More

    ಕಿವೀಸ್‌ಗೆ 65 ವರ್ಷಗಳಿಂದ ಕಾಡುತ್ತಿರುವ ದಾಖಲೆ ಯಾವುದು?

    ವೆಲ್ಲಿಂಗ್ಟನ್: ಇದು ವಿಶ್ವ ಕ್ರಿಕೆಟ್‌ನಲ್ಲಿ ಮೂರಕ್ಕಿಳಿಯದ, ಆರಕ್ಕೇರದ ತಂಡ. ಆದರೂ ಬಲಿಷ್ಠ ತಂಡಗಳಿಗೆ ಈ ತಂಡದ ಮೇಲೆ ಹೆದರಿಕೆ ಇದ್ದೇ ಇದೆ. ಇದುವರೆಗೆ ವಿಶ್ವಕಪ್ ಜಯಿಸಲು ವಿಲವಾಗಿದ್ದರೂ ಏಕದಿನ ಮಾದರಿಯಲ್ಲಿ ಸತತ ಎರಡು ಬಾರಿ ೈನಲ್ ಪ್ರವೇಶಿಸಿ, ಬಲಿಷ್ಠ ತಂಡಗಳಲ್ಲಿ ಒಂದು ಎಂದು ನಿರೂಪಿಸಿದೆ. ಕ್ರಿಕೆಟ್ ವಲಯದಲ್ಲಿ ಬ್ಲ್ಯಾಕ್ ಕ್ಯಾಪ್ಸ್ ಎಂದೇ ಕರೆಸಿಕೊಳ್ಳುವ ನ್ಯೂಜಿಲೆಂಡ್ ತಂಡ, ಕ್ರಿಕೆಟ್‌ನಲ್ಲಿ ಕೆಟ್ಟ ದಾಖಲೆಯೊಂದಕ್ಕೆ ಸಾಕ್ಷಿಯಾಗಿತ್ತು. ಆ ದಾಖಲೆಗೀಗ ಭರ್ತಿ 65 ವರ್ಷ.

    26ಕ್ಕೆ ಕುಸಿದಿದ್ದ ಕಿವೀಸ್
    ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ನಡೆದ ಆತಿಥೇಯ ತಂಡ ಹಾಗೂ ಪ್ರವಾಸಿ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ ಕೆಟ್ಟ ಇತಿಹಾಸಕ್ಕೊಂದು ಸಾಕ್ಷಿಯಾಗಿತ್ತು. ನಾಲ್ಕೇ ದಿನಕ್ಕೆ ಅಂತ್ಯಗೊಂಡ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗಿತ್ತು. ಆ ಪಂದ್ಯದ 2ನೇ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ಕೇವಲ 26 ರನ್‌ಗಳಿಗೆ ಸರ್ವಪತನ ಕಂಡಿತ್ತು. ಇದು ಇಂಗ್ಲೆಂಡ್ ಪಾಲಿಗೆ ಸಾರ್ವಕಾಲಿಕ ದಾಖಲೆಯಾಗಿ ಉಳಿದಿದೆ. 65 ವರ್ಷ ಕಳೆದರೂ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಕನಿಷ್ಠ ಮೊತ್ತ ದಾಖಲಾದ ಪಂದ್ಯ ಎನಿಸಿಕೊಂಡಿದೆ. 1955ರ ಮಾರ್ಚ್ 25ರಿಂದ 26ರವರೆಗೆ ಈ ಪಂದ್ಯ ನಡೆದಿತ್ತು. ತವರಿನಲ್ಲಿ ಅನುಭವಿಸಿದ್ದ ಈ ಮುಖಭಂಗ ನ್ಯೂಜಿಲೆಂಡ್ ತಂಡವನ್ನು ಇನ್ನೂ ಕಾಡುತ್ತಿದೆ.

    ಇದನ್ನೂ ಓದಿ: ಈ ದೇಶದಲ್ಲಿ ಕರೊನಾ ಭಯವಿಲ್ಲದೆ ಕ್ರಿಕೆಟ್ ಶುರುವಾಗಿದೆ!

    2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ 0-1 ರಿಂದ ಹಿನ್ನೆಡೆಯೊಂದಿಗೆ ಆಕ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿತು. ಮೊದಲು ಬ್ಯಾಟಿಂಗ್ ಆತಿಥೇಯ ತಂಡ 200 ರನ್ ಗಳಿಸಿದರೆ, ಬಳಿಕ ಇಂಗ್ಲೆಂಡ್ 246 ರನ್‌ಗಳಿಗೆ ಆಲೌಟ್ ಆಯಿತು. 46 ರನ್ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆತಿಥೇಯ ತಂಡ ಕೇವಲ 26 ರನ್‌ಗಳಿಗೆ ಆಲೌಟ್ ಆಯಿತು. ಇದರಿಂದ ಪ್ರವಾಸಿ ಇಂಗ್ಲೆಂಡ್ ತಂಡ ಇನಿಂಗ್ಸ್ ಹಾಗೂ 20 ರನ್ ಗೆಲುವು ಸಾಧಿಸಿ, ಸರಣಿಯನ್ನು 2-0ಯಿಂದ ವಶಪಡಿಸಿಕೊಂಡಿತು.

    ಇದನ್ನೂ ಓದಿ: ಪದವಿಗಾಗಿ ಕ್ರಿಕೆಟ್‌ನಿಂದಲೇ ದೂರ ಹೋಗಿದ್ದ ಸ್ಪಿನ್ ಮಾಂತ್ರಿಕ

    ವಿಶ್ವ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ-ಇಂಗ್ಲೆಂಡ್ ತಂಡಗಳದ್ದೇ ದರ್ಬಾರಿನ ಸಮಯ..ಆಗಷ್ಟೇ ಕಿವೀಸ್ ತಂಡ ಕಣ್ಣು ಬಿಡುತ್ತಿದ್ದ ಸಮಯ. ಈ ವೇಳೆ ಭಾರತ, ನ್ಯೂಜಿಲೆಂಡ್‌ನಂಥ ತಂಡಗಳು ಕಣದಲ್ಲಿದ್ದರೂ ಆಟಕ್ಕುಂಟು ಲೆಕ್ಕಕ್ಕೆ ಇರಲಿಲ್ಲ. ನ್ಯೂಜಿಲೆಂಡ್ 1930ರಲ್ಲಿ ಮೊದಲ ಟೆಸ್ಟ್ ಆಡಿದರೆ, ಭಾರತ 1931ರಲ್ಲಿ ಮೊದಲ ಪಂದ್ಯವಾಡಿತು. ಮೊದಲ ಗೆಲುವಿಗೆ ಭಾರತ 21 ವರ್ಷ ತೆಗೆದುಕೊಂಡರೆ, ನ್ಯೂಜಿಲೆಂಡ್ 26 ವರ್ಷಗಳ ಬಳಿಕ ಮೊದಲ ಟೆಸ್ಟ್ ಗೆಲುವು ಕಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts