More

    ಜಿಲ್ಲೆಯಲ್ಲಿ 23,274 ಮತದಾರರು

    ಹಾವೇರಿ: ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್​ಗೆ ಅ. 28ರಂದು ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಸುಗಮ ಮತದಾನಕ್ಕಾಗಿ ಜಿಲ್ಲಾದ್ಯಂತ 37 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

    ತಾಲೂಕು ಮತ್ತು ಹೋಬಳಿ ಕೇಂದ್ರದಲ್ಲಿ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಎಸ್​ಒಪಿ ಮಾರ್ಗಸೂಚಿಯಂತೆ ಪ್ರತಿ ಮತಗಟ್ಟೆಗೂ ಸ್ಯಾನಿಟೈಸರ್, ಮಾಸ್ಕ್, ಪಲ್ಸ್ ಆಕ್ಸಿಮೀಟರ್, ಹ್ಯಾಂಡ್​ಗ್ಲೌಸ್, ಪಿಪಿಇ ಕಿಟ್ ಸೇರಿ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಮತಗಟ್ಟೆ ಅಧಿಕಾರಿ, ಸಹಾಯಕ ಅಧಿಕಾರಿ, ಸಿಬ್ಬಂದಿ ಸೇರಿ 209 ಜನರನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಹೆಲ್ತ್ ಡೆಸ್ಕ್ ಸ್ಥಾಪಿಸಿದ್ದು, ಆರೋಗ್ಯ ಸಿಬ್ಬಂದಿ ಹಾಗೂ ವೈದ್ಯರನ್ನು ನಿಯೋಜಿಸಲಾಗಿದೆ.

    ಜಿಲ್ಲೆಯ ಎಲ್ಲ ತಹಸೀಲ್ದಾರ್ ಕಚೇರಿಯಲ್ಲಿ ಮಸ್ಟರಿಂಗ್ ಕಾರ್ಯ ಮಂಗಳವಾರ ಜರುಗಿತು. ಡಿ ಮಸ್ಟರಿಂಗ್ ಬುಧವಾರ ಮತದಾನ ಪ್ರಕ್ರಿಯೆ ನಂತರ ಆಯಾ ತಹಸೀಲ್ದಾರ್ ಕಚೇರಿಯಲ್ಲಿ ನಡೆಯಲಿದೆ. ಬಳಿಕ ಭದ್ರತೆಯೊಂದಿಗೆ ಮತಪತ್ರಗಳ ಡಬ್ಬಿಗಳನ್ನು ಧಾರವಾಡಕ್ಕೆ ಸಾಗಿಸಲಾಗುವುದು.

    ಎಲ್ಲೆಲ್ಲಿ ಮತಗಟ್ಟೆ?: ಬ್ಯಾಡಗಿ ತಾಲೂಕಿನ ಬ್ಯಾಡಗಿ ಪಟ್ಟಣದಲ್ಲಿ 2, ಕಾಗಿನೆಲೆಯಲ್ಲಿ 1. ಹಾನಗಲ್ಲ ತಾಲೂಕಿನ ಹಾನಗಲ್ಲ ಪಟ್ಟಣದಲ್ಲಿ 2, ತಿಳವಳ್ಳಿ, ಅಕ್ಕಿಆಲೂರು ಹಾಗೂ ಬೊಮ್ಮನಹಳ್ಳಿಯಲ್ಲಿ ತಲಾ 1. ಹಾವೇರಿ ತಾಲೂಕಿನ ಹಾವೇರಿ ನಗರದಲ್ಲಿ 4, ಗುತ್ತಲ ಹಾಗೂ ಕರ್ಜಗಿಯಲ್ಲಿ ತಲಾ 1. ಹಿರೇಕೆರೂರು ತಾಲೂಕಿನ ಹಿರೇಕೆರೂರು, ರಟ್ಟಿಹಳ್ಳಿಯಲ್ಲಿ ತಲಾ 2 ಹಾಗೂ ಹಂಸಬಾವಿ ಮತ್ತು ಹೊಸಕಟ್ಟಿಯಲ್ಲಿ ತಲಾ 1. ಸವಣೂರ ತಾಲೂಕಿನ ಸವಣೂರ ಹಾಗೂ ಹತ್ತಿಮತ್ತೂರ ತಲಾ 1. ಶಿಗ್ಗಾಂವಿ ನಗರದಲ್ಲಿ 2, ದುಂಡಶಿ ಹಾಗೂ ಬಂಕಾಪುರದಲ್ಲಿ ತಲಾ 1. ರಾಣೆಬೆನ್ನೂರ ತಾಲೂಕಿನ ರಾಣೆಬೆನ್ನೂರ ನಗರದಲ್ಲಿ 6, ಹಲಗೇರಿಯಲ್ಲಿ 2, ಮೆಡ್ಲೇರಿ ಹಾಗೂ ಕೊಡಿಯಾಲದಲ್ಲಿ ತಲಾ 1 ಮತಗಟ್ಟೆ ತೆರೆಯಲಾಗಿದೆ.

    ಮತದಾರರ ಸಂಖ್ಯೆ: ಜಿಲ್ಲೆಯಲ್ಲಿ 16,052 ಪುರುಷ, 7,218 ಮಹಿಳೆ ಹಾಗೂ ನಾಲ್ಕು ಇತರ ಸೇರಿ 23,274 ಮತದಾರರಿದ್ದಾರೆ. ಬ್ಯಾಡಗಿ ತಾಲೂಕಿನಲ್ಲಿ 1,170 ಪುರುಷ, 502 ಮಹಿಳೆ ಸೇರಿ 1,672. ಹಾನಗಲ್ಲ ತಾಲೂಕಿನಲ್ಲಿ 2,671 ಪುರುಷ ಹಾಗೂ 1,309 ಮಹಿಳೆ, ಇತರ ಒಬ್ಬರು ಸೇರಿ 3,244. ಹಾವೇರಿ ತಾಲೂಕಿನಲ್ಲಿ 2,671 ಪುರುಷ ಹಾಗೂ 139 ಮಹಿಳೆ, ಇತರ ಒಬ್ಬರು ಸೇರಿ 3,981. ಹಿರೇಕೆರೂರು ತಾಲೂಕಿನಲ್ಲಿ 2,727 ಪುರುಷ ಹಾಗೂ 1,075 ಮಹಿಳೆ ಇತರ ಒಬ್ಬರು ಸೇರಿ 3,803. ಸವಣೂರ ತಾಲೂಕಿನಲ್ಲಿ 903 ಪುರುಷ ಹಾಗೂ 229 ಮಹಿಳೆ ಸೇರಿ 1,132. ಶಿಗ್ಗಾಂವಿ ತಾಲೂಕಿನಲ್ಲಿ 1,200 ಪುರುಷ ಹಾಗೂ 440 ಮಹಿಳೆ, ಇತರ ಒಬ್ಬರು ಸೇರಿ 1,641. ರಾಣೆಬೆನ್ನೂರ ತಾಲೂಕಿನಲ್ಲಿ 5,067 ಪುರುಷ ಹಾಗೂ 2,734 ಮಹಿಳೆ ಸೇರಿ 7,801 ಮತದಾರರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts