More

    ಸಂವಿಧಾನ ರಕ್ಷಣೆಗಾಗಿ ಬೆಂಬಲ ಅನಿವಾರ್ಯ

    ಎನ್.ಆರ್.ಪುರ: ಸಂವಿಧಾನ ನಮ್ಮ ಧರ್ಮವಾಗಿದ್ದು, ಇದರಿಂದಲೇ ದೇಶದಲ್ಲಿ ಶಾಂತಿ ನೆಲೆಸಿದೆ ಎಂದು ಎಪಿಎಂಸಿ ನಿರ್ದೇಶಕ ಹಾಗೂ ಜಿಲ್ಲಾ ದಲಿತ ಮುಖಂಡ ಎಚ್.ಎಂ.ಶಿವಣ್ಣ ಹೇಳಿದರು.
    ಹಿಂದಿನಿಂದಲೂ ಕಾಂಗ್ರೆಸ್ ದಲಿತರ, ಹಿಂದುಳಿದವರ, ಬಡವರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಂವಿಧಾನ ರಕ್ಷಣೆಗಾಗಿ ಕಾಂಗ್ರೆಸ್‌ನ್ನು ದಲಿತ ಸಮುದಾಯ ಬೆಂಬಲಿಸುವ ಅನಿವಾರ್ಯತೆ ಇದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಬ್ಯಾಂಕ್‌ಗಳನ್ನು ರಾಷ್ಟ್ರೀಕೃತಗೊಳಿಸಿ ಎಲ್ಲರೂ ಬ್ಯಾಂಕಿನಲ್ಲಿ ವ್ಯವಹರಿಸುವಂತೆ ಮಾಡಿದರು. ಕೃಷಿ ಕಲ್ಯಾಣಕ್ಕೆ, ದಲಿತ ಹಾಗೂ ಬಡವರ ಪರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇದರಿಂದ ದಲಿತ ವರ್ಗದವರಿಗೆ ಸಾಮಾಜಿಕ, ಆರ್ಥಿಕವಾಗಿ ಮುಂದುವರಿಯಲು ಸಾಧ್ಯವಾಗಿದೆ ಎಂದರು.
    ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯ ಸರ್ಕಾರದಂತೆ ಗ್ಯಾರಂಟಿ ಭಾಗ್ಯಗಳ ಜತೆಯಲ್ಲಿ ಕೇಂದ್ರದಿಂದ ಪಂಚ ನ್ಯಾಯಗಳು ನಮಗೆಲ್ಲರಿಗೂ ದೊರೆಯಲಿವೆ ಎಂದು ತಿಳಿಸಿದರು.
    ಡಾ. ಬಿ.ಆರ್.ಅಂಬೇಡ್ಕರ್ ದೇಶಕ್ಕೆ ಸಂವಿಧಾನ ನೀಡಿರುವುದರಿಂದಲೇ ಎಲ್ಲ ವರ್ಗದವರು ಶಾಂತಿ, ನೆಮ್ಮದಿಯಿಂದ ಬದುಕುತ್ತಿದ್ದಾರೆ. ಸಂವಿಧಾನ ದಲಿತರ ಧರ್ಮವಾಗಿದೆ ಎಂದು ದಲಿತ ಮುಖಂಡ ಶೆಟ್ಟಿಕೊಪ್ಪ ಎಂ.ಮಹೇಶ್ ಹೇಳಿದರು.
    ಸಂವಿಧಾನವನ್ನು ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಕಾಂಗ್ರೆಸ್ ಎಐಸಿಸಿ ಅಧ್ಯಕ್ಷರನ್ನಾಗಿ ದಲಿತ ಸಮುದಾಯದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾಡಿರುವುದು ದಲಿತ ಸಮುದಾಯದ ಮೇಲಿಟ್ಟಿರುವ ಕಾಳಜಿ ತೋರಿಸುತ್ತದೆ ಎಂದರು.
    ಜಯಪ್ರಕಾಶ್ ಹೆಗ್ಡೆ ಅವರಿಗೆ ಜಿಲ್ಲೆಯಲ್ಲಿನ ಕಸ್ತೂರಿ ರಂಗನ್ ವರದಿ, ಹುಲಿ ಯೋಜನೆ, ಒತ್ತುವರಿ ಸಮಸ್ಯೆಗಳ ಬಗ್ಗೆ ಸಂಪೂರ್ಣ ಅರಿವಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ದಲಿತ ಸಮುದಾಯದ ಮತಗಳೇ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದ್ದವು ಎಂದರು.
    ಎಸ್ಸಿ, ಎಸ್ಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಲ್.ಮುಕುಂದ, ಭೋವಿ ಸಮುದಾಯದ ಜಿಲ್ಲಾ ನಾಯಕ ಚಿತ್ರಪ್ಪ ಯರಬಾಳ್, ಮುಖಂಡರಾದ ಎಚ್.ಮಹೇಶ್, ಹರೀಶ್, ರಮೇಶ್, ಲಕ್ಷ್ಮಣ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts