More

    215 ಹೊಸ ಕೋವಿಡ್​ ಪ್ರಕರಣಗಳು ದೃಢ; ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸೂಚನೆ

    ಬೆಂಗಳೂರು: ಕೆಲ ದಿನಗಳಿಂದ ಕೋವಿಡ್ ಸೋಂಕು ಏರುಮುಖವಾಗಿದ್ದು, ಬುಧವಾರ ಒಂದೇ ದಿನ 215 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 907 ತಲುಪಿದೆ.

    ಬೆಂಗಳೂರಿನಲ್ಲಿ 75, ಶಿವಮೊಗ್ಗ 51, ಬಳ್ಳಾರಿ 16, ಕಲ್ಬುರ್ಗಿ 13, ಮೈಸೂರು, ಚಿಕ್ಕಮಗಳೂರು 8, ಉತ್ತರ ಕನ್ನಡ 7, ರಾಯಚೂರು 6, ವಿಜಯಪುರ, ಕೋಲಾರ, ಹಾಸನ ತಲಾ 5, ಬೆಂ.ಗ್ರಾಮಾಂತರ, ಹಾವೇರಿ ತಲಾ 3, ಬೀದರ್, ಧಾರವಾಢ ತಲಾ 2, ಚಾಮರಾಜನಗರ, ಚಿತ್ರದುರ್ಗ, ದಕ್ಷಿಣ ಕನ್ನಡ, ಕೊಪ್ಪಳ, ಬೆಳಗಾವಿ, ಮಂಡ್ಯ ತಲಾ ಒಂದು ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಪ್ರಕರಣಗಳು ದೃಢಪಟ್ಟಿವೆ.

    215 ಹೊಸ ಕೋವಿಡ್​ ಪ್ರಕರಣಗಳು ದೃಢ; ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸೂಚನೆ

    ಇದನ್ನೂ ಓದಿ: ಆರೋಪಿಗಳ ಹಲ್ಲುಗಳನ್ನು ಕಿತ್ತು, ನವವಿವಾಹಿತನ ವೃಷಣಗಳನ್ನು ಜಜ್ಜಿ ಚಿತ್ರಹಿಂಸೆ: IPS ಅಧಿಕಾರಿ ಸಸ್ಪೆಂಡ್​

    ಅಗತ್ಯ ಮುನ್ನೆಚ್ಚರಿಕೆ ವಹಿಸಿ

    ಕೋವಿಡ್ ಏರಿಕೆ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಸೂಚನೆ ನೀಡಿದೆ. ಕೋವಿಡ್ ಸೋಂಕಿತ ವ್ಯಕ್ತಿಯೊಂದಿಗೆ ವೈಯಕ್ತಿಕ ಸಂಪರ್ಕ ಹೊಂದಿದ್ದಲ್ಲಿ ರೋಗ ಲಕ್ಷಣಗಳು ಇರಲಿ ಅಥವಾ ಇಲ್ಲದಿರಲಿ ಮನೆಯಲ್ಲಿ ಪ್ರತ್ಯೇಕವಾಗಿರಬೇಕು. ರೋಗ ಲಕ್ಷಣ ಕಂಡು ಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು.

    14410 ಆಪ್ತಮಿತ್ರ ಆರೋಗ್ಯ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ವೈಯ್ಯಕ್ತಿಕ ನೈರ್ಮಲ್ಯ, ಮೂಗು ಮತ್ತು ಬಾಯಿ ಎರಡನ್ನೂ ಆವರಿಸುವ ಮುಖ ಕವಚವನ್ನು ಧರಿಸಿದರೆ ಉತ್ತಮ. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ /ಟಿಶ್ಯೂ ಪೇಪರ್ ಬಳಸಬೇಕು. ಆಗಾಗ ಸಾಬೂನು ಹಾಗೂ ನೀರಿನಿಂದ ಕೈಗಳನ್ನು ತೊಳೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts