More

    23ರಂದು ರೈತರ ಬೃಹತ್ ಹೋರಾಟ

    ಮೂಡಿಗೆರೆ: ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಬೆಳೆ ನಾಶಗೊಳಿಸುವುದರ ಜತೆಗೆ ಆಗಾಗ ಜೀವಹಾನಿ ಮಾಡುತ್ತಿವೆ. ಆನೆಗಳನ್ನು ಸ್ಥಳಾಂತರಿಸಲು ಆಗ್ರಹಿಸಿ ಪಟ್ಟಣದಲ್ಲಿ ಸೆ.23ರಂದು ಬೃಹತ್ ಪ್ರತಿಭಟನೆ ನಡೆಸಲು ರೈತ ಸಂಘಟನೆಗಳು, ಕೆಜಿಎಫ್ ಮುಖಂಡರು ತೀರ್ವನಿಸಿದರು. ಕಾಡಾನೆ ಉಪಟಳ ತಡೆಯಲು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಕೃಷಿ ಮಾಡುವುದೇ ಸವಾಲಾಗಿದೆ. ಹೀಗಾಗಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಗೊಳಿಸಲು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ರೈತ ಸಂಘಟನೆಗಳು, ಕೆಜಿಎಫ್ ಮುಖಂಡರು ಸಭೆ ಸೇರಿ ರ್ಚಚಿಸಿದರು.

    ತಾಲೂಕಿನಲ್ಲಿ 13 ಕಾಡಾನೆಗಳು ಬೀಡುಬಿಟ್ಟಿವೆ. ಇವುಗಳ ಕಾಟ ಸಹಿಸಲು ಸಾಧ್ಯವಾಗುತ್ತಿಲ್ಲ. ಜತೆಗೆ ಸಕಲೇಶಪುರ, ಬೇಲೂರು ಭಾಗದಿಂದ 20ಕ್ಕೂ ಹೆಚ್ಚು ಕಾಡಾನೆಗಳ ಗುಂಪು ಆಗಾಗ ತಾಲೂಕಿಗೆ ಲಗ್ಗೆಯಿಟ್ಟು ಬೆಳೆ ನಾಶಪಡಿಸುತ್ತಿವೆ. ಎದುರಿಗೆ ಸಿಕ್ಕವರನ್ನು ಸಾಯಿಸುತ್ತವೆ. ವಾಹನಗಳನ್ನು ಧ್ವಂಸಗೊಳಿಸುತ್ತವೆ. ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ. ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸಲು ಹಲವು ಬಾರಿ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ. ಇದರಿಂದ ರೈತರು ರೋಸಿ ಹೋಗಿದ್ದಾರೆ. ಆನೆಗಳ ಹಾವಳಿ ತಡೆಗೆ ಪರಿಹಾರ ಕಂಡುಕೊಳ್ಳಲೇಬೇಕು ಎಂದು ಸಂಘಟನೆಗಳ ಮುಖಂಡರು ಸಭೆಯಲ್ಲಿ ಆಗ್ರಹಿಸಿದರು.

    ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಂ ಮಾತನಾಡಿ, ಸರ್ಕಾರ ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸಬೇಕು. ಕೆಂಜಿಗೆ ಮೀಸಲು ಅರಣ್ಯ ಪ್ರದೇಶದಲ್ಲಿ ಅಳವಡಿಸಿರುವ ಟೆಂಟಕಲ್ ಐಬೆಕ್ಸ್ ಬೇಲಿಯನ್ನು ಕಾಡಾನೆಗಳು ಬೀಡುಬಿಟ್ಟಿರುವ ಇತರ ಅರಣ್ಯ ಭಾಗಕ್ಕೂ ವಿಸ್ತರಿಸಬೇಕು. ಕಾಡುಕೋಣ, ಹುಲಿ ಮತ್ತಿತರ ಕಾಡುಪ್ರಾಣಿಗಳು ಬರದಂತೆ ತಡೆಯಲು ಟೆಂಟಕಲ್ ಐಬೆಕ್ಸ್ ಬೇಲಿ ತಳಭಾಗದಲ್ಲಿ ಮತ್ತೊಂದು ಸುತ್ತು ಹೆಚ್ಚುವರಿ ತಂತಿ ಅಳವಡಿಸಬೇಕು ಎಂದು ಆಗ್ರಹಿಸಿದರು.

    ಹೋರಾಟ ಸಮಿತಿ ಸಂಚಾಲಕ ಎಂ.ಕೆ.ಸದಾಶಿವ ಮಾತನಾಡಿ, ಕಾಡಾನೆ ದಾಳಿಯಿಂದ ಮೃತಪಟ್ಟವರ ಮತ್ತು ಗಾಯಗೊಂಡವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಕಾಡಾನೆ ಕಾಟದಿಂದ ಪಾಳುಬಿಟ್ಟಿರುವ ಒಂದು ಸಾವಿರ ಹೆಕ್ಟೇರ್ ತರಿ ಜಮೀನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts