More

    26ರಂದು ಕರ್ನಲ್ ಪುಟ್ಟಿಚಂಡ ಗಣಪತಿ ಹೆಸರು ನಾಮಕರಣ

    ವಿರಾಜಪೇಟೆ: ಮಾಜಿ ಸೈನಿಕರ ಸಹಕಾರ ಸಂಘ, ಲಯನ್ಸ್ ಕ್ಲಬ್ ಸಹಯೋಗದಲ್ಲಿ ಜ.26ರಂದು ವಿರಾಜಪೇಟೆ ಪುರಸಭೆ ವ್ಯಾಪ್ತಿಯ ವಿರಾಜಪೇಟೆ ಮೂರ್ನಾಡು-ಮಡಿಕೇರಿ ರಸ್ತೆಗೆ ಮಹಾವೀರ ಚಕ್ರ ಪುರಸ್ಕೃತ ಕರ್ನಲ್ ಪುಟ್ಟಿಚಂಡ ಗಣಪತಿ ಅವರ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಹೇಳಿದರು.


    1988ರಲ್ಲಿ ಶ್ರೀಲಂಕಾದಲ್ಲಿ ಎಲ್‌ಟಿಟಿ ಜತೆ ನಡೆದ ಸಂಘರ್ಷದಲ್ಲಿ ಶಾಂತಿ ಪಾಲನಾ ಪಡೆಯ ಭಾರತ ಸೇನೆಯ ನೇತೃತ್ವ ವಹಿಸಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವಾಲಯ ಮಹಾವೀರ ಚಕ್ರ ನೀಡಿ ಗೌರವಿಸಿತ್ತು. ಕರ್ನಾಟಕದಲ್ಲಿ ಸ್ಕ್ವಾರ್ಡನ್ ಲೀಡರ್ ಅಜ್ಜಮಾಡ ದೇವಯ್ಯ ಅವರನ್ನು ಹೊರತುಪಡಿಸಿದರೆ ಕರ್ನಲ್ ಪುಟ್ಟಿಚಂಡ ಗಣಪತಿ ಎರಡನೆಯವರಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಹೆಸರನ್ನು ಮೂರ್ನಾಡು ರಸ್ತೆಗೆ ನಾಮಕರಣ ಮಾಡುವ ಸಂದರ್ಭ ಎಲ್ಲ ನಿವೃತ್ತ ಸೈನಿಕರು ಹಾಜರಿರಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

    ಸಂಘದ ಕಾರ್ಯದರ್ಶಿ ಪುಗ್ಗೆರ ನಂದಾ, ನಿರ್ದೇಶಕರಾದ ಪಟ್ರಪಂಡ ರಮೇಶ್ ಕರುಂಬಯ್ಯ, ರಾಜಚಂದ್ರಶೇಖರ್, ಚೆಂದಂಡ ಕಾರ್ಯಪ್ಪ, ಎಚ್.ಕೆ.ಅಪ್ಪಯ್ಯ, ಮುಂಡ್ಯೋಳಂಡ ಸುರೇಶ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts