More

    ರಾಯಣ್ಣ ಉತ್ಸವ ವ್ಯಾಪಕ ಪ್ರಚಾರಕ್ಕೆ ಕ್ರಮ


    ಬೆಳಗಾವಿ: ಇದೇ ಜ.17 ಹಾಗೂ 18ರಂದು ಜರುಗಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ವ್ಯಾಪಕ ಪ್ರಚಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ಸವದ ಪ್ರಚಾರ ಉಪ ಸಮಿತಿ ಅಧ್ಯಕ್ಷರೂ ಆದ ವಾರ್ತಾ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ತಿಳಿಸಿದರು.
    ಸಂಗೊಳ್ಳಿ ಉತ್ಸವ-2024ಕ್ಕೆ ಸಂಬಂಧಿಸಿದಂತೆ ಸಂಗೊಳ್ಳಿ ಗ್ರಾಪಂ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉತ್ಸವದ ಪ್ರಚಾರ ಉಪ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಬಾರಿ ಉತ್ಸವದಲ್ಲಿ ಭಾಗವಹಿಸಲಿರುವ ಮುಖ್ಯಮಂತ್ರಿ ಅವರು ಸಂಗೊಳ್ಳಿಯ ಸೈನಿಕ ಶಾಲೆ ಮತ್ತು ರಾಕ್ ಗಾರ್ಡನ್ ಉದ್ಘಾಟಿಸುವರು. ಉತ್ಸವಕ್ಕೆ ಸಂಬಂಧಿಸಿದಂತೆ ಪೋಸ್ಟರ್, ಬ್ಯಾನರ್, ಆಮಂತ್ರಣ ಪತ್ರಿಕೆ ಮತ್ತಿತರ ಪ್ರಚಾರ ಸಾಮಗ್ರಿಗಳು ಸಿದ್ಧವಾದ ತಕ್ಷಣ ವ್ಯಾಪಕ ಪ್ರಚಾರ ಕೈಗೊಳ್ಳಲಾಗುವುದು ಎಂದರು.

    ಸಭೆಯಲ್ಲಿ ಮಾತನಾಡಿದ ಗ್ರಾಪಂ ಸದಸ್ಯರು ಹಾಗೂ ಪ್ರಚಾರ ಉಪ ಸಮಿತಿ ಸದಸ್ಯರು ಉತ್ಸವಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ತಕ್ಷಣ ಜಿಲ್ಲೆಯಾದ್ಯಂತ ಬ್ಯಾನರ್ ಮತ್ತು ಪೋಸ್ಟರ್‌ಗಳನ್ನು ಅಳವಡಿಸಲು ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಉತ್ಸವದ ಕಾರ್ಯಕ್ರಮಗಳನ್ನು ಸಾರ್ವಜನಿಕರು ವೀಕ್ಷಿಸಲು ಅನುಕೂಲವಾಗುವಂತೆ ಯೂಟ್ಯೂಬ್‌ನಲ್ಲಿ ನೇರಪ್ರಸಾರ ಮಾಡಬೇಕು. ಯೂಟ್ಯೂಬ್ ಪ್ರಸಾರದ ಲಿಂಕ್ ಸೃಷ್ಟಿಸಿ ಎಲ್ಲೆಡೆ ಹಂಚಿಕೊಳ್ಳಬೇಕು ಎಂದರು.

    ಸಭೆಯಲ್ಲಿ ಚರ್ಚಿಸಲಾಗಿರುವ ವಿಷಯಗಳನ್ನು ಜಿಲ್ಲಾಧಿಕಾರಿಗಳು ಮತ್ತು ಉಪ ವಿಭಾಗಾಧಿಕಾರಿಗಳ ಗಮನಕ್ಕೆ ತಂದು ತ್ವರಿತವಾಗಿ ಪ್ರಚಾರಕಾರ್ಯ ಆರಂಭಿಸಲಾಗುವುದು ಎಂದು ಗುರುನಾಥ ಕಡಬೂರ ತಿಳಿಸಿದರು.

    ಗ್ರಾಪಂ ಉಪಾಧ್ಯಕ್ಷ ಫಕೀರಪ್ಪ ಕುರಿ, ಸದಸ್ಯರಾದ ಬಸವರಾಜ ಕೊಡ್ಲಿ, ಗಂಗಪ್ಪ ಕುರಿ, ಸುರೇಶ ಚಚಡಿ, ಗಂಗಪ್ಪ, ಪ್ರಚಾರ ಉಪ ಸಮಿತಿ ಸದಸ್ಯರಾದ ಬಾಬುಸಾಬ್ ಖುದುನ್ನವರ, ಬಾಬು ಎಸ್. ಸಿಂಗಾಡಿ, ಬೈಲಹೊಂಗಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಾಂತೇಶ ತುರಮರಿ, ಪತ್ರಕರ್ತ ಉದಯ ಕೋಳೆಕರ ಇತರರಿದ್ದರು. ವಾರ್ತಾ ಇಲಾಖೆ ಸಿಬ್ಬಂದಿ ಅನಂತ ಪಪ್ಪು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts