More

    ದಶಕದಲ್ಲಿ ಶೇಕಡ 28 ಮಾರುಕಟ್ಟೆ ಪಾಲು ಹೆಚ್ಚಳ; ಭಾರತೀಯ ಐಟಿ ಕಂಪನಿಗಳ ಸಾಧನೆ

    ನವದೆಹಲಿ: ಭಾರತದಲ್ಲಿ ಕೇಂದ್ರ ಕಚೇರಿ ಹೊಂದಿರುವ ಮಾಹಿತಿ ತಂತ್ರಜ್ಞಾನ ಸೇವಾ ಕಂಪನಿಗಳ (ಟಿಸಿಎಸ್, ಎಚ್​ಸಿಎಲ್, ಟೆಕ್​ವುಹಿಂದ್ರಾ, ಇನ್ಪೋಸಿಸ್, ವಿಪ್ರೋ ಇತ್ಯಾದಿ) ಮಾರುಕಟ್ಟೆ ಆದಾಯದ ಪಾಲು ಕಳೆದ 10 ವರ್ಷದ ಅವಧಿಯಲ್ಲಿ ಶೇಕಡ 28 ಹೆಚ್ಚಳವಾಗಿದೆ. 2011ರಲ್ಲಿ ಈ ಐಟಿ ಕಂಪನಿಗಳ ಮಾರುಕಟ್ಟೆ ಆದಾಯದ ಪಾಲು ಶೇಕಡ 13.9 ಇದ್ದದ್ದು, 2021ಕ್ಕೆ ಶೇಕಡ 28ಕ್ಕೆ ಏರಿಕೆಯಾಗಿದೆ. ಅಂದರೆ, ಭಾರತೀಯ ಕಂಪನಿಗಳ ಒಟ್ಟು ಆದಾಯ 24.10 ಶತಕೋಟಿ ಡಾಲರ್​ನಿಂದ 59.30 ಶತ ಕೋಟಿ ಡಾಲರ್​ಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ವಿದೇಶದಲ್ಲಿ ಕೇಂದ್ರ ಕಚೇರಿ ಹೊಂದಿರುವ ಐಟಿ ಕಂಪನಿಗಳ (ಆಕ್ಸೆಂಚರ್, ಐಬಿಎಂ,ಡಿಎಕ್ಸ್​ಸಿ, ಅಟೋಸ್, ಕ್ಯಾಪ್​ಜೆಮಿನಿ, ಕಾಗ್ನಿಝೆಂಟ್) ಮಾರುಕಟ್ಟೆ ಆದಾಯದ ಪಾಲು ಶೇಕಡ 86ರಿಂದ ಶೇಕಡ 72ಕ್ಕೆ ಇಳಿಕೆಯಾಗಿದೆ. ಈ ಕಂಪನಿಗಳ ಒಟ್ಟು ಆದಾಯ 148.8 ಶತಕೋಟಿ ಡಾಲರ್​ನಿಂದ 151.6 ಶತಕೋಟಿ ಡಾಲರ್​ಗೆ ತಲುಪಿದೆ.

    ಚಿನ್ನ,ಬೆಳ್ಳಿ ದರ ಇಳಿಕೆ: ಜಾಗತಿಕ ಮಾರುಕಟ್ಟೆಗೆ ಅನುಗುಣವಾಗಿ ದೆಹಲಿಯ ಚಿನಿವಾರ ಪೇಟೆಯಲ್ಲೂ ಗುರುವಾರ ಚಿನ್ನದ ದರ 10 ಗ್ರಾಮಿಗೆ 339 ರೂ. ಇಳಿದು 48,530 ರೂ. ಆಗಿದೆ. ಬುಧವಾರ ಇದು 48,869 ರೂ. ಇತ್ತು. ಬೆಳ್ಳಿಯ ದರ ಒಂದು ಕಿಲೋಗೆ 475 ರೂ. ಇಳಿಕೆಯಾಗಿ 70,772 ರೂ. ಆಗಿದೆ. ಬುಧವಾರ ಇದು 71,247 ರೂ. ಇತ್ತು.

    ರೂಪಾಯಿ ಮೌಲ್ಯ ವೃದ್ಧಿ: ಕರೆನ್ಸಿ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂ. ಮೌಲ್ಯ 18 ಪೈಸೆ ಮೌಲ್ಯ ವೃದ್ಧಿಸಿದೆ. ಮಾರುಕಟ್ಟೆ ಬಂಡವಾಳವಾಗಿ ಸುಸ್ಥಿರವಾಗಿ ವಿದೇಶಿ ನಿಧಿಗಳು ಹರಿದು ಬರುತ್ತಿರುವ ಕಾರಣ ಈ ಏರಿಕೆ ದಾಖಲಾಗಿದೆ. ಮಧ್ಯಂತರದ ವಹಿವಾಟಿನಲ್ಲಿ ಗರಿಷ್ಠ 72.90 ರೂ.ಗೆ ಏರಿ, ಕೊನೆಗೆ 72.91 ರೂ.ಗೆ ಸ್ಥಿರವಾಯಿತು.

    ದಶಕದಲ್ಲಿ ಶೇಕಡ 28 ಮಾರುಕಟ್ಟೆ ಪಾಲು ಹೆಚ್ಚಳ; ಭಾರತೀಯ ಐಟಿ ಕಂಪನಿಗಳ ಸಾಧನೆ

    ಷೇರುಪೇಟೆ ದಾಖಲೆ ಏರಿಕೆ: ಭಾರತೀಯ ಷೇರುಪೇಟೆಯಲ್ಲಿ ಬಿಎಸ್​ಇ ಸೆನ್ಸೆಕ್ಸ್ ಗುರುವಾರ 383 ಅಂಶ ಏರಿಕೆಯೊಂದಿಗೆ ಹೊಸ ದಾಖಲೆ ಬರೆದಿದೆ. ಎನ್​ಎಸ್​ಇ ನಿಫ್ಟಿ ಕೂಡ ಸಾರ್ವಕಾಲಿಕ ಎತ್ತರಕ್ಕೇರಿದ ದಾಖಲೆ ಬರೆದಿದೆ. ಸೆನ್ಸೆಕಸ್ 382.95 ಅಂಶ (0.70%) ಏರಿಕೆಯಾಗಿ 52,232.43 ಅಂಶದಲ್ಲಿ, ನಿಫ್ಟಿ 114.15 ಅಂಶ (0.73%) ಏರಿ 15,690.35 ಅಂಶದಲ್ಲಿ ದಿನದ ವಹಿವಾಟು ಮುಗಿಸಿವೆ. ಸೆನ್ಸಕ್ಸ್ ಪಟ್ಟಿಯಲ್ಲಿ ಟೈಟಾನ್ ಕಂಪನಿ ಷೇರು ಶೇಕಡ 7ರಷ್ಟು ಏರಿಕೆ ದಾಖಲಿಸಿದರೆ, ಒಎನ್​ಜಿಸಿ, ಎಲ್​ಆಂಡ್​ಟಿ, ಕೊಟಾಕ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ಎಚ್​ಡಿಎಫ್​ಸಿ ಬ್ಯಾಂಕ್ ಷೇರುಗಳು ಲಾಭಗಳಿಸಿವೆ. ಇನ್ನೊಂದೆಡೆ ಇಂಡಸ್​ಇಂಡ್ ಬ್ಯಾಂಕ್, ಪವರ್​ಗ್ರಿಡ್, ಬಜಾಜ್ ಆಟೋ, ಎಂಆಂಡ್​ಎಂ, ಡಾ.ರೆಡ್ಡಿ’ಸ್ ಷೇರುಗಳು ನಷ್ಟ ಅನುಭವಿಸಿವೆ.

    ರಿಲಯನ್ಸ್ ಮೌಲ್ಯ 14 ಲಕ್ಷ ಕೋಟಿ ರೂ.: ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ಷೇರುಗಳು ಸತತ ಏಳನೇ ದಿನವೂ ಏರಿಕೆ ದಾಖಲಿಸಿವೆ. ಗುರುವಾರದ ವಹಿವಾಟಿನಲ್ಲಿ ಶೇಕಡ 14.53 ಏರಿಕೆ ದಾಖಲಿಸಿದ್ದು, ಪ್ರತಿ ಷೇರಿನ ಬೆಲೆ 2,250 ರೂಪಾಯಿ ಆಗಿದೆ. ಇದರೊಂದಿಗೆ ಗುರುವಾರ ಕಂಪನಿಯ ಮಾರುಕಟ್ಟೆ ಮೌಲ್ಯ 14,04,123.26 ಕೋಟಿ ರೂಪಾಯಿ ಆಗಿದೆ. ದಾಖಲೆ ಪ್ರಮಾಣದಲ್ಲಿ ಫಂಡ್ ರೈಸಿಂಗ್ ಮತ್ತು ಸಾಲ ಮರುಪಾವತಿ ಮಾಡಿದ ಬಳಿಕವೂ ರಿಲಯನ್ಸ್ ಇಂಡಸ್ಟ್ರೀಸ್ ಬಲಿಷ್ಠ ಬ್ಯಾಲೆನ್ಸ್ ಶೀಟ್ ಹೊಂದಿದೆ ಎಂದು ಮುಕೇಶ್ ಅಂಬಾನಿ ಘೋಷಿಸಿದ ಬಳಿಕ ಈ ಬೆಳವಣಿಗೆ ದಾಖಲಾಗಿದೆ.

    ಕನ್ನಡಿಗರ ಕ್ಷಮೆ ಯಾಚಿಸಿದ ಗೂಗಲ್​; ಸರ್ಚ್​ನಲ್ಲಿ ಕಾಣಸಿದ್ದೆಲ್ಲ ಯಾವಾಗಲೂ ಪರ್​ಫೆಕ್ಟ್​ ಅಲ್ಲ…

    ಸಿನಿಮೀಯ ರೀತಿಯಲ್ಲಿ ಗೋರಕ್ಷಣೆ; 1 ಕಿ.ಮೀ. ದೂರ ಕಾರಲ್ಲಿ ರಿವರ್ಸ್ ಹೋಗಿ ಪರಾರಿಯಾದ ದನಗಳ್ಳರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts