More

    21 ವರ್ಷದ ಯುವತಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ! ಡಿಗ್ರಿ ಓದುವಾಗಲೇ ರಾಜಕೀಯಕ್ಕಿಳಿದ ವಿದ್ಯಾರ್ಥಿನಿ

    ಲಖನೌ: ರಾಜಕೀಯದಲ್ಲಿ ಯುವಕರು ಕಡಿಮೆ ಎನ್ನುವ ಮಾತು ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಆದರೆ ಕೆಲವು ಕಡೆ ಅತ್ಯಂತ ಕಿರಿ ವಯಸ್ಸಿನವರು ರಾಜಕೀಯವಾಗಿ ಗುರುತಿಸಿಕೊಂಡು ಬದಲಾವಣೆಗಳನ್ನು ತಂದಿರುವುದೂ ಇದೆ. ಅದೇ ರೀತಿ ಇದೀಗ ಉತ್ತರ ಪ್ರದೇಶದ ಬಲರಾಂಪುರದಲ್ಲಿ 21 ವರ್ಷದ ಯುವತಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೇರಿದ್ದಾಳೆ.


    21 ವರ್ಷದ ಆರತಿ ತಿವಾರಿ ಬಲರಾಂಪುರ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾಳೆ. ಆಕೆ ಚೌಧರಿಡಿಹ್ ಜಿಲ್ಲಾ ಪಂಚಾಯತ್ ಪ್ರದೇಶದಲ್ಲಿ ಬಿಜೆಪಿ ಪರವಾಗಿ ಸ್ಪರ್ಧಿಸಿದ್ದು ಹೆಚ್ಚಿನ ಅಂತರದೊಂದಿಗೆ ಜಯ ಸಾಧಿಸಿದ್ದಳು. ಇದೀಗ ಆಕೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿದೆ. ಬಲರಾಂಪುರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸ್ವಾತಿ, ಆರತಿಗೆ ಪ್ರಮಾಣ ವಚನ ನೀಡಿದ್ದಾರೆ.


    ಜಿಲ್ಲಾ ಪಂಚಾಯಿತಿಯ ಸಭಾಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆದಿದೆ. ಕೈಸರ್ಗಂಜ್ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆರತಿಯ ಜತೆ ಪಂಚಾಯಿತಿಯ 40 ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.


    ಆರತಿ ಎಂಎಲ್​ಕೆ ಪಿಜಿ ಕಾಲೇಜಿನಲ್ಲಿ 3ನೇ ವರ್ಷದ ಬಿಎ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿ. ಆಕೆಯ ಅಂಕಲ್​ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದು, ಆತನಿಗೆ ಆ ಕ್ಷೇತ್ರದಲ್ಲಿ ಬಿಜೆಪಿ ಜಿಲ್ಲಾ ಪಂಚಾಯಿತಿ ಟಿಕೆಟ್ ನೀಡಲಾಗಿತ್ತಂತೆ. ಆದರೆ ವಿರೋಧ ಪಕ್ಷಗಳ ಅಭ್ಯರ್ಥಿಗಳನ್ನು ತಲೆಯಲ್ಲಿಟ್ಟುಕೊಂಡ ಆತ ಆರತಿಗೆ ಸೀಟು ಬಿಟ್ಟುಕೊಟ್ಟಿದ್ದಾನೆ. (ಏಜೆನ್ಸೀಸ್)

    ಬಿಗ್​ಬಾಸ್ ಮನೆಯಿಂದ ಹೊರಬಂದ ರಘು ಮೊದಲು ಭೇಟಿ ಆಗೋದು ಯಾರನ್ನ?

    ವಾಟ್ಸ್​ಆ್ಯಪ್​ ವಿಡಿಯೋ ಕಾಲ್​ನಲ್ಲೇ ಡೇಟಾ ಪೂರ್ತಿ ಖಾಲಿಯಾಗುತ್ತಿದೆಯೇ? ಡೇಟಾ ಬಳಕೆ ಕಡಿಮೆಯಾಗಲು ಹೀಗೆ ಮಾಡಿ..

    ಈ ವಾರ ಪ್ರಕಟವಾಗಲ್ಲ ಸಿಬಿಎಸ್​ಇ ರಿಸಲ್ಟ್​; ಅಂಕ ಸಲ್ಲಿಕೆಯಲ್ಲಿ ಶಾಲೆಗಳ ವಿಳಂಬ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts