More

    ಭೂಸ್ವಾಧೀನ ವಿರೋಧಿಸಿ ಹಲಕುರ್ಕಿ ಗ್ರಾಮದಲ್ಲಿ 24 ದಿನದಿಂದ ಧರಣಿ : ಗಂಭೀರವಾಗಿ ಪರಿಗಣಿಸಲು ಸಚಿವರಿಗೆ ಮನವಿ

    ಬಾದಾಮಿ : ಕೈಗಾರಿಕೆ ಪ್ರದೇಶಕ್ಕಾಗಿ ಭೂಸ್ವಾಧೀನ ವಿರೋಧಿಸಿ ತಾಲೂಕಿನ ಹಲಕುರ್ಕಿ ಗ್ರಾಮದಲ್ಲಿ ರೈತರು ನಡೆಸಿರುವ ಧರಣಿ ಸತ್ಯಾಗ್ರಹ ಗುರುವಾರಕ್ಕೆ 24 ದಿನ ಪೂರೈಸಿತು.

    ರೈತ ಮಹಿಳೆಯರು ಮಾತನಾಡಿ, ನಮ್ಮ ಧರಣಿ ಸತ್ಯಾಗ್ರಹವನ್ನು ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರು ಗಂಭೀರವಾಗಿ ಪರಿಗಣಿಸಿ ಭೂಸ್ವಾಧೀನ ಪ್ರಕ್ರಿಯೆ ತಕ್ಷಣ ಕೈಬಿಡಬೇಕು. ಮಹಾರಕಿ ಜಮೀನು, ಚಾಕರಿ ಜಮೀನು, ಪೂಜಾರಿಕೆ ಜಮೀನುಗಳ ಸ್ವಾಧೀನಕ್ಕೆ ಕೆಐಎಡಿಬಿಯಿಂದ ನಮಗೆ ನೋಟಿಸ್ ಬಂದಿದೆ. ಸಚಿವರು ನಮ್ಮ ಹೋರಾಟವನ್ನು ಲಘುವಾಗಿ ಪರಿಗಣಿಸಿ ಭೂಸ್ವಾಧೀನ ಪ್ರಕ್ರಿಯೆ ಕೆಐಎಡಿಬಿಯಿಂದ ಮುಂದುವರಿಸಿದರೆ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

    ಗುರುವಾರದ ಧರಣಿಯಲ್ಲಿ ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಮಹಿಳೆಯರು ಭಾಗವಹಿಸಿದ್ದರು. ಮಹಾದೇವಿ ತಳವಾರ, ರತ್ನವ್ವ ಶಾಸಣ್ಣವರ, ಗಂಗವ್ವ ಉಂಡಿ, ನೀಲವ್ವ ಚಿಮ್ಮನಕಟ್ಟಿ, ಶಾವಕ್ಕ ಪೂಜಾರ, ಅಂಬಾದೇವಿ ನಾಯ್ಕರ, ದ್ಯಾಮವ್ವ ಪೂಜಾರ, ಅಕ್ಕಮಹಾದೇವಿ ನಾಯ್ಕರ, ಯಲ್ಲವ್ವ ನಾಯ್ಕರ, ರೇಣುಕವ್ವ ಬಳಗೋಡ, ದೇವಕ್ಕೆವ್ವ ಮುಚ್ಚಳಗುಡ್ಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts