More

    2030ರೊಳಗೆ ದೇಶ ಎಚ್‌ಐವಿ ಮುಕ್ತವಾಗಲಿ

    ಎಚ್.ಡಿ.ಕೋಟೆ: 2030ರೊಳಗೆ ದೇಶವನ್ನು ಹೆಚ್‌ಐವಿ ಮತ್ತು ಏಡ್ಸ್ ಮುಕ್ತವಾಗಿಸಲು ಎಲ್ಲರೂ ಪಣತೊಡಬೇಕಾಗಿದೆ ಎಂದು ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಟಿ.ರವಿಕುಮಾರ್ ತಿಳಿಸಿದರು.

    ತಾಲೂಕಿನ ಅಂತರಸಂತೆ ಸಂಚಾರಿ ಗಿರಿಜನ ಆರೋಗ್ಯ ಘಟಕದಲ್ಲಿ ಶುಕ್ರವಾರ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಸಾರ್ವಜನಿಕ ಆಸ್ಪತ್ರೆ ಹಾಗೂ ಐಸಿಟಿಸಿ ವಿಭಾಗ ಸಹಯೋಗದಲ್ಲಿ ಸಮುದಾಯ ಆಧಾರಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

    ಎಚ್‌ಐವಿ ಹಾಗೂ ಏಡ್ಸ್ ನಿಯಂತ್ರಣ ಮಾಡಲು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ನವದೆಹಲಿ ಮತ್ತು ರಾಜ್ಯ ಏಡ್ಸ್ ಪ್ರಿವೆನ್ಸಿ ಬೆಂಗಳೂರು ವತಿಯಿಂದ ಚ್‌ಐವಿ ಮತ್ತು ಏಡ್ಸ್ ಮುಕ್ತವಾಗಿಸಲು ಹಲವಾರು ಕಾರ್ಯ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಸಮುದಾಯ ಆಧಾರಿತ ಸ್ಕ್ರೀನಿಂಗ್ ಆರಂಭಿಕ ರೋಗ ನಿಯಂತ್ರಿಸಲು ಪ್ರಮುಖ ವಿಧಾನವಾಗಿದೆ. ಗರ್ಭಿಣಿಯರು ಕಡ್ಡಾಯವಾಗಿ ಹೆಚ್‌ಐವಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರಿಂದ ತಾಯಿಂದ ಮಗುವಿಗೆ ರೋಗ ಹರಡದಂತೆ ತಡೆಯಬಹುದು ಎಂದು ತಿಳಿಸಿದರು.

    ಅಂತರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ರಹ್ಮಣ್ಯ, ಉಪಾಧ್ಯಕ್ಷೆ ಲೋಲಮ್ಮ, ಮಾಜಿ ಅಧ್ಯಕ್ಷ ಕಲೀಮ್ ಪಾಷಾ, ಸದಸ್ಯರಾದ ಮಾದೇವಮ್ಮ, ರೂಪಾ, ಸಂಚಾರಿ ಗಿರಿಜನ ಆರೋಗ್ಯ ಘಟಕ ವೈದ್ಯಾಧಿಕಾರಿ ಡಾ.ಹರ್ಷ, ಆರೋಗ್ಯ ಇಲಾಖೆ ಸಿಬ್ಬಂದಿ ರವಿರಾಜ್, ಚಂದ್ರು, ನಾಗರಾಜ್, ರಾಮು, ಲೋಲಾಕ್ಷಿ, ಹರೀಶ್, ಉಮೇಶ್, ನಟರಾಜ್, ಪವಿತ್ರಾ, ಪದ್ಮರಾಜ್, ಸುನಿತಾ, ಸುಮಲತಾ, ಭಾರತಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts