More

    20 ಕೋಟಿ ರೂ. ವಿಆರ್​ಎಸ್ ಹಣ ಬಿಡುಗಡೆಗೆ ಆದೇಶ

    ಭದ್ರಾವತಿ: ವಿಆರ್​ಎಸ್ ಹಾಗೂ ವಿಎಸ್​ಎಸ್ ಯೋಜನೆಯಡಿ ಸ್ವಯಂ ನಿವೃತ್ತಿ ಪಡೆದ ನಗರದ ಮೈಸೂರು ಕಾಗದ ಕಾರ್ಖಾನೆ ನೌಕರರಿಗೆ ಬರಬೇಕಾದ ಬಾಕಿ 20 ಕೋಟಿ ರೂ. ಬಿಡುಗಡೆಗೆ ರಾಜ್ಯ ಸರ್ಕಾರ ಆದೇಶಿಸಿದೆ.

    ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದು ಸ್ವಯಂ ನಿವೃತ್ತಿ ಹೊಂದಿದ ಕಾರ್ವಿುಕರಿಗೆ ರಾಜ್ಯ ಸರ್ಕಾರ 20 ಕೋಟಿ ರೂ. ಬಿಡುಗಡೆಗೊಳಿಸಲಾಗುತ್ತಿದೆ. ಒಂದು ವೇಳೆ ಯಾವುದೇ ಲೋಪ ಕಂಡುಬಂದಲ್ಲಿ ಕಂಪನಿಯ ಅಧಿಕಾರಿಗಳನ್ನೇ ನೇರವಾಗಿ ಹೊಣೆ ಮಾಡಲಾಗುವುದೆಂದು ಆದೇಶದಲ್ಲಿ ತಿಳಿಸಲಾಗಿದೆ.

    ರಾಜ್ಯ ಸರ್ಕಾರಿ ಸ್ವಾಮ್ಯದ ಎಂಪಿಎಂ ಕಾರ್ಖಾನೆಯನ್ನು ಖಾಸಗೀಕರಣ ಇಲ್ಲವೇ ಮಾರಾಟ ಮಾಡುವ ಸಂಬಂಧ ಮಾನವ ಸಂಪನ್ಮೂಲ ಶೂನ್ಯಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕಾಯಂ ನೌಕರರು ಮತ್ತು ಗುತ್ತಿಗೆ ಕಾರ್ವಿುಕರಿಗೆ 2017ರಲ್ಲಿ ವಿಆರ್​ಎಸ್ ಹಾಗೂ ವಿಎಸ್​ಎಸ್ ಯೋಜನೆ ಜಾರಿಗೊಳಿಸಿತ್ತು. ಸರ್ಕಾರದ ಈ ಯೋಜನೆಗೆ ಶೇ.90 ಕಾರ್ವಿುಕರು ಒಪ್ಪಿಗೆ ಸೂಚಿಸಿ ನಿವೃತ್ತಿ ಪಡೆದಿದ್ದರು.

    ನಿವೃತ್ತರಾದ ಕಾರ್ವಿುಕರಿಗೆ 2 ಹಂತದಲ್ಲಿ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದ ಸರ್ಕಾರ ಆಡಿಟ್ ವರದಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ 2ನೇ ಕಂತಿನ ಹಣದಲ್ಲಿ ಸ್ವಲ್ಪ ಹಣ ಬಾಕಿ ಉಳಿಸಿಕೊಂಡಿತ್ತು. ಬಾಕಿ ಉಳಿಸಿಕೊಂಡಿದ್ದ 20 ಕೋಟಿ ರೂ.ಗಳನ್ನು ಇದೀಗ ಬಿಡುಗಡೆ ಮಾಡುವ ಆದೇಶ ಹೊರಡಿಸಿದೆ. ಸ್ವಯಂನಿವೃತ್ತಿ ಪಡೆಯದ 220 ಕಾರ್ವಿುಕರು ಮುಂದಿನ ಆದೇಶ ಬರುವವರೆಗೂ ಕಾಯಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts