More

    28 ರಂದು ಚಿತ್ರದುರ್ಗದಲ್ಲಿಶೋಷಿತ ಸಮುದಾಯಗಳ ಜಾಗೃತಿ ಸಮಾವೇಶ

    ಆಲಮೇಲ: ದಲಿತ, ಹಿಂದುಳಿದ, ಆದಿವಾಸಿ, ಅಲೆಮಾರಿ, ಅಲ್ಪಸಂಖ್ಯಾತ ಮತ್ತು ಜನಪರ ಸಂಘಟನೆಗಳು ಜ.28 ರಂದು ಚಿತ್ರದುರ್ಗದಲ್ಲಿ ನಡೆಸುವ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯದ ಶೋಷಿತ ಸಮುದಾಯದ ಸಚಿವರು ಭಾಗವಹಿಸಲಿದ್ದಾರೆ ಎಂದು ಅಹಿಂದ ನಾಯಕ ಎಸ್.ಎಂ.ಪಾಟೀಲ ಗಣಿಹಾರ ಹೇಳಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ನೇತೃತ್ವದಲ್ಲಿ ಚಿರ್ತದುರ್ಗದಲ್ಲಿ ಇದೇ ತಿಂಗಳು ಜ.28 ರಂದು ನಡೆಯಲಿರುವ ಶೋಷಿತರ ಜಾಗೃತಿ ಸಮಾವೇಶದ ಕುರಿತು ಪೂರ್ವಭಾವಿ ಸಭೆಯಲ್ಲಿ ಮಂಗಳವಾರ ಮಾತನಾಡಿದರು.

    ಜಿಪಂ ಮಾಜಿ ಸದಸ್ಯ ಸೋಮನಾಥ ಕಳ್ಳಿಮನಿ ಮಾತನಾಡಿ, ಅವಕಾಶ ವಂಚಿತ ಜಾತಿಗಳಿಗೆ ಮೀಸಲಾತಿ ನೀಡಿ, ಸಾಮಾಜಿಕ ಸಮಾನತೆ ಸಾರಿದ ಕರ್ನಾಟಕ ಅಗ್ರಗಣ್ಯ ರಾಜ್ಯವಾಗಿದೆ. ಹಲವು ಹಿಂದುಳಿದ ವರ್ಗಗಳ ಆಯೋಗಗಳು ವೈಜ್ಞಾನಿಕ ಅಧ್ಯಯನ ನಡೆಸಿ ಮೀಸಲಾತಿ ಜಾರಿಯಾಗಿದೆ. ಆದರೆ ಬಲಾಢ್ಯರು ಶೋಷಿತರ ಪಾಲನ್ನು ಕಬಳಿಸುತ್ತಿರುವುದು ಶೋಚನೀಯ ಎಂದರು.

    ಜಿಪಂ ಮಾಜಿ ಸದಸ್ಯ ಬಿ.ಆರ್.ಯಂಟಮನ, ನಾಗರಾಜ ಲಂಬು, ರಮೇಶ ಭಂಟನೂರ, ರಾಜೇಶ್ರೀ ಯರನಾಳ, ರಾಜು ತೊರವಿ, ಪ್ರಭುಗೌಡ ಪಾಟೀಲ, ಉಮ್ಮೇಶ ಉಕ್ಕಲಿ, ಜೈಭೀಮ ನಾಯ್ಕೋಡಿ, ಶಶಿಧರ ಗಣಿಹಾರ, ವಹಾಬ ಸುಂಬಡ, ಭಾಗ್ಯವಂತ ಆಲಮೇಕರ, ಶ್ರೀಶೈಲ ಪೂಜಾರಿ, ಬಸೀರ ತಾಂಬೋಳಿ, ನಜೀರ ಆಲಗೂರ, ನಾಶೀರ ದೇವರಮನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts