More

    ಮಾರುಕಟ್ಟೆಗೆ ಲಗ್ಗೆಯಿಡಲಿದೆ 200MP ಕ್ಯಾಮೆರಾ ಸ್ಮಾರ್ಟ್​ಪೋನ್​!

    ನವದೆಹಲಿ: ಜಗತ್ತಿನಾದ್ಯಂತ ಡಿಎಸ್​ಎಲ್​ಆರ್​ ಕ್ಯಾಮೆರಾಗಳ ಬೇಡಿಕೆ ಕುಸಿಯುತ್ತಿದ್ದು, ಇದಕ್ಕೆ ಮುಖ್ಯವಾಗಿ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಸ್ಮಾರ್ಟ್​ಫೋನ್​ಗಳೇ ಕಾರಣ ಎನ್ನಬಹುದು. ಏಕೆಂದರೆ ಕೆಲವು ದಿನಗಳ ಹಿಂದೆ 108 ಮೆಗಾ ಪಿಕ್ಸಲ್​ ಹಾಗೂ 200 ಮೆಗಾ ಪಿಕ್ಸಲ್​ ಕ್ಯಾಮೆರಾ ಹೊಂದಿರುವ ಸ್ಮಾರ್ಟ್​ಫೋನ್​ಗಳು ಬಿಡುಗಡೆಯಾಗಿ ಮಾರುಕಟ್ಟೆಯಲ್ಲಿ ತಮ್ಮದೇ ಹವಾ ಸೃಷ್ಟಿ ಮಾಡಿದ್ದವು.

    ಮೊಬೈಲ್​ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಹೊಂದಿರುವ ರಿಯಲ್​ ಮಿ ಮೇಲಿಂದ ಮೇಲೆ ಹೊಸ ಪೋನ್​ಗಳನ್ನು ಬಿಡುಗಡೆ ಮಾಡುತ್ತಿದೆ. ಮೇ 10ರಂದು ಕಂಪನಿಯು ರಿಯಲ್​ ಮಿ-11 ಪ್ರೋ ಸರಣಿಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಸರಣಿಯು ರಿಯಲ್​ ಮಿ 11, ರಿಯಲ್​ ಮಿ 11 ಪ್ರೋ ಹಾಗೂ ರಿಯಲ್​ ಮಿ 11 ಪ್ರೋ ಪ್ಲಸ್​ ಎಂಬ ಸ್ಮಾರ್ಟ್​ಫೋನ್​ಗಳನ್ನು ಹೊಂದಿದೆ. ಮೊದಲಿಗೆ ಚೀನಾ ಮಾರುಕಟ್ಟೆಗೆ ಕಾಲಿಡಲಿರುವ ಈ ಫೋನ್​ಗಳು ನಂತರ ಭಾರತದ ಮಾರುಕಟ್ಟೆಗೆ ಲಗ್ಗೆಯಿಡಲಿವೆ.

    ಇದನ್ನೂ ಓದಿ: ಪ್ರಾಣವನ್ನೇ ಕಿತ್ತುಕೊಂಡ ರೀಲ್ಸ್​ ಹುಚ್ಚು!

    ಈ ಫೋನಿನ ಫೀಚರ್ಸ್​ಗಳನ್ನು ನೋಡಿದಾಗ, 6.7 ಇಂಚಿನ ಪುಲ್​ ಹೆಚ್​ಡಿ ಡಿಎಸ್​ ಪ್ಲೇ ಜೊತೆಗೆ AMOLED ಸ್ಕ್ರೀನ್ ಹೊಂದಿದೆ. ದೀರ್ಘ ಸಮಯ ಬಾಳಿಕೆ ಬರುವ 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವುದರ ಜೊತೆಗೆ 67 ವ್ಯಾಟ್​ನ ಫಾಸ್ಟ್​​ ಚಾರ್ಜಿಂಗ್​ನ್ನು ಬೆಂಬಲಿಸುತ್ತದೆ ಎನ್ನಲಾಗಿದೆ. ಇನ್ನು, 12GB RAM ಮತ್ತು 256GB ವರೆಗೆ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ನಿರೀಕ್ಷೆಯಿದೆ.

    Realme 11 ಸರಣಿ ಬರೊಬ್ಬರಿ 200 MP ಕ್ಯಾಮೆರಾವನ್ನು ಹೊಂದಿರುವುದರ ಜೊತೆಗೆ ಸ್ಯಾಮ್​ಸಂಗ್​ ISOCELL HP3 ಸೆನ್ಸಾರ್ ಅನ್ನು ಒಳಗೊಂಡಿವೆ ಹಾಗೂ 20x ಮೂನ್ ಮೋಡ್ ಜೂಮ್ ಅನ್ನು ಹೊಂದಿರುತ್ತದೆ ಎನ್ನಲಾಗಿದೆ. ಹಿಂಬದಿಯ ಕ್ಯಾಮೆರಾ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ ಬರಲಿದ್ದು, ಸೆಲ್ಪಿ ಪ್ರೀಯರಿಗಾಗಿಗೆ ವಿಶೇಷವಾಗಿ 16MP ಫ್ರಂಟ್​ ಕ್ಯಾಮೆರಾವಿದೆ ಎಂದು ಹೇಳಲಾಗುತ್ತಿದೆ. ಈ ಸರಣಿಯ ಪೋನ್​ಗಳ ನಿಖರ ಬೆಲೆ ತಿಳಿದು ಬಂದಿಲ್ಲವಾದರೂ, ಇವುಗಳು ಬೆಲೆ ತುಸು ಜಾಸ್ತಿ ಇರಬಹುದೆಂದು ಹೇಳಲಾಗಿದೆ.(ಏಜೆನ್ಸೀಸ್​)

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts