More

    ರಸ್ತೆ ಕಾಮಗಾರಿ ಮುಕ್ತಾಯಕ್ಕೆ 28ರ ಗಡುವು

    ಬಾಳೆಹೊನ್ನೂರು: ಪಟ್ಟಣದ ಎನ್.ಆರ್.ಪುರ ರಸ್ತೆಯ ಕೆರೆ ಚೌಡೇಶ್ವರಿ ದೇವಸ್ಥಾನದಿಂದ ರಂಭಾಪುರಿ ಪೀಠಕ್ಕೆ ತಲುಪುವ ಮುಖ್ಯರಸ್ತೆ ಕಾಮಗಾರಿ ಶೀಘ್ರ ಮುಕ್ತಾಯಗೊಳಿಸಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆ ಚಾಲಕರು, ಸಾರ್ವಜನಿಕರು ಬುಧವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
    ಚಾಲಕ ಜಗದೀಶ್ ಅರಳೀಕೊಪ್ಪ ಮಾತನಾಡಿ, ಬಾಳೆಹೊನ್ನೂರು-ರಂಭಾಪುರಿ ಪೀಠ ರಸ್ತೆ ಅಭಿವೃದ್ಧಿ ಕಾಮಗಾರಿ ಕಳೆದ ಮೂರು ವರ್ಷಗಳಿಂದ ಕುಂಟುತಾ ಸಾಗಿದೆ. ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದರಿಂದ ವಾಹನ ಚಾಲಕರು, ಪಾದಾಚಾರಿಗಳಿಗೆ ಸಮಸ್ಯೆಯಾಗಿದೆ ಎಂದು ಆರೋಪಿಸಿದರು.
    ರಸ್ತೆ ಡಾಂಬರೀಕರಣ, ಅಭಿವೃದ್ಧಿಗಾಗಿ ಕೆರೆ ಚೌಡೇಶ್ವರಿ ದೇವಸ್ಥಾನದ ಮುಂಭಾಗದಿಂದ ರಂಭಾಪುರಿ ಪೀಠದವರೆಗೂ ರಸ್ತೆಯನ್ನು ಅಗೆದು, ಅಲ್ಲಲ್ಲಿ ಜಲ್ಲಿ ಹಾಕಲಾಗಿದೆ. ಇದರಿಂದ ವಾಹನಗಳು ಸಂಚರಿಸಲು ತೊಂದರೆಯಾಗಿದೆ. ಸಂಪೂರ್ಣ ಧೂಳುಮಯ ವಾತಾವರಣ ನಿರ್ಮಾಣವಾಗಿದೆ. ರಸ್ತೆಯನ್ನು ಎರಡೂ ಬದಿಯಲ್ಲಿ ಅಗೆದಿದ್ದು, ಮಧ್ಯ ಭಾಗದಲ್ಲಿ ವಿಭಜಕವನ್ನು ಹಾಕಿದ್ದಾರೆ. ಇದರೊಂದಿಗೆ ಕಾಮಗಾರಿ ನಡೆಯುವ ವಾಹನಗಳನ್ನು ರಸ್ತೆ ಮೇಲೆ ನಿಲ್ಲಿಸುತ್ತಿರುವುದರಿಂದ ಇತರೆ ವಾಹನಗಳ ಸಂಚಾರಕ್ಕೂ ತೊಂದರೆಯಾಗಿದೆ ಎಂದು ದೂರಿದರು.
    ರಸ್ತೆ ದುರಸ್ತಿಗಾಗಿ ಅಗೆದಿರುವುದರಿಂದ ಅಪಘಾತಗಳು ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಿ ಕಾಮಗಾರಿ ನಡೆಸಬೇಕು. ೆ.28 ರೊಳಗೆ ರಸ್ತೆ ಅಭಿವೃದ್ಧಿ, ಡಾಂಬರೀಕರಣ ಮಾಡದಿದ್ದಲ್ಲಿ ಸಾರ್ವಜನಿಕರು, ಚಾಲಕರು ಒಗ್ಗೂಡಿ ಬೃಹತ್ ಪ್ರತಿಭಟನೆ ನಡೆಸಿ ರಸ್ತೆ ಸಂಚಾರ ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದರು.
    ಸುಧಾಕರ್ ಮೇಲ್ಪಾಲ್, ಗೌತಮ್ ಕಾನ್ಕೆರೆ, ನವೀನ್ ಪೂಜಾರಿ, ಅಬೂಬಕರ್ ಸಿದ್ದಿಕ್, ಕಷ್ಣಪ್ಪ, ಖಾಲಿದ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts