲ್ಲಿರುವ ಭಾರತ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮುಗ್ಗರಿಸಿತ್ತು. ಶುಕ್ರವಾರ ನಡೆಯಲಿರುವ 2ನೇ ಏಕದಿನ ಪಂದ್ಯದಲ್ಲಿ ತಿರುಗೇಟು ನೀಡುವ ಮೂಲಕ ಸರಣಿ ಜೀವಂತವಿಡುವುದು ಈಗ ಭಾರತ ತಂಡದ ಗುರಿಯಾಗಿದೆ.

    ಮೊದಲ ಏಕದಿನದಲ್ಲಿ ಮಧ್ಯಮ ಕ್ರಮಾಂಕದ ವೈಲ್ಯ ಭಾರತದ ಸೋಲಿಗೆ ಪ್ರಮುಖ ಕಾರಣವಾಗಿತ್ತು. ವಿರಾಟ್ ಕೊಹ್ಲಿ ನಾಯಕತ್ವದ ದಿನಗಳಲ್ಲೂ ಇದ್ದ ಈ ಸಮಸ್ಯೆ ಕೆಎಲ್ ರಾಹುಲ್ ಅವರ ಹಂಗಾಮಿ ಸಾರಥ್ಯದಲ್ಲೂ ಮುಂದುವರಿದಿದೆ. ಇದೀಗ ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಕೋಚ್ ರಾಹುಲ್ ದ್ರಾವಿಡ್ ಶ್ರಮಿಸಬೇಕಾಗಿದೆ.

    ಜೊಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದಂತೆ ಮೊದಲ ಏಕದಿನದಲ್ಲೂ ಕೆಎಲ್ ರಾಹುಲ್ ನಾಯಕತ್ವ ಅಷ್ಟೇನೂ ಪ್ರಭಾವ ಬೀರಿಲ್ಲ. ಅವರ ಕಾರ್ಯತಂತ್ರಗಳಲ್ಲಿ ಜಾಣತನ ಕಾಣಿಸಿಲ್ಲ. ವೆಂಕಟೇಶ್ ಅಯ್ಯರ್ ಅವರನ್ನು ಆಲ್ರೌಂಡರ್ ಆಗಿ ತಂಡದಲ್ಲಿ ಸೇರಿಸಿಕೊಂಡಿದ್ದರೂ ಅವರಿಗೆ ಬೌಲಿಂಗ್ ನೀಡದಿರುವುದು ಅಚ್ಚರಿ ಎನಿಸಿದೆ. ಬವುಮಾ-ಡುಸೆನ್ ನಡುವೆ ದೊಡ್ಡ ಜತೆಯಾಟ ಬಂದಾಗಲೂ ವೆಂಕಟೇಶ್‌ರನ್ನು 6ನೇ ಬೌಲಿಂಗ್ ಆಯ್ಕೆಯಾಗಿ ಬಳಸಿಕೊಳ್ಳದಿರುವುದು ಸಾಕಷ್ಟು ಟೀಕೆಗೂ ಗುರಿಯಾಗಿದೆ. ವೆಂಕಟೇಶ್‌ಗೆ 4-5 ಓವರ್ ಕೂಡ ಬೌಲಿಂಗ್ ನೀಡದಿದ್ದರೆ, ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್‌ರನ್ನೇ ಕಣಕ್ಕಿಳಿಸಬಹುದಾಗಿತ್ತು. ಯಾಕೆಂದರೆ ವೆಂಕಟೇಶ್ ಮೂಲತಃ ಆರಂಭಿಕರು. ಮಧ್ಯಮ ಕ್ರಮಾಂಕದ ಸವಾಲುಗಳು ಅವರಿಗೂ ಹೊಸದಾಗಿರುತ್ತದೆ.

    ಇನ್ನು ಡುಸೆನ್-ಬವುಮಾ ಜೋಡಿ ಸ್ಪಿನ್ನರ್‌ಗಳಾದ ಚಾಹಲ್-ಅಶ್ವಿನ್ ವಿರುದ್ಧ ಸತತ ಸ್ವೀಪ್, ರಿವರ್ಸ್ ಸ್ವೀಪ್ ಶಾಟ್‌ಗಳನ್ನು ಆಡುತ್ತಿದ್ದಾಗಲೂ ರಾಹುಲ್ ಬೌಲಿಂಗ್ ಬದಲಾವಣೆಯಲ್ಲಿ ಜಾಣತನ ತೋರಲಿಲ್ಲ. ಅಶ್ವಿನ್-ಚಾಹಲ್ 20 ಓವರ್‌ಗಳಲ್ಲಿ 1 ವಿಕೆಟ್‌ಗೆ 106 ರನ್ ಬಿಟ್ಟುಕೊಟ್ಟಿದ್ದರೆ, ಆಫ್ರಿಕಾ ಪರ ಸ್ಪಿನ್ನರ್‌ಗಳಾದ ಮಾರ್ಕ್ರಮ್, ಶಮ್ಸಿ, ಮಹಾರಾಜ್ 26 ಓವರ್‌ಗಳಲ್ಲಿ 124 ರನ್‌ಗೆ 4 ವಿಕೆಟ್ ಕಬಳಿಸಿದರು. ಇದೇ ಲಿತಾಂಶದಲ್ಲಿ ವ್ಯತ್ಯಾಸಕ್ಕೆ ಕಾರಣವಾಗಿತ್ತು. ಹೀಗಾಗಿ ಟೀಮ್ ಇಂಡಿಯಾದ ನಿರ್ವಹಣೆಯ ಜತೆಗೆ ರಾಹುಲ್ ನಾಯಕತ್ವದಲ್ಲೂ ಕೆಲ ಉತ್ತಮ ನಿರ್ಧಾರಗಳನ್ನು ಕಾಣುವುದು, ಗೆಲುವಿನ ಹಾದಿಗೆ ಮರಳಲು ಮಹತ್ವದ್ದಾಗಿದೆ.

    *ಆರಂಭ: ಮಧ್ಯಾಹ್ನ 2.00
    *ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಡಿ.

    ಟೀಮ್ ನ್ಯೂಸ್:

    ಭಾರತ: ವೈಫಲ್ಯದ ನಡುವೆಯೂ ಶ್ರೇಯಸ್ ಮತ್ತು ವೆಂಕಟೇಶ್ ಅಯ್ಯರ್ ಮತ್ತೊಂದು ಅವಕಾಶ ಪಡೆಯುವ ನಿರೀಕ್ಷೆ ಇದೆ. ಆದರೆ ವೆಂಕಟೇಶ್‌ರನ್ನು ಬೌಲಿಂಗ್‌ನಲ್ಲೂ ಬಳಸಿಕೊಂಡರಷ್ಟೇ ಅವರ ಆಯ್ಕೆಗೆ ನ್ಯಾಯ ಸಿಗಲಿದೆ. ಇನ್ನು ಶಾರ್ದೂಲ್ ಅರ್ಧಶತಕ ಸಿಡಿಸಿದ ನಡುವೆಯೂ ಬೌಲಿಂಗ್‌ನಲ್ಲಿ ದುಬಾರಿಯಾಗಿದ್ದರು. ಅವರ ಬದಲು ದೀಪಕ್ ಚಹರ್ ಅಥವಾ ಮೊಹಮದ್ ಸಿರಾಜ್ ಕಣಕ್ಕಿಳಿದರೆ ಅಚ್ಚರಿ ಇಲ್ಲ.

    ದಕ್ಷಿಣ ಆಫ್ರಿಕಾ: ಆತಿಥೇಯರು ಗೆಲುವಿನ ಕಾಂಬಿನೇಷನ್ ಬದಲಾಯಿಸುವ ಸಾಧ್ಯತೆ ಕಡಿಮೆ. ಸ್ಪಿನ್ನರ್‌ಗಳ ವಿರುದ್ಧ ಆಡುವ ಹೊಡೆತಗಳ ಕಾರ್ಯತಂತ್ರದ ಜತೆಗೆ ತನ್ನ ಅರೆಕಾಲಿಕ ಸ್ಪಿನ್ನರ್‌ಗಳನ್ನೂ ಸಮರ್ಥವಾಗಿ ಬಳಸಿಕೊಂಡ ದಕ್ಷಿಣ ಆಫ್ರಿಕಾದ ಯೋಜನೆಯೂ ಮೊದಲ ಪಂದ್ಯದಲ್ಲಿ ಭಾರತಕ್ಕೆ ಅಚ್ಚರಿ ನೀಡಿತ್ತು.

    ಬ್ಯಾಟಿಂಗ್ ಸುಧಾರಣೆಯತ್ತ ಗಮನ
    ಮೊದಲ ಏಕದಿನದಲ್ಲಿ ಧವನ್-ಕೊಹ್ಲಿ ಜೋಡಿ ಅಗ್ರ ಕ್ರಮಾಂಕದಲ್ಲಿ ಭಾರತದ ಚೇಸಿಂಗ್‌ಗೆ ಬಲ ತುಂಬಿದ್ದರೂ, ಮಧ್ಯಮ ಕ್ರಮಾಂಕದ ಕುಸಿತ ಗುರಿ ತಲುಪಲು ಅಡ್ಡಿಯಾಗಿತ್ತು. ರಿಷಭ್ ಪಂತ್ ಮತ್ತು ಇಬ್ಬರು ಅಯ್ಯರ್‌ಗಳು (ಶ್ರೇಯಸ್-ವೆಂಕಟೇಶ್) ತಂಡಕ್ಕೆ ಆಸರೆಯಾಗಲಿಲ್ಲ. ಹೀಗಾಗಿ ಶಾರ್ದೂಲ್ ಠಾಕೂರ್ ಸಾಹಸದ ನಡುವೆಯೂ ಭಾರತಕ್ಕೆ 31 ರನ್ ಕೊರತೆಯಾಯಿತು. 2023ರ ಏಕದಿನ ವಿಶ್ವಕಪ್‌ಗೆ ಮುನ್ನ ಮಧ್ಯಮ ಕ್ರಮಾಂಕದ ವೈಲ್ಯವನ್ನು ನಿವಾರಿಸಲು ಭಾರತ ಆದ್ಯತೆ ನೀಡಬೇಕಾಗಿದೆ. 2019ರ ವಿಶ್ವಕಪ್‌ನಲ್ಲಿ ಇದೇ ಭಾರತವನ್ನು ಕಾಡಿತ್ತು ಎಂಬುದನ್ನು ಕೋಚ್ ದ್ರಾವಿಡ್ ಗಮನದಲ್ಲಿಟ್ಟುಕೊಳ್ಳಬೇಕಿದೆ.

    ಸಾನಿಯಾ ಮಿರ್ಜಾ ವಿದಾಯ ನಿರ್ಧಾರದ ಹಿಂದಿವೆ ಹಲವು ಕಾರಣಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts