More

    ಕರೊನಾ ನಿಯಂತ್ರಣಕ್ಕೆ 200 ಕೋಟಿ ರೂಪಾಯಿ; ನಾಲ್ಕು ಟಾಸ್ಕ್​ ಫೋರ್ಸ್​ಗಳ ರಚನೆ

    ಬೆಂಗಳೂರು: ಕರ್ನಾಟಕದಲ್ಲಿ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದ್ದು, ಸೋಂಕು ಹರಡುವುದನ್ನು ನಿಯಂತ್ರಿಸುವುದಕ್ಕೆ ರಾಜ್ಯ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇಂದು ರಾಜ್ಯ ಸರ್ಕಾರದ ತುರ್ತು ಸಚಿವ ಸಂಪುಟ ಸಭೆ ಮುಕ್ತಾಯಗೊಂಡಿದ್ದು, ಕರೊನಾ ವೈರಸ್​ ನಿಯಂತ್ರಣಕ್ಕೆ 200 ಕೋಟಿ ರೂಪಾಯಿ ಅನುದಾನ ನೀಡಿರುವುದಾಗಿ ಸರ್ಕಾರ ತಿಳಿಸಿದೆ.

    ಸಂಪುಟ ಸಭೆ ಮುಕ್ತಾಯಗೊಂಡ ನಂತರ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಸೋಂಕು ತಡೆಗಟ್ಟುವುದನ್ನು ನಿಯಂತ್ರಣಕ್ಕೆ ತರುವುದಕ್ಕೆ 200 ಕೋಟಿ ರೂಪಾಯಿ ಅನುದಾನ ನೀಡಿರುವುದಾಗಿ ತಿಳಿಸಿದ್ದಾರೆ. ರಾಜ್ಯದ ಮುಖ್ಯಕಾರ್ಯದರ್ಶಿ, ಆರೋಗ್ಯ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರನ್ನೊಳಗೊಂಡ ನಾಲ್ಕು ಟಾಸ್ಕ್​ ಫೋರ್ಸ್​ಗಳನ್ನು ರಚಿಸಿದ್ದೇವೆ. ಈ ಟಾಸ್ಕ್​ ಫೋರ್ಸ್​ಗಳು ಪ್ರತಿದಿನ ಸಭೆ ನಡೆಸಿ ವರದಿ ಸಲ್ಲಿಸುತ್ತವೆ. ವಿದೇಶಗಳಿಂದ ಆಗಮಿಸುವವರನ್ನು 15 ದಿನಗಳ ಕಾಲ ಪ್ರತ್ಯೇಕಿಸಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

    ವಿಧಾನ ಸಭೆ ಮತ್ತು ವಿಕಾಸ ಸಭೆಯ ಕಡೆ ಜನರು ಬಾರದಿರುವಂತೆ ಕ್ರಮ ತೆಗೆದುಕೊಳ್ಳಲಾಗುವುದು. ಕರೊನಾ ಜತೆಯಲ್ಲಿ ಹಕ್ಕಿ ಜ್ವರ ಮತ್ತು ಮಂಗನ ಕಾಯಿಲೆ ನಿಯಂತ್ರಣಕ್ಕೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

    ಮಾರ್ಚ್​ 31ರವರೆಗೂ ಕರ್ನಾಟಕ ಬಂದ್​! ತುರ್ತು ಸಚಿವ ಸಂಪುಟ ಸಭೆಯಲ್ಲಿ ಬಂದ್​ ವಿಸ್ತರಣೆಯ ಮಹತ್ವದ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts