More

    ದೇಶಾದ್ಯಂತ ತಬ್ಲಿಘಿ ಜಮಾತ್​ ನಂಟಿನ 25,000 ಜನರಿಗೆ ಗೃಹಬಂಧನ, 1,445 ಜನರಿಗೆ ಸೋಂಕು ದೃಢ

    ನವದೆಹಲಿ: ನಿಜಾಮುದ್ದೀನ್​ ಮರ್ಕಜ್​ನಲ್ಲಿ ನಡೆದ ತಬ್ಲಿಘಿ ಜಮಾತ್​ನಲ್ಲಿ ಪಾಲ್ಗೊಂಡಿದ್ದವರು ಹಾಗೂ ಅವರ ಸಂಪರ್ಕಕ್ಕೆ ಬಂದ 25,000ಕ್ಕೂ ಅಧಿಕ ಜನರನ್ನು ಗೃಹ ಬಂಧನದಲ್ಲಿ (ಕ್ವಾರಂಟೈನ್) ಇಡಲಾಗಿದೆ.

    ಇಂಥದ್ದೊಂದು ಆಘಾತಕಾರಿ ಮಾಹಿತಿ ಈಗ ಬಹಿರಂಗಗೊಂಡಿದೆ. ಮಾರ್ಚ್​ ತಿಂಗಳುದ್ದಕ್ಕೂ ನಡೆದಿದ್ದ ತಬ್ಲಿಘಿ ಜಮಾತ್​ನಲ್ಲಿ ದೇಶ ವಿದೇಶದ 9000ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ದೇಶಾದ್ಯಂತ ಲಾಕ್​​ಡೌನ್​ ಘೋಷಿಸಿದ ಬಳಿಕವೂ ವಿದೇಶಿಯರು ಸೇರಿ 1,500ಕ್ಕೂ ಅಧಿಕ ಜನರು ಇಲ್ಲಿದ್ದರು.

    ಜಮಾತ್​ನಲ್ಲಿ ಪಾಲ್ಗೊಂಡು ತಮ್ಮೂರುಗಳಿಗೆ ತೆರಳಿದ್ದ ಹಲವರಲ್ಲಿ ಸೋಂಕು ಕಾಣಿಸಿಕೊಂಡು, ಕೆಲವರು ಮೃತಪಟ್ಟ ಬಳಿಕ ಎಚ್ಚೆತ್ತ ಸರ್ಕಾರ ಇಲ್ಲಿದ್ದ ಎಲ್ಲರನ್ನೂ ಕ್ವಾರಂಟೈನ್​ಗೆ ಗುರಿಪಡಿಸಿತ್ತು.

    ಕರ್ನಾಟಕವೂ ಸೇರಿ 17ಕ್ಕೂ ಹೆಚ್ಚು ರಾಜ್ಯಗಳಲ್ಲಿ ಪತ್ತೆಯಾಗಿದ್ದ 1,445ಕ್ಕೂ ಅಧಿಕ ಕರೊನಾ ಸೋಂಕಿತರು ಜಮಾತ್​ನಲ್ಲಿ ಪಾಲ್ಗೊಂಡವರೇ ಆಗಿದ್ದಾರೆ. ಹೀಗಾಗಿ ಇವರ ಸಂಪರ್ಕಕ್ಕೆ ಬಂದಿದ್ದ 25,000ಕ್ಕೂ ಅಧಿಕ ಜನರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಈ ಮೂಲಕ ತಬ್ಲಿಘ್​ನ ಕರೊನಾ ಸರಣಿ ಯಾವಾಗ ಕೊನೆಯಾಗುವುದೋ ಎಂಬ ಚಿಂತೆ ಸರ್ಕಾರವನ್ನು ಕಾಡತೊಡಗಿದೆ.

    ದೇಶದಲ್ಲಿ ಪ್ರಸ್ತುತ 4,067 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ ತಬ್ಲಿಘ್​ ಜಮಾತ್​ನ ಕೊಡುಗೆ ಶೇ.35ಕ್ಕೂ ಹೆಚ್ಚಾಗಿದೆ. ಜಮಾತ್​ನಲ್ಲಿ ಪಾಲ್ಗೊಂಡು ಇನ್ನೂ ಆರೋಗ್ಯ ತಪಾಸಣೆಗೆ ಒಳಗಾಗದವರು ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮನವಿ ಮಾಡಿವೆ.

    ಒಂದು ವೇಳೆ ತಪಾಸಣೆ ಮಾಡಿಸಿಕೊಳ್ಳದೇ, ನಂತರ ಸೋಂಕಿತರಾಗಿರುವುದು ಗೊತ್ತಾದಲ್ಲಿ ಅಂಥ ವ್ಯಕ್ತಿಗಳ ವಿರುದ್ಧ ಹತ್ಯೆಯತ್ನ ಆರೋಪಿಸಿ ಪ್ರಕರಣ ದಾಖಲಿಸಲಾಗುವುದು ಎಂದು ಕೆಲ ರಾಜ್ಯ ಸರ್ಕಾರಗಳು ಎಚ್ಚರಿಕೆ ನೀಡಿವೆ.

    14.1 ಲಕ್ಷ ಕೋಟಿ ಡಾಲರ್ ಆರ್ಥಿಕ ನಷ್ಟ ಸಂಭವಿಸಲಿದೆ ಎಂದು ಎಚ್ಚರಿಸಿದ ಏಷ್ಯನ್ ಡೆವಲಪ್​ಮೆಂಟ್ ಬ್ಯಾಂಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts