More

    ನಾಲ್ಕು ಗ್ಯಾರಂಟಿ ಯೋಜನೆಗೆ 260 ಕೋಟಿ ರೂಪಾಯಿ

    ನಾಲ್ಕು, ಗ್ಯಾರಂಟಿ, 260, ಕೋಟಿ, ರೂಪಾಯಿ, crore, rupees, four, guarantees, scheme, ಯೋಜನೆ,

    ಹಾನಗಲ್ಲ: ತಾಲೂಕಿಗೆ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿವರ್ಷ 170 ಕೋಟಿ ರೂ., ಅನ್ಯಭಾಗ್ಯ 40 ಕೋಟಿ ರೂ., ಗೃಹಜ್ಯೋತಿ 30 ಕೋಟಿ ರೂ., ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ 20 ಕೋಟಿ ರೂ. ಸೇರಿದಂತೆ ಒಟ್ಟು ಈ ಪ್ರಮುಖ ನಾಲ್ಕು ಯೋಜನೆಗಳಿಗಾಗಿ 260 ಕೋಟಿ ರೂಪಾಯಿಗಳನ್ನು ಸರ್ಕಾರ ಖರ್ಚು ಮಾಡಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

    ಪಟ್ಟಣದ ಕ್ರೀಡಾಂಗಣದಲ್ಲಿ ಮಂಗಳವಾರ ತಾಲೂಕು ಆಡಳಿತ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಸಾರ್ವಜನಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಭರವಸೆಯ ಆಡಳಿತ ಮುಗಿದಿದ್ದು, ನುಡಿದಂತೆ ನಡೆಯುವ ಸರ್ಕಾರ ಆಡಳಿತಕ್ಕೆ ಬಂದಿದೆ. ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿರುವ ಜನರಿಗೆ ಆರ್ಥಿಕ ಶಕ್ತಿ ತುಂಬಲು ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ ಎಂದರು.

    ಶಾಲೆಗಳಿಗೆ ಕಟ್ಟಡ, ಉಪಕರಣ, ಸ್ಮಾರ್ಟ್‌ಕ್ಲಾಸ್, ಗ್ರಂಥಾಲಯ ಸೇರಿದಂತೆ ಇತರ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅನೇಕ ಸಂಘ, ಸಂಸ್ಥೆಗಳು ಮತ್ತು ಸಹೃದಯಿ ದಾನಿಗಳ ಮನವೊಲಿಸಲಾಗಿದೆ. ಈ ವರ್ಷ ಸರ್ಕಾರದ ಸಹಾಯವಿಲ್ಲದೇ ಪ್ರೌಢಶಾಲೆಗಳಲ್ಲಿ ಕೊರತೆ ಇರುವ ಒಂದು ಸಾವಿರ ಡೆಸ್ಕ್‌ಗಳನ್ನು ಪೂರೈಸುವ ಗುರಿ ಹೊಂದಲಾಗಿದೆ ಎಂದರು.

    ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ರವಿ ಕೊರವರ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹನೀಯರನ್ನು ನೆನೆಯುವ ದಿನವಾಗಿದೆ. ಕೃಷಿ, ತಂತ್ರಜ್ಞಾನ, ಕ್ರೀಡೆ, ಸಂಶೋಧನೆ ಇನ್ನಿತರ ಕ್ಷೇತ್ರಗಳಲ್ಲಿ ಇಡೀ ವಿಶ್ವ ಬೆರಗುಗೊಳ್ಳುವಂಥ ಸಾಧನೆ ಮೆರೆಯುತ್ತಿದೆ ಎಂದರು.

    ನಿಗದಿತ ಸಮಯದಲ್ಲಿ ಪುರಸಭೆ ತೆರಿಗೆ ಭರಿಸುತ್ತಿರುವ ಸಾರ್ವಜನಿಕರು, ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನೂ ಪ್ರೋತ್ಸಾಹಿಸಲಾಯಿತು. ಪಟ್ಟಣದ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯ ಗಮನ ಸೆಳೆದವು. ಸಮಾರಂಭಕ್ಕೂ ಮೊದಲು ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.

    ತಾಪಂ ಆಡಳಿತಾಧಿಕಾರಿ ಎಸ್.ಬಿ. ಸಂತಿ, ಸಿಪಿಐ ಎಸ್.ಆರ್. ಶ್ರೀಧರ, ಪುರಸಭೆ ಮಾಜಿ ಅಧ್ಯಕ್ಷರಾದ ಯಲ್ಲಪ್ಪ ಕಿತ್ತೂರ, ಅನಂತವಿಕಾಸ ನಿಂಗೋಜಿ, ಖುರ್ಷಿದ್ ಹುಲ್ಲತ್ತಿ, ಕೆಪಿಸಿಸಿ ಸದಸ್ಯರಾದ ಖ್ವಾಜಾಮೊಹಿದ್ದೀನ್ ಜಮಾದಾರ, ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಜಯಕುಮಾರ ದೊಡ್ಡಮನಿ, ಮಂಜು ಗೊರಣ್ಣನವರ, ಮುಖಂಡರಾದ ಚಂದ್ರಪ್ಪ ಜಾಲಗಾರ, ಗುರುರಾಜ್ ನಿಂಗೋಜಿ, ಸಂತೋಷ ಸುಣಗಾರ, ಅಧಿಕಾರಿಗಳು, ಮುಖಂಡರು, ಪುರಸಭೆ ಸದಸ್ಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts