More

    ಶಮಿ ಬಿಜೆಪಿ ಸೇರ್ತಾರಾ? ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ ಅಮಿತ್​ ಷಾ ಜತೆಗಿನ ಭೇಟಿ!

    ನವದೆಹಲಿ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಗಳಿಸಿ ಕ್ರೀಡಾಭಿಮಾನಿಗಳ ಗಮನ ಸೆಳೆದಿರುವ ಮೊಹಮ್ಮದ್​ ಶಮಿ, ಕೇಂದ್ರ ಗೃಹ ಸಚಿವ ಅಮಿತ್​ ಷಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ಜತೆ ಕಾಣಿಸಿಕೊಳ್ಳುವ ಮೂಲಕ ರಾಜಕೀಯ ವಲಯದಲ್ಲೂ ಭಾರೀ ಸಂಚಲನ ಸೃಷ್ಟಿಸಿದ್ದಾರೆ.

    ಅಮಿತ್​ ಷಾ ಮತ್ತು ದೋವಲ್​ ಜತೆ ಕ್ಯಾಮೆರಾಗೆ ಪೋಸ್​​ ನೀಡಿರುವ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಶಮಿ ಹಂಚಿಕೊಂಡಿದ್ದಾರೆ. ದೆಹಲಿ ನಿವಾಸದಲ್ಲಿ ಬಿಜೆಪಿ ನಾಯಕ ಅನಿಲ್​ ಬಲುನಿ ಆಯೋಜಿಸಿದ್ದ ಈಗಾಸ್​ ಆಚರಣೆಯಲ್ಲಿ ಶಮಿ ಪಾಲ್ಗೊಂಡಿದ್ದರು. ಈಗಾಸ್ ಎಂಬುದು ಉತ್ತರಾಖಂಡದ ಪ್ರಾಚೀನ ಸಾಂಪ್ರದಾಯಿಕ ಹಬ್ಬವಾಗಿದೆ. ಈ ಸಂಭ್ರಮದಲ್ಲಿ ಶಮಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಮಿ ಹೊರತಾಗಿ ಬಿಜೆಪಿಯ ಅನೇಕ ಪ್ರಮುಖ ನಾಯಕರು ಭಾಗವಹಿಸಿದ್ದರು. ಈ ವೇಳೆ ಶಮಿ, ಷಾ ಮತ್ತು ದೋವಲ್​ ಅವರನ್ನು ಭೇಟಿಯಾಗಿದ್ದು, ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

    ಶಮಿ ಬಿಜೆಪಿ ಸೇರ್ತಾರಾ?
    ಷಾ ಜತೆ ಶಮಿ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಶಮಿ ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹ ಹರಿದಾಡ ತೊಡಗಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಕೆಲ ಕಾರ್ಯತಂತ್ರದ ಯೋಜನೆಗಳನ್ನು ಹೊಂದಿರಬಹುದು ಎಂದು ಸೂಚಿಸುವ ಇತ್ತೀಚಿನ ಬೆಳವಣಿಗೆಗಳಿಂದ ಪ್ರಸ್ತುತ ಹರಿದಾಡುತ್ತಿರುವ ವದಂತಿಯು ಹೆಚ್ಚು ವಿಶ್ವಾಸಾರ್ಹತೆ ಪಡೆದುಕೊಂಡಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಸಾಂಪ್ರದಾಯಿಕವಾಗಿ ಅಲ್ಪಸಂಖ್ಯಾತರಿಗೆ ಒಲವು ತೋರುವವರಲ್ಲ, ಆದರೆ, ಶಮಿ ಅವರ ಸ್ಥಳೀಯ ಗ್ರಾಮವಾದ ಅಮ್ರೋಹಾದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವನ್ನು ಘೋಷಿಸಿದಾಗ ಬಹುತೇಕರಿಗೆ ಆಶ್ಚರ್ಯವಾಯಿತು. ಅಲ್ಲದೆ, ವಿಶ್ವಕಪ್‌ನಲ್ಲಿ ಶಮಿ ಅವರ ಅತ್ಯುತ್ತಮ ಪ್ರದರ್ಶನವನ್ನು ಯೋಗಿ ಮೆಚ್ಚಿಕೊಂಡರು.

    ಇನ್ನು ಫೈನಲ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋತ ನಂತರ, ಪ್ರಧಾನಿ ಮೋದಿ ಅವರು ಟೀಮ್​ ಇಂಡಿಯಾದ ಡ್ರೆಸ್ಸಿಂಗ್ ರೂಮ್‌ಗೆ ಭೇಟಿ ನೀಡಿ, ಆಟಗಾರರನ್ನು ಸಂತೈಸುವ ಸಂದರ್ಭದಲ್ಲಿ ವಿಶೇಷವಾಗಿ ಶಮಿಯನ್ನು ಆಲಂಗಿಸಿಕೊಂಡರು. ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯಿತು. ಇದೀಗ ಬಲುನಿ ಅವರ ಎಗಾಸ್​ ಆಚರಣೆ ವೇಳೆ ಶಮಿ, ಅಮಿತ್ ಷಾ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಹೀಗಾಗಿ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಗರಿಗೆದರಿದೆ. ಅಮ್ರೋಹಾದಿಂದ ಹಾಲಿ ಲೋಕಸಭಾ ಸದಸ್ಯರಾಗಿರುವ ಬಹುಜನ ಸಮಾಜ ಪಕ್ಷದ ಡ್ಯಾನಿಶ್ ಅಲಿ ವಿರುದ್ಧ ಬಿಜೆಪಿಯು ಶಮಿ ಅವರನ್ನು ಕಣಕ್ಕಿಳಿಸಬಹುದು ಎಂಬ ಊಹಾಪೋಹಗಳು ಕೂಡ ಹಬ್ಬಿವೆ.

    ಮೋದಿ ಹೊಗಳಿದ ಶಮಿ
    ಇತ್ತೀಚೆಗೆ ಎಎನ್‌ಐ ಜೊತೆಗಿನ ಸಂವಾದದಲ್ಲಿ ಶಮಿ, ಪ್ರಧಾನಿ ಮೋದಿ ಅವರನ್ನು ಹೊಗಳಿದರು. ಫೈನಲ್​ ಪಂದ್ಯದ ಸೋಲಿನ ಬಳಿಕ ಆಟಗಾರರನ್ನು ಭೇಟಿಯಾಗಿ ಪ್ರಧಾನಿ ಮೋದಿ ಸಂತೈಸಿದ್ದು ನಮಗೆ ಆತ್ಮವಿಶ್ವಾಸ ನೀಡಿತು ಎಂದು ಶಮಿ ಒಪ್ಪಿಕೊಂಡಿದ್ದಾರೆ. ಇಂತಹ ನಡೆ ತುಂಬಾ ಮುಖ್ಯವಾಗಿವೆ. ಪ್ರಧಾನಿ ಮೋದಿ ಸ್ವತಃ ನಿಮ್ಮನ್ನು ಪ್ರೋತ್ಸಾಹಿಸಿದಾಗ, ಅದು ನಿಮಗೆ ಆತ್ಮವಿಶ್ವಾಸವನ್ನು ನೀಡುತ್ತದೆ ಎಂದಿದ್ದರು. (ಏಜೆನ್ಸೀಸ್​)

    ಶಮಿ ಅಂದ್ರೆ ಉರಿದು ಬೀಳ್ತಿದ್ದ ಹಸಿನಾಗೆ ಇದ್ದಕ್ಕಿದ್ದಂತೆ ಮಾಜಿ ಗಂಡನ ಮೇಲೆ ಉಕ್ಕಿ ಹರಿಯುತ್ತಿದೆ ಪ್ರೀತಿ!

    2ನೇ ಹೆಂಡ್ತಿಯಾಗಲು ರೆಡಿ ಎಂದ ನಟಿಗೆ ಶಮಿಯ ಮಾಜಿ ಪತ್ನಿ ಹಸೀನಾ ಕೊಟ್ಟ ಉತ್ತರವಿದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts