More

    24 ತಾಸು ಕಾರ್ಯನಿರ್ವಹಿಸಲು ಸನ್ನದ್ಧರಾಗಿ

    ಶಿವಮೊಗ್ಗ: ಜಿಲ್ಲೆಯಲ್ಲಿ ಕರೊನಾ ಹಾವಳಿ ತೀವ್ರವಾಗಿಲ್ಲ. ಆದರೆ ನೆರೆಯ ಜಿಲ್ಲೆಗಳಿಂದಲೂ ಕರೊನಾ ವೈರಸ್ ಪತ್ತೆಗಾಗಿ ಮಾದರಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸುತ್ತಿರುವುದರಿಂದ ಶೀಘ್ರವಾಗಿ ಪರೀಕ್ಷೆ ನಡೆಸಿ ವರದಿ ಕಳುಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಆರೋಗ್ಯ ಇಲಾಖೆ ಹಾಗೂ ಸಿಮ್್ಸ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಶನಿವಾರ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಕರೊನಾ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ಬಳಿಕ ಅಲ್ಲಿನ ವೈದ್ಯರೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಕರೊನಾ ನಿರ್ವಹಣೆಗೆ ಅಗತ್ಯವಿರುವ ಕಿಟ್, ಮಾಸ್ಕ್ ಸೇರಿ ಎಲ್ಲ ಸಲಕರಣೆಗಳೊಂದಿಗೆ 24 ತಾಸು ಕಾರ್ಯನಿರ್ವಹಿಸಲು ಸನ್ನದ್ಧರಾಗಿರಬೇಕೆಂದು ತಿಳಿಸಿದರು.

    ಕರೊನಾ ವೈರಸ್ ಪತ್ತೆಗೆ ಅಗತ್ಯವಾದ ಕಿಟ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಇನ್ನಷ್ಟು ಮಾಸ್ಕ್​ಗಳನ್ನು ತರಿಸಬೇಕು. ಆರೋಗ್ಯ ಇಲಾಖೆಯಲ್ಲಿ ಹೆಚ್ಚುವರಿಯಾಗಿ ಲಭ್ಯವಿರುವ ಮಾಸ್ಕ್​ಗಳನ್ನು ಮೆಗ್ಗಾನ್ ಆಸ್ಪತ್ರೆಗೆ ಒದಗಿಸುವಂತೆ ಡಿಎಚ್​ಒ ಡಾ. ರಾಜೇಶ್ ಸುರಗೀಹಳ್ಳಿ ಅವರಿಗೆ ಸೂಚಿಸಿದರು.

    ಕರೊನಾ ವೈರಸ್ ನಿರ್ವಹಣೆಗೆ ಈಗಾಗಲೆ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಸಿದ್ಧಪಡಿಸಲಾಗಿದೆ. ಇದೇ ರೀತಿ ವೃತ್ತಿಪರವಾಗಿ ಪ್ರಕರಣಗಳನ್ನು ನಿರ್ವಹಿಸಬೇಕು. ಈಗಾಗಲೆ ಮೆಗ್ಗಾನ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರಿಗೆ ಹಾಗೂ ಇತರರಿಗೆ ತರಬೇತಿ ನೀಡಲಾಗಿದೆ. ಆಸ್ಪತ್ರೆಗೆ ಭೇಟಿ ನೀಡುವ ಪ್ರತಿಯೊಬ್ಬರ ಪ್ರಯಾಣ ಹಾಗೂ ರೋಗದ ವಿವರಗಳನ್ನು ಪರಿಶೀಲಿಸಿ ದಾಖಲಿಸಬೇಕೆಂದರು.

    ಕರೊನಾ ವೈರಸ್ ನಿರ್ವಹಣೆಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೂವರು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಡಿಸಿ ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಹೆಲ್ಪ್ ಡೆಸ್ಕ್ ಕಾರ್ಯನಿರ್ವಹಿಸುತ್ತಿದೆ. ಕರೊನಾ ವೈರಸ್ ಕುರಿತು ತಪಾಸಣೆಗೊಳಗಾದವರ ವಿವರ, ಲಭ್ಯವಿರುವ ಸಾಧನ ಸಂಪನ್ಮೂಲಗಳ ಮಾಹಿತಿಯನ್ನು ಪ್ರತಿದಿನ ಸಂಜೆ 6ರೊಳಗೆ ತಮಗೆ ತಿಳಿಸುವಂತೆ ಜಿಲ್ಲಾಧಿಕಾರಿ ಹೇಳಿದರು.

    ಕರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಈಗಾಗಲೆ ಹಲವು ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಜಿಲ್ಲೆಯಲ್ಲಿ ಇದೇ ಮಾರ್ಗಸೂಚಿಯನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಯಾರೂ ಗಾಬರಿಗೊಳ್ಳುವ ಅಗತ್ಯವಿಲ್ಲ. ಕರೊನಾ ಕುರಿತು ಸುಳ್ಳು ಸುದ್ದಿ ಹಾಗೂ ವದಂತಿಗಳನ್ನು ಹರಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಈಗಾಗಲೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

    ಸಿಮ್್ಸ ನಿರ್ದೇಶಕ ಡಾ. ಬಿ.ಜಿ.ಲೇಪಾಕ್ಷಿ, ಇಎನ್​ಟಿ ವಿಭಾಗದ ಮುಖ್ಯಸ್ಥ ಡಾ. ಗಂಗಾಧರ್, ಇಎನ್​ಟಿ ತಜ್ಞ ಡಾ. ಎಸ್.ಶ್ರೀಧರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts