More

    ದೇಹತ್ಯಾಗಕ್ಕೆ ತಿರುಗಿದ ಮರಾಠ ಮೀಸಲಾತಿ ಕಿಚ್ಚು: ಇಬ್ಬರು ಆತ್ಮಹತ್ಯೆ

    ಮುಂಬೈ: ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟ 2-3ದಿನಗಳಿಂದ ಹಿಂಸಾಚಾರ ಸ್ವರೂಪ ಪಡೆದುಕೊಂಡ ನಂತರ ಇದೀಗ ಚಳವಳಿಗಾರರ ಆತ್ಮಹತ್ಯೆಗಳಿಗೆ ತಿರುಗಿದೆ.

    ಇದನ್ನೂ ಓದಿ: ಬಂಪರ್ ಗಿಫ್ಟ್ ಘೋಷಣೆ ಮಾಡಿದ ಸಿಎಂ; ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ನೀರು, ವಿದ್ಯುತ್
    ಮರಾಠವಾಡದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳು ಈಗ ನಗರ ಜಿಲ್ಲೆಗೂ ವ್ಯಾಪಿಸಿವೆ. ಇದರ ನಡುವೆ ಮೀಸಲಾತಿಗೆ ಆಗ್ರಹಿಸಿ ಸಂಗಮ್ನೇರ್ ಮತ್ತು ನೇವಾಸ ತಾಲೂಕುಗಳಲ್ಲಿ ಇಬ್ಬರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ.

    ನೇವಾಸ ತಾಲೂಕಿನ ಖಾರವಂಡಿಯ ದತ್ತಾತ್ರೇಯ ಅಭಿಮನ್ಯು ಭೋಗೆ (45) ಗ್ರಾಮದ ಅಣೆಕಟ್ಟೆಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಹಮದ್ ನಗರ ಜಿಲ್ಲೆಯ ಸಂಗಮ್ನೇರ್ ತಾಲೂಕಿನ ಜೋಳೆ ಗ್ರಾಮದ ನಿವಾಸಿ ಸಾಗರ್ ಬಾವುಸಾಹೇಬ್ ವಾಲೆ (25) ಮತ್ತು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಆತ್ಮಹತ್ಯೆಗೂ ಮುನ್ನ ಭೋಗೆ ಬರೆದಿರುವ ಡೆತ್​ ನೋಟ್​ನಲ್ಲಿ “ನಾನು ಜಾರಂಗೆ ಪಾಟೀಲರ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದೆ. ಹೋರಾಟ ನನಗೆ ಹೆಮ್ಮೆ ಎನಿಸಿತು. ಮರಾಠ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು, ಹಾಗಾಗಿ ಸತ್ಯಾಗ್ರಹ ಬೆಂಬಲಿಸಿ, ಮರಾಠ ಬಂಧುಗಳು ನೆಮ್ಮದಿಯಿಂದ ಇರಬೇಕೆಂದು ಒತ್ತಾಯಿಸಿ ದೇಹವನ್ನು ಅರ್ಪಿಸುತ್ತಿದ್ದೇನೆ” ಎಂದು ಬರೆದಿಟ್ಟಿದ್ದಾನೆ.

    ಇನ್ನು ಬಾವುಸಾಹೇಬ್ ವಾಲೆ ಮನೆಯಲ್ಲೂ ಮೀಸಲಾತಿಗೆ ಒತ್ತಾಯಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿರುವ ಡೆತ್​ ನೋಟ್​ ಸಿಕ್ಕಿತ್ತು.

    ಮರಾಠ ಮೀಸಲು ಪ್ರತಿಭಟನೆ ವೇಳೆ ರಾಜ್ಯದ ಬಸ್​ ಸುಟ್ಟವರಿಗೆ ಸಾರಿಗೆ ಸಚಿವರಿಂದ ಖಡಕ್​ ಎಚ್ಚರಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts