More

    ಮಮತಾ ಬ್ಯಾನರ್ಜಿ ಬಗ್ಗೆ ಅಪಹಾಸ್ಯ; ಪ್ರಧಾನಿ ಸ್ಥಾನದಿಂದ ನರೇಂದ್ರ ಮೋದಿ ಅವರನ್ನು ಅನರ್ಹಗೊಳಿಸುವಂತೆ TMC ಆಗ್ರಹ

    ಕೊಲ್ಕತಾ: ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಬೆನ್ನಿಗೆ ಬೆಂಬಲವಾಗಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​ ಪಕ್ಷ ನಿಂತಿದೆ.

    ಚುನಾವಣೆ ಪ್ರಚಾರದ ವೇಳೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ದೀದಿ ಓ ದೀದಿ ಎಂದು ಕರೆಯುವ ಮೂಲಕ ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ. ಮೋದಿ ಉಪನಾಮದ ಕುರಿತು ಮಾತನಾಡಿದ ರಾಹುಲ್​ ಗಾಂಧಿ ಅವರಿಗೆ ಅನರ್ಹ ಶಿಕ್ಷೆ ಎಂದಾದರೆ ಪ್ರಧಾನಿ ನರೇಂದ್ರ ಮೋದಿ, ಸುವೇಂದು ಅಧಿಕಾರಿ ಸೇರಿದಂತೆ ಬಿಜೆಪಿ ನಾಯಕರನ್ನು ಅನರ್ಹಗೊಳಿಸಬೇಕು ಎಂದು TMC ಆಗ್ರಹಿಸಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ TMC ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್​ ಬ್ಯಾನರ್ಜಿ ದೀದಿ ಓ ದೀದಿ ಕ್ಯಾಟ್​ಕಾಲ್​ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮಹಿಳೆಯರಿಗೆ ಅಪಮಾನ ಮಾಡಿದ್ಧಾರೆ. ಹಾಗಾದರೆ ಪ್ರಧಾನಿ ಮೋದಿ ಅವರನ್ನು ಅವರ ಸ್ಥಾನದಿಂದ ಏಕೆ ಅನರ್ಹಗೊಳಿಸಬಾರದು ಎಂದು ಪ್ರಶ್ನಿಸಿದ್ದಾರೆ.

    ಇದಲ್ಲದೆ ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕರಾದ ಸುವೇಂದು ಅಧಿಕಾರಿ ಎಸ್​ಸಿ ಸಮುದಾಯಕ್ಕೆ ಸೇರಿದ್ದ ಸಚಿವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ಧಾರೆ. ಕಳೆದ ವರ್ಷ ನವೆಂಬರ್​ನಲ್ಲಿ TMC ಪಕ್ಷವು ಸುವೇಂದು ಅಧಿಕಾರಿ ಶಾಸಕರಾದ ದೇಬನಾಥ್​ ಹನ್ಸ್ಡಾ, ಬಿರ್ಬಹಾ ಹನ್ಸ್ಡಾ ತಮ್ಮ ಕಾಲಿನ ಕೆಳಗೆ ಇರುವವರು ಎಂದು ಹೇಳಿಕೆ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು.

    ಮಮತಾ ಬ್ಯಾನರ್ಜಿ ಬಗ್ಗೆ ಅಪಹಾಸ್ಯ; ಪ್ರಧಾನಿ ಸ್ಥಾನದಿಂದ ನರೇಂದ್ರ ಮೋದಿ ಅವರನ್ನು ಅನರ್ಹಗೊಳಿಸುವಂತೆ TMC ಆಗ್ರಹ

    ಇದನ್ನೂ ಓದಿ: ರಾಜಕಾರಣದಲ್ಲಿ ಧರ್ಮ ಬಳಸುವುದನ್ನು ನಿಲ್ಲಿಸಿದರೆ ದ್ವೇಷ ಭಾಷಣ ನಿಲ್ಲುತ್ತದೆ: ಸುಪ್ರೀಂ ಕೋರ್ಟ್​

    ಮೋದಿ ಉಪನಾಮದ ಕುರಿತು ವ್ಯಂಗ್ಯವಾಡಿದ್ದಕ್ಕೆ OBC ಭಾವನೆಗಳಿಗೆ ಧಕ್ಕೆ ಆಗಿದೆ ಎಂದು ಆರೋಪಿಸಿ ರಾಹುಲ್​ ಅವರನ್ನು ಅನರ್ಹ ಮಾಡಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ್ದೀರಾ. ಅದೇ ರೀತಿ ನಿಮ್ಮ ಪಕ್ಷದ ನಾಯಕರಿಗೂ ಇದು ಅನ್ವಯವಾಗುವುದಿಲ್ಲವೇ ಎಂದು ಅಭಿಷೇಕ್​ ಕೇಳಿದ್ದಾರೆ.

    ಕಾನೂನು ನಿಮಗೆ ಮತ್ತು ನಮಗೆ ಬೇರೆ ಇದೆಯೇ ಸೂರತ್​ ನ್ಯಾಯಾಲಯದ ತೀರ್ಪನ್ನು ಉದಾಹರಣೆಯಾಗಿ ತೆಗೆದುಕೊಂಡು ನಾನು ನಮ್ಮ ವಕೀಲರಿಗೆ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಯಾಗಿ ಮೊಕದ್ದಮೆಯನ್ನು ದಾಖಲಿಸಲು ಸೂಚಿಸುತ್ತೇನೆ ಎಂದು ತಿಳಿಸಿದ್ದಾರೆ.

    ಮಾನನಷ್ಟ ಮೊಕದ್ದಮೆ ಮತ್ತು ಸಂಸತ್​ ಸದಸ್ಯತ್ವದಿಂದ ಅನರ್ಹತೆ ವಿಚಾರವಾಗಿ ರಾಹುಲ್​ ಗಾಂಧಿ ಅವರನ್ನು ಬೆಂಬಲಿಸಲು ತೃಣಮೂಲ ಕಾಂಗ್ರೆಸ್​ ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ವಿರೋಧ ಪಕ್ಷದ ನಾಯಕರ ಮೇಲೂ ಈ ರೀತಿ ಆಗಬಹುದೆಂಬ ಕಾರಣಕ್ಕೆ ನಾವು ರಾಹುಲ್​ ಗಾಂಧಿ ಅವರನ್ನು ಬೆಂಬಲಿಸಿದ್ದೇವೆ ಎಂದು ಅಭಿಷೇಕ್​ ಬ್ಯಾನರ್ಜಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts