More

    ನಾಳೆಯೊಳಗೆ 2500 ಬೆಡ್​ಗಳ ವ್ಯವಸ್ಥೆ ಮಾಡಬೇಕು…’; ಖಾಸಗಿ ಆಸ್ಪತ್ರೆಗಳಿಗೆ ಸಿಎಂ ಬಿಎಸ್​ವೈ ಸೂಚನೆ

    ಬೆಂಗಳೂರು: ಕೊವಿಡ್​-19 ನಿಯಂತ್ರಣ, ಚಿಕಿತ್ಸೆಗೆ ಸಂಬಂಧಪಟ್ಟಂತೆ ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಖಾಸಗಿ ಆಸ್ಪತ್ರೆಗಳ ಮಾಲೀಕರೊಂದಿಗೆ ಚರ್ಚೆ ನಡೆಸಿದರು, ಹಾಗೇ ನಾಳೆಯೊಳಗೆ ಕೊವಿಡ್​-19 ಸೋಂಕಿತರಿಗಾಗಿ 2500 ಬೆಡ್​ಗಳ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದ್ದಾರೆ.

    ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಇಂದು ಖಾಸಗಿ ಆಸ್ಪತ್ರೆ ಮಾಲೀಕರೊಂದಿಗೆ ಸಭೆ ನಡೆಸಿದ್ದೇವೆ. ನಾಳೆಯೊಳಗೆ 2500 ಬೆಡ್​ಗಳು, ಎಲ್ಲ ತರಹದ ಚಿಕಿತ್ಸೆಯ ವ್ಯವಸ್ಥೆ ಮಾಡಬೇಕು ಎಂದು ಹೇಳಿದ್ದೇನೆ. ಅದಕ್ಕೆ ಅವರೂ ಒಪ್ಪಿಕೊಂಡು, ಈ ಬಗ್ಗೆ ನಾವೆಲ್ಲರೂ ಮತ್ತೊಮ್ಮೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.

    ಅಷ್ಟೇ ಅಲ್ಲ, ಕೊವಿಡ್​-19 ಚಿಕಿತ್ಸೆಗೆ ನಿಗದಿ ಪಡಿಸಿದ ಹಣಕ್ಕಿಂತ ಜಾಸ್ತಿ ಹಣ ಪಡೆಯದೆ ಇರಲು ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಿದ್ದೇವೆ. ಅವರು ಹೆಚ್ಚಿನ ಹಣ ಪಡೆಯುವುದಿಲ್ಲ ಎಂದು ಹೇಳಿದರು. ದೆಹಲಿಯಲ್ಲಿ ಶೀಘ್ರವೇ ಪ್ಲಾಸ್ಮಾ ಬ್ಯಾಂಕ್​ ನಿರ್ಮಾಣ: ಮೃತ ವೈದ್ಯನ ಕುಟುಂಬಕ್ಕೆ 1 ಕೋಟಿ ರೂ.ಪರಿಹಾರ

    ಜನರು ಭಯ ಪಡುವ ಅಗತ್ಯವಿಲ್ಲ. ರಾಜ್ಯದಲ್ಲಿ ಕರೊನಾ ನಿಯಂತ್ರಣದಲ್ಲಿದೆ. ಮುಂಬೈ, ದೆಹಲಿ, ಚೆನ್ನೈ,‌ ಕೊಲ್ಕತ್ತಾ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ 3321 ಸೋಂಕಿತರ ಪೈಕಿ 422 ಮಂದಿ ಗುಣಮುಖರಾಗಿದ್ದಾರೆ. 81 ಸೋಂಕಿತರು ಸಾವನ್ನಪ್ಪಿದ್ದಾರೆ. ನಾವೂ ಕೂಡ ಕರೊನಾ ನಿಯಂತ್ರಣಕ್ಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತಿದ್ದೇವೆ. ಮನೆಮನೆಗೆ ಹೋಗಿ ಪರಿಶೀಲನೆ ನಡೆಸುತ್ತಿದ್ದೇವೆ. ಅಗತ್ಯ ಇದ್ದವರನ್ನು ಆಸ್ಪತ್ರೆಗೆ ದಾಖಲಿಸಿ, ಒಳ್ಳೆಯ ಚಿಕಿತ್ಸೆ, ಆಹಾರ ನೀಡುತ್ತಿದ್ದೇವೆ. ಜನರೂ ಕೂಡ ಸಹಕರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್​ ಧರಿಸಬೇಕು ಎಂದು ಹೇಳಿದರು.

    ಮಗಳಿಗೆ ನಿದ್ದೆ ಮಾತ್ರೆ ಕೊಟ್ಟು ರಾತ್ರಿಯಿಡೀ ಅತ್ಯಾಚಾರ ಮಾಡಿದ ಕಾಮುಕ ತಂದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts