More

    29ರ ರಾಯಣ್ಣ ಉತ್ಸವದಲ್ಲಿ ಭಾಗವಹಿಸಿ

    ಸುರಪುರ: ಕರುನಾಡು ವಿಜಯ ಸೇನೆ ಬೆಳಗಾವಿಯಲ್ಲಿ 29ರಂದು ಹಮ್ಮಿಕೊಂಡ ಸಂಗೊಳ್ಳಿ ರಾಯಣ್ಣ ಉತ್ಸವದಲ್ಲಿ ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸೇನೆ ಜಿಲ್ಲಾಧ್ಯಕ್ಷ ದೇವಿಂದ್ರಪ್ಪ ಮುದ್ದನೂರ ಕರೆ ನೀಡಿದ್ದಾರೆ.

    ಅಧ್ಯಕ್ಷ ದೀಪಕ್ ಎಚ್.ಎಸ್. ಅವರ ನೇತೃತ್ವದಲ್ಲಿ ಈ ಉತ್ಸವ ಹಮ್ಮಿಕೊಂಡಿದ್ದು, ನಮಗೆ ಸ್ವಾತಂತ್ರೃ ಲಭಸಿ 75 ವರ್ಷ ಕಳೆದ ಕಾರಣ ಸ್ವಾತಂತ್ರೃ ಹೋರಾಟಗಾರರ ನೆನೆಯುವುದೇ ಇದರ ಮೂಲ ಉದ್ದೇಶವಾಗಿದೆ ಎಂದು ಅವರು ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

    ಅಂದು ನಡೆಯುವ ಉತ್ಸವದಲ್ಲಿ ನಾಡಿನ ವಿವಿಧ ಮಠಾಧೀಶರು, ಗಣ್ಯರು ಮತ್ತು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಅದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ಮೂಲಕ ಈ ಕಾರ್ಯಕ್ರಮ ಯಶಸ್ವಿ ಮಾಡಬೇಕು ಎಂದು ಅವರು ಹೇಳಿದರು.

    ರಾಯಣ್ಣನ ಭಾವಚಿತ್ರದೊಂದಿಗೆ ಸುಮಾರು 20 ಕಿಮೀವರೆಗೆ ಮೆರವಣಿಗೆ ನಡೆಯಲಿದ್ದು, ಹನುಮಾನ ಪುತ್ಥಳಿಯಿಂದ ಚೆನ್ನಮ್ಮ ವೃತ್ತದವರೆಗೆ ವಿವಿಧ ಕಲಾ ತಂಡಗಳು ಈ ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಗಾಂಧಿ ಭವನದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

    ಜಿಪಂ ಮಾಜಿ ಅಧ್ಯಕ್ಷ ಯಲ್ಲಪ್ಪ ಕುರಕುಂದಿ, ಸೇನೆಯ ತಾಲೂಕು ಘಟಕದ ಅಧ್ಯಕ್ಷ ದೇವೇಂದ್ರಪ್ಪ ತಾಳಿಕೋಟಿ, ಜಿಲ್ಲಾ ಕಾರ್ಯದಶರ್ಿ ಭೀಮರೆಡ್ಡಿ ಬೆಕಿನಾಳ, ಶರಣು ಶಾಂತಪುರ, ದೇವೇಂದ್ರಪ್ಪಗೌಡ ಪಾಟೀಲ್, ದೊಡ್ಡಪ್ಪ ಪೂಜಾರಿ, ಸಿದ್ದರಾಮ ಎಲಿಗಾರ, ಹೊನ್ನಪ್ಪ, ವೆಂಕಟೇಶ ಚಟ್ನಳ್ಳಿ, ಮಲ್ಲು ವಿಷ್ಣುಸೇನಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts