More

    14.1 ಲಕ್ಷ ಕೋಟಿ ಡಾಲರ್ ಆರ್ಥಿಕ ನಷ್ಟ ಸಂಭವಿಸಲಿದೆ ಎಂದು ಎಚ್ಚರಿಸಿದ ಏಷ್ಯನ್ ಡೆವಲಪ್​ಮೆಂಟ್ ಬ್ಯಾಂಕ್

    ನವದೆಹಲಿ: ಜಗತ್ತಿನಾದ್ಯಂತ ಭಾರಿ ತಲ್ಲಣ ಸೃಷ್ಟಿಸಿರುವ ಕರೊನಾ ವೈರಸ್‌ ದೇಶದ ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬೀರಿದ್ದು, ಮುಂಬರುವ ದಿನಗಳಲ್ಲಿ ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುವ ಸಾಧ್ಯತೆ ಇದೆ ಎಂದು ಏಷ್ಯನ್ ಡೆವಲಪ್‌ಮೆಂಟ್‌ ಬ್ಯಾಂಕ್ ಎಚ್ಚರಿಕೆ ನೀಡಿದೆ. ಅಮೆರಿಕ, ಯುರೋಪ್ ಮತ್ತು ಇತರ ಪ್ರಮುಖ ದೇಶಗಳ ಆರ್ಥಿಕತೆಯ ಮೇಲೆ ಭಾರಿ ಪೆಟ್ಟು ಬಿದ್ದಿರುವ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ 1 4.1 ಟ್ರಿಲಿಯನ್ ಡಾಲರ್‌ನಷ್ಟು (ಸುಮಾರು 300 ಲಕ್ಷ ಕೋಟಿ) ನಷ್ಟವಾಗಲಿದೆ ಎಂದಿರುವ ಬ್ಯಾಂಕ್, ಈ ಮೊತ್ತವು ಜಗತ್ತಿನ ಉತ್ಪಾದನೆಯ ಶೇ.5ಕ್ಕೆ ಸಮವಾಗಿದೆ ಎಂದು ವಿಶ್ಲೇಷಿಸಿದೆ.

    ಇಷ್ಟು ಪ್ರಮಾಣದ ಆರ್ಥಿಕ ಕುಸಿತವು ಈ ಶತಮಾನ ಅತ್ಯಂತ ಭೀಕರ ಕುಸಿತ ಎಂದು ಅದು ಬಣ್ಣಿಸಿದೆ. ಆರೋಗ್ಯ ಸೇವೆ, ಶಿಕ್ಷಣ ಕ್ಷೇತ್ರಗಳಲ್ಲಿ ಉಂಟಾಗಿರುವ ನಷ್ಟವನ್ನು ಗಣನೆಗೆ ತೆಗೆದುಕೊಂಡರೆ ನಷ್ಟದ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ, ಭವಿಷ್ಯದ ದೃಷ್ಟಿಯಿಂದ ಈಗಲೇ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ. ಇಲ್ಲದಿದ್ದರೆ ಸಮಸ್ಯೆ ಇನ್ನಷ್ಟು ಬಿಗಡಾಯಿಸಬಹುದು ಎಂದು ಅದು ಎಚ್ಚರಿಸಿದೆ. ದೀರ್ಘಾವಧಿಯ ಆರ್ಥಿಕ ಸಮಸ್ಯೆಯ ಕುರಿತಂತೆಯೂ ಭಾರಿ ಚಿಂತನೆ ನಡೆಸುವ ಅವಶ್ಯಕತೆ ಇದೆ ಎಂದು ಬ್ಯಾಂಕ್‌ ಹೇಳಿದೆ.

    ಕರೊನಾ ವೈರಸ್‌ನಿಂದಾಗಿ ಪ್ರಮುಖ ದೇಶಗಳಲ್ಲಿ ಜಾರಿಯಲ್ಲಿ ಇರುವ ಲಾಕ್‌ಡೌನ್‌ ಅವಧಿ ಅಲ್ಪಾವಧಿಯದಾಗಿದ್ದರೆ ನಷ್ಟದ ಪ್ರಮಾಣವು ಕಡಿಮೆಯಾಗಲಿದೆ. ಆರ್ಥಿಕ ಸಂಕಷ್ಟದ ತೀವ್ರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರೀಯ ಬ್ಯಾಂಕ್‌ಗಳು ಮತ್ತು ಸರ್ಕಾರಗಳು ಕಾರ್ಯಪ್ರವೃತ್ತವಾಗಿದೆ. ಉತ್ತೇಜನಾ ಕೊಡುಗೆ ಮತ್ತು ಹಣಕಾಸು ನೀತಿಗಳ ಸಡಿಲಿಕೆಯಿಂದ ಆರ್ಥಿಕತೆಗೆ 375 ಲಕ್ಷ ಕೋಟಿ ರೂಪಾಯಿ ಮೊತ್ತದ ನೆರವು ಘೋಷಿಸಿದೆ. ಇಷ್ಟೊಂದು ನೆರವಿನ ಹೊರತಾಗಿಯೂ ಕರೊನಾ ತಂದಿಟ್ಟ ಭೀತಿಯಿಂದಾಗಿ ಷೇರುಪೇಟೆಯ ವಹಿವಾಟುದಾರರಲ್ಲಿ ಆತಂಕ ಕಾಡುತ್ತಿದೆ ಎಂದು ಬ್ಯಾಂಕ್‌ ಹೇಳಿದೆ.

    ವಿಶ್ವಾದ್ಯಂತ ಲಾಕ್‌ಡೌನ್‌ ಇರುವ ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಇದರಿಂದಾಗಿ ಪ್ರತಿ ದೇಶದ ಆರ್ಥಿಕ ವೃದ್ಧಿಯ ದರ ಕುಸಿಯುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಏಷ್ಯಾದ ವೃದ್ಧಿ ದರವು ಶೇ.2.2ರಷ್ಟು ಆಗಲಿದೆ. 1998ರಲ್ಲಿ ಉಂಟಾಗಿದ್ದ ಏಷ್ಯಾದ ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ ವೃದ್ಧಿ ದರವು ಶೇ.1.7ರಷ್ಟಿತ್ತು. ಏನೇ ಆದರೂ ಅನಿಶ್ಚಿತತೆ ಕಾಡುತ್ತಿದೆ. ಭವಿಷ್ಯದ ಬಗ್ಗೆ ಏನೂ ಹೇಳಲಾಗದು ಎಂದು ಬ್ಯಾಂಕ್‌ನ ಮುಖ್ಯ ಆರ್ಥಿಕ ತಜ್ಞ ವಸುಯುಕಿ ಹೇಳಿದ್ದಾರೆ. (ಏಜೆನ್ಸೀಸ್)

    ಮಹಿಳೆಯರೇ ಮನೆಯಲ್ಲಿರುವ ಗಂಡುಮಕ್ಳನ್ನು ಹದ್ದುಬಸ್ತಿನಲ್ಲಿಡಿ- ರಸ್ತೆಗಿಳಿಯಲು ಬಿಡಬೇಡಿ ಎಂದ ಮಲೆಯಾಳಿ ನಟ ಸೂರಜ್​ ವೆಂಜರಮೂಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts