More

    ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ಕು ಗಂಟೆಗಳಲ್ಲಿ 26 ಸೋಂಕಿತರ ಸಾವು! ಹೈ ಕೋರ್ಟ್​ ತನಿಖೆಗೆ ಒತ್ತಾಯಿಸಿದ ಆರೋಗ್ಯ ಸಚಿವ

    ಪಣಜಿ: ಚಾಮರಾಜನಗರದ ಆಸ್ಪತ್ರೆಯಲ್ಲಿ ಒಂದೇ ರಾತ್ರಿಯಲ್ಲಿ 20ಕ್ಕೂ ಹೆಚ್ಚು ಸೋಂಕಿತರು ಸಾವನ್ನಪ್ಪಿರುವ ಘಟನೆ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದೀಗ ಅದೇ ರೀತಿಯ ಘಟನೆಯೊಂದು ಗೋವಾದಲ್ಲಿ ನಡೆದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಕೇವಲ ನಾಲ್ಕು ಗಂಟೆಗಳಲ್ಲಿ 26 ಸೋಂಕಿತರು ಸಾವನ್ನಪ್ಪಿದ್ದಾರೆ.

    ಗೋವಾ ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆ(ಜಿಎಂಸಿಎಚ್​)ಯಲ್ಲಿ ಈ ರೀತಿಯ ಘಟನೆ ಸಂಭವಿಸಿದೆ. ಸೋಮವಾರ ರಾತ್ರಿ 2 ಗಂಟೆಯಿಂದ ಬೆಳಗ್ಗೆ ಆರು ಗಂಟೆಯೊಳಗೆ 26 ಸೋಂಕಿತರು ಕೊನೆಯುಸಿರೆಳೆದಿದ್ದಾರೆ. ಈ ಸಾವಿಗೆ ಕಾರಣವೇನು ಎನ್ನುವುದರ ಬಗ್ಗೆ ಹೈ ಕೋರ್ಟ್​ ತನಿಖೆ ನಡೆಸಬೇಕು ಎಂದು ಆರೋಗ್ಯ ಸಚಿವ ವಿಶ್ವಜಿತ್​ ರಾಣೆ ಒತ್ತಾಯಿಸಿದ್ದಾರೆ.

    ಆಸ್ಪತ್ರೆಯಲ್ಲಿ ಆಕ್ಸಿಜನ್​ ಖಾಲಿ ಆದ ಸಮಯಕ್ಕೂ ಮತ್ತು ಪೂರೈಕೆ ಸಮಯಕ್ಕೂ ಹೆಚ್ಚಿನ ವ್ಯತ್ಯಾಸವಾದ್ದರಿಂದಾಗಿ ಈ ಸಾವು ಸಂಭವಿಸಿರಬಹುದೆಂದು ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ತಿಳಿಸಿದ್ದಾರೆ. ಜಿಎಂಸಿಎಚ್​ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಈ ಮಾತನ್ನು ಹೇಳಿದ್ದಾರೆ.

    ಸೋಮವಾರದಂದು ಜಿಎಂಸಿಎಚ್​ ಆಸ್ಪತ್ರೆ 1200 ಜಂಬೋ ಸಿಲಿಂಡರ್​ ಆಕ್ಸಿಜನ್​ಗೆ ಬೇಡಿಕೆ ಇಟ್ಟಿತ್ತು. ಅದರಲ್ಲಿ ನಾವು 400 ಸಿಲಿಂಡರ್​ ಪೂರೈಕೆ ಮಾಡಿದ್ದೇವೆ. ಸಾವಿಗೆ ನಿಖರ ಕಾರಣ ತನಿಖೆಯ ನಂತರವೇ ತಿಳಿದುಬರಬೇಕು. ಒಂದು ವೇಳೆ ಆಕ್ಸಿಜನ್​ ಸಮಸ್ಯೆಯಾಗಿದ್ದರೂ ಅದರ ಬಗ್ಗೆ ನಮಗೆ ಆಸ್ಪತ್ರೆಯಿಂದ ಸೂಕ್ತ ವರದಿ ಬೇಕು ಎಂದು ವಿಶ್ವಜಿತ್​ ತಿಳಿಸಿದ್ದಾರೆ. (ಏಜೆನ್ಸೀಸ್)

    ಪಶ್ಚಿಮ ಬಂಗಾಳದಲ್ಲಿ ಶೂಟ್‌ಔಟ್‌: ಟಿಎಂಸಿ ಮುಖಂಡ ನಿಯೋಗಿ ಬರ್ಬರ ಹತ್ಯೆ

    ಕೋವಿಡ್‌ ನಿಯಮ ಉಲ್ಲಂಘಿಸಿ ವಾಹನ ಬಳಸಿ ಕ್ಯಾರೇ ಅನ್ನದೇ ತಿರುಗಾಟ – ಪಪ್ಪೂ ಅರೆಸ್ಟ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts