More

    ಮದ್ವೆಯಾದ ಎರಡೇ ತಿಂಗಳಿಗೆ 51 ವರ್ಷದ ಪತ್ನಿಗೆ ಸಾವಿನ ದಾರಿ ತೋರಿದ 29ರ ಪತಿ: ಕೊಲೆ ಹಿಂದೆ ಭಯಾನಕ ಸಂಚು!

    ಕೊಚ್ಚಿ: ವಿದ್ಯುತ್​ ಶಾಕ್​ನಿಂದ 51 ವರ್ಷದ ಮಹಿಳೆ ಸಾವಿನ ಪ್ರಕರಣದಲ್ಲಿ ಆಕೆಯ 29 ವರ್ಷದ ಪತಿಯನ್ನು ಕೇರಳದ ವೆಲ್ಲರಡಾ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಸಖ ಕುಮಾರಿ ಕೊಲೆಯಾದ ಮಹಿಳೆ. ಬಂಧಿತ ಪತಿ ಅರುಣ್​, ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆಂದು ವೆಲ್ಲರಡಾ ಪೊಲೀಸ್​ ಠಾಣೆಯ ಸಬ್​ ಇನ್ಸ್​ಪೆಕ್ಟರ್​ ರಾಜತಿಲಕಂ ಮಾಹಿತಿ ನೀಡಿದ್ದಾರೆ.

    ಘಟನೆಯ ವಿವರಣೆಗೆ ಬರುವುದಾದರೆ, ಸಖ ಕುಮಾರಿ ವಿದ್ಯುತ್​ ಶಾಕ್​ನಿಂದ ಸಾವಿಗೀಡಾಗಿರುವ ಸ್ಥಿತಿಯಲ್ಲಿ ಆಕೆಯ ಮೃತದೇಹ ಕಾರಕೋಣಂನ ಥ್ರೆಸಿಯಾಪುರಂನಲ್ಲಿನ ನಿವಾಸದಲ್ಲಿ ಪತ್ತೆಯಾಗಿತ್ತು. ಪೊಲೀಸ್​ ಮೂಲಗಳ ಪ್ರಕಾರ ಬಲರಾಮಪುರಂ ನಿವಾಸಿ ಅರುಣ್​ ವಿದ್ಯುತ್​ ಶಾಕ್​ ನೀಡಿ ಕೊಲೆ ಮಾಡಿದ್ದಾನೆಂದು ತಿಳಿಸಿದ್ದಾರೆ. ಇಬ್ಬರ ನಡುವಿನ ಜಗಳದ ಬಳಿಕ ಆಕೆಯನ್ನು ಬೆಡ್​ರೂಮ್​ಗೆ ಎಳೆದೊಯ್ದು ಕಿರುಕುಳ ನೀಡಿ ವಿದ್ಯುತ್​ ಶಾಕ್​ ನೀಡಿ ಹತ್ಯೆಗೈದಿದ್ದಾನೆ.

    ಇದನ್ನೂ ಓದಿ: ಸಿಲಿಕಾನ್​ ಸಿಟಿಯ ಮೂವರಿಗೆ ರೂಪಾಂತರಿ ಮಾರಿ: ಅಪಾರ್ಟ್​ಮೆಂಟ್​ನಲ್ಲೇ 35 ಮಂದಿ ಕ್ವಾರಂಟೈನ್​!

    ಸ್ವಿಚ್​ಬೋರ್ಡ್​ನಿಂದ ನೇರವಾಗಿ ಲಿವ್ಹಿಂಗ್​ ರೂಮ್​ಗೆ ವೈರ್​ ಎಳೆದುಕೊಂಡು ಕರೆಂಟ್​​ ಶಾಕ್​ ನೀಡಿರುವುದು ತಿಳಿದುಬಂದಿದೆ. ಮೂಲಗಳ ಪ್ರಕಾರ ಸಖ ಕುಮಾರಿ ಅವರ ಕೈಗಳು, ತಲೆ ಮತ್ತು ಮುಖದಲ್ಲಿ ಸುಟ್ಟ ಗಾಯಗಳಾಗಿವೆ. ಆದರೆ, ಆರಂಭದಲ್ಲಿ ಕತೆ ಕಟ್ಟಿದ್ದ ಅರುಣ್​, ಕ್ರಿಸ್​ಮಸ್​ ಹಿನ್ನೆಲೆಯಲ್ಲಿ ಮನೆಯಲ್ಲಿ ಅಲಂಕಾರಕ್ಕೆ ಅಳವಡಿಸಿದ್ದ ಲೈಟ್​ನಿಂದ ವಿದ್ಯುತ್​ ತಾಗಿದೆ ಎಂದು ನೆರೆಹೊರೆಯವರಿಗೂ ಮತ್ತು ಆಸ್ಪತ್ರೆಗೂ ಹೇಳಿದ್ದ. ಆದರೆ, ಪರೀಕ್ಷಿಸಿದ ವೈದ್ಯರಿಗೆ ಅರುಣ್​ ಮಾತಿಗೂ ಮತ್ತು ಮೃತದೇಹದ ಸ್ಥಿತಿಗೂ ವ್ಯತ್ಯಾಸ ಕಂಡುಬಂದು ಅನುಮಾನಕ್ಕೆ ದಾರಿ ಮಾಡಿಕೊಟ್ಟಿತ್ತು.

    ಇನ್ನು ಅರುಣ್​ ಮತ್ತು ಸಖ ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಆದರೆ, ಇಬ್ಬರ ನಡುವೆ ಒಳ್ಳೆಯ ಬಾಂದವ್ಯ ಇರಲಿಲ್ಲ ಎಂದು ಸಖ ಸಂಬಂಧಿಕರು ಹೇಳಿದ್ದಾರೆ. ಇದೀಗ ತಪ್ಪೊಪ್ಪಿಕೊಂಡಿರುವ ಅರುಣ್​, ನಮ್ಮಿಬ್ಬರ ನಡುವೆ ವಯಸ್ಸಿನ ಅಂತರ ಕುರಿತು ಜನರು ಕೊಂಕು ಮಾತಾಡುತ್ತಿದ್ದರು. ಇದರಿಂದ ನಾನು ಖಿನ್ನತೆಗೆ ಒಳಗಾಗಿದ್ದೆ. ಅಲ್ಲದೆ, ನಾನು ಹಣಕಾಸಿನ ತೊಂದರೆಯಲ್ಲಿದ್ದೆ. ಹಣದ ಅವಶ್ಯಕತೆ ತುಂಬಾ ಇತ್ತು. ಇದೇ ವಿಚಾರಕ್ಕೆ ಜಗಳ ನಡೆಯಿತು. ಅಲ್ಲದೆ, ಆಸ್ತಿಯನ್ನು ಕಬಳಿಸಬಹುದು ಎಂಬ ಉದ್ದೇಶದಿಂದ ಕೊಲೆ ಮಾಡಿದ್ದಾಗಿ ಅರುಣ್​ ತಪ್ಪೊಪ್ಪಿಕೊಂಡಿದ್ದಾನೆ.

    ಇದನ್ನೂ ಓದಿ: ಸಂಬಳ ಕೊಡುತ್ತೇನೆಂದಾಕೆ ವಿಚ್ಛೇದನದ ಬೆದರಿಕೆ ಹಾಕುತ್ತಿದ್ದಾಳೆ: ಪತ್ನಿಯ ಆಸ್ತಿಯಲ್ಲಿ ಪಾಲು ಸಿಗುವುದೆ?

    ಕೊಲೆ ಪೂರ್ವ ನಿಯೋಜಿತವಾಗಿದ್ದು, ಮೊದಲೇ ಅರುಣ್​ ಕೋಣೆಯ ಒಳಗೆ ವೈರ್​ಗಳನ್ನು ಅಳವಡಿಸಿದ್ದ. ಬಳಿಕ ಜಗಳ ತೆಗೆದು ಆಕೆಯನ್ನು ರೂಮಿಗೆ ಎಳೆದೊಯ್ದು ವಿದ್ಯುತ್​ ಶಾಕ್​ ನೀಡಿ ಕೊಲೆ ಮಾಡಿದ್ದ. ಶನಿವಾರ ರಾತ್ರಿಯೇ ಕೊಲೆ ಮಾಡಿ ಭಾನುವಾರ ಬೆಳಗ್ಗೆ ಸಖ ಮೃತಪಟ್ಟಿದ್ದಾಳೆಂದು ನೆರೆಹೊರೆಯವರಿಗೆ ತಿಳಿಸಿದ್ದ. ಆದರೆ, ಪೊಲೀಸ್​ ತನಿಖೆಯಿಂದ ಅರುಣ್​ ಸಿಕ್ಕಿಬಿದ್ದಿದ್ದು, ಭಾನುವಾರ ಬಂಧಿಸಲಾಗಿದೆ. ಅದೇ ದಿನವೇ ಸಖಳ ಅಂತ್ಯಕ್ರಿಯೆಯು ನೆರವೇರಿದ್ದು, ಸೋಮವಾರವಷ್ಟೇ ಆರೋಪಿಯನ್ನು ಕೋರ್ಟ್​ ಮುಂದೆ ಹಾಜರುಪಡಿಸಲಾಗಿದೆ. (ಏಜೆನ್ಸೀಸ್​)

    ಕಾಫಿ ಡೇ ಸಿದ್ಧಾರ್ಥ ಆತ್ಮಹತ್ಯೆ ಪ್ರಕರಣವನ್ನು ಎಚ್​ಡಿಕೆ ನೆನಪಿಸಿಕೊಂಡದ್ದೇಕೆ?

    ಮಕ್ಕಳನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡು ವಿಡಿಯೋ ಮಾರಾಟ- ಜಾಲದ ಹಿಂದೆ ಇಂಜಿನಿಯರ್​ ಪತ್ನಿ!

    ಡೆತ್​​ನೋಟ್​ ಬರೆದಿಟ್ಟಿದ್ರಾ ಧರ್ಮೇಗೌಡರು!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts