More

    26ರಿಂದ ಫೆ.23ರವರೆಗೆ ಸಂವಿಧಾನ,ದೇಶದ ಸಮಗ್ರತೆ ಸಾರುವ ವಿಶೇಷ ಜಾಗೃತಿ ಕಾರ್ಯಕ್ರಮ


    ಚಿತ್ರದುರ್ಗ: ನಗರದಲ್ಲಿ ಜ.26ರಂದು ಆಯೋಜಿಸುವ ಗಣರಾಜ್ಯೋತ್ಸವದ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಆಚರಿಸಬೇಕು. ಇದಕ್ಕಾಗಿ ಅಗತ್ಯ ಕ್ರಮಗಳನ್ನು ಕೈ ಗೊಳ್ಳುವಂತೆ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅವರು ಅಧಿಕಾರಿಗಳು ಸೂಚಿಸಿದರು.
    ಗಣರಾಜ್ಯೋತ್ಸವ ಆಚರಣೆ ಕುರಿತಂತೆ ಡಿಸಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವ ರು, ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
    ಅಂದು ಬೆಳಗ್ಗೆ 9ಗಂಟೆಗೆ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಸಮಾರಂಭವನ್ನು ಏರ್ಪಡಿಸಲಾಗಿದೆ. ದೇಶಭಕ್ತಿ,ಸಂವಿಧಾನದ ಮಹತ್ವವನ್ನು ಜನರ ಮನ ಮುಟ್ಟುವ ರೀತಿಯಲ್ಲಿ ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಬೇಕು.ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಸಾಧಕರನ್ನು ಗುರುತಿಸಿ ಸನ್ಮಾನಿಸ ಬೇಕೆಂದರು. ಸಂಜೆ ತರಾಸು ರಂಗಮಂದಿರದಲ್ಲೂ ಉತ್ತಮ ಸಾಂಸ್ಕೃತಿಕ ಕಾ ರ್ಯಕ್ರಮಗಳನ್ನು ಆಯೋಜಿಸುವಂತೆ ಡಿಡಿಪಿಐ ಕೆ.ರವಿಶಂಕರ್‌ರೆಡ್ಡಿ ಅವರಿಗೆ ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿದರು.
    ಸಂವಿಧಾನ ಜಾಗೃತಿ
    ಗಣರಾಜ್ಯೋತ್ಸವದ ಅಂಗವಾಗಿ ಸಂವಿಧಾನ ಮತ್ತು ದೇಶದ ಸಮಗ್ರತೆ ಸಾರುವ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಜ.26ರಿಂದ ಫೆ.23ರವರೆಗೆ ಜಿಲ್ಲಾದ್ಯಂತ ಎಲ್ಲ ಗ್ರಾಪಂ ಹಾಗೂ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಕೇಂದ್ರಸ್ಥಾನಗಳಲ್ಲಿ ಹಮ್ಮಿಕೊಳ್ಳಲು ಸರ್ಕಾರ ನಿರ್ದೇ ಶನ ನೀಡಿದೆ. ಈ ವಿಶೇಷ ಅಭಿಯಾನಕ್ಕೆ 26ರಂದು ಜಿಲ್ಲಾ ಉಸ್ತುವಾರಿ ಸಚಿವರ ಡಿ.ಸುಧಾಕರ್ ಚಾಲನೆ ನೀಡುವರು.
    ಅಭಿಯಾನದಲ್ಲಿ ಸಂವಿಧಾನ ಮತ್ತು ದೇಶದ ಸಮಗ್ರತೆ ಬಿಂಬಿಸುವ ಸಂದೇಶಗಳೊಂದಿಗೆ, ಸ್ತಬ್ಧ ಚಿತ್ರ,ಕಲಾತಂಡಗಳು ಭಾಗವಹಿಸಲಿ ವೆ. ಜಿಲ್ಲೆಯ ಎಲ್ಲ 189 ಗ್ರಾಪಂಗಳು ಹಾಗೂ 7 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಭಿಯಾನ ನಡೆಯಲಿದೆ ಎಂದು ಡಿಸಿ ತಿಳಿಸಿದರು.
    ಜಿಪಂ ಸಿಇಒ ಎಸ್.ಜೆ.ಸೋಮಶೇಖರ್,ಜಿಲ್ಲಾ ಸಶಸ್ತ್ರ ಪೊಲೀಸ್‌ನ ಡಿವೈಎಸ್‌ಪಿ ಎಸ್.ಎಸ್.ಗಣೇಶ್,ಮೋಕ್ಷಾರುದ್ರ ಸ್ವಾಮಿ,ತಿಪ್ಪೇ ಸ್ವಾಮಿ,ಆನಂದಕುಮಾರ್,ಟಿ.ಕೆ.ಬಸವರಾಜ್ ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts