More

    2 ಕೋಟಿ ರೂ. ವೆಚ್ಚದಲ್ಲಿ ವಿವಿಧ ರಸ್ತೆಗಳ ಅಭಿವೃದ್ಧಿ

    ಕಳಸ: ಮುಖ್ಯಮಂತ್ರಿಯವರ ವಿಶೇಷ ಅನುದಾನದಲ್ಲಿ ಮಂಜೂರಾಗಿರುವ 2 ಕೋಟಿ ರೂ. ಅನುದಾನದಲ್ಲಿ ಕಳಸ ಹೋಬಳಿ, ಇಡಕಣಿ ಗ್ರಾಪಂ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಶಾಸಕಿ ನಯನ ಮೋಟಮ್ಮ ಚಾಲನೆ ನೀಡಿದರು.
    ಹೊರನಾಡು ಹೂವಿನಹಿತ್ಲು-ಉತ್ತನಬೆಳಲು-ಗೋಳಿಬೆಳಕು ರಸ್ತೆ ಅಭಿವೃದ್ಧಿ, ಕೆಸುವಿನ ಕೊಂಡ ರಸ್ತೆ ಅಭಿವೃದ್ಧಿಗೆ ತಲಾ 15 ಲಕ್ಷ ರೂ., ಹೊರನಾಡು-ಗೀತೋಟ, ಮೇಲ್ಮನೆಯಿಂದ ಹೊಸಮಠ ಬಿ.ಕಲ್ಕೋಡು ಕಾರ್ಲೆ ಸೇರುವ ರಸ್ತೆ, ಸಂಸೆ ಗ್ರಾಪಂ ವ್ಯಾಪ್ತಿಯ ಸಂಪಾನೆ, ಉಳ್ಳುರು ಕೋರೆ, ಇಡಕಣಿ ಗ್ರಾಪಂನ ಹೆಮ್ಮಕ್ಕಿ ಕಗ್ಗುಂಡಿ ರಸ್ತೆ ಕಾಮಗಾರಿಗೆ ಶಂಕು ಸ್ಥಾಪನೆ ನೇರವೇರಿಸಿದರು.
    ಹಿರೇಬೈಲ್ ಕೋರೆ ಮುಖ್ಯರಸ್ತೆಯಿಂದ ಲೂಹಿಸ ಮನೆಯಿಂದ ಗ್ರ್ೂಸೈಟ್ ರಸ್ತೆ, ಬೂದಿಗುಂಡಿ, ತೋಟದೂರು ವಾಸನಕೂಡಿಗೆ, ತಲಗೋಡು ಹಳ್ಳದಾಚೆ ತಾರಿಕೊಂಡ, ತನೂಡಿ ಕಾಳಿಪಾಲು ಸಿಸಿ ರಸ್ತೆ , ಹೊರನಾಡು ಶೃಂಗೇರಿ ಮುಖ್ಯರಸ್ತೆಯಿಂದ ಬಲಿಗೆ ಪಾರ್ಶ್ವನಾಥ ಬಸದಿ ರಸ್ತೆ, ಹಿನಾರಿ-ಹಂದಿಹಡ್ಲು, ಕಳಸ-ಮಹಾವೀರ ರಸ್ತೆ, ಮೈದಾಡಿ- ಮೈತಲಖಾನ್, ಬೈನಕೊಂಡ ರಸ್ತೆ, ಕೆಳಮರಸಣಿಗೆ-ಮುಳ್ಳಿನಕೊಂಡ ಕಾಲನಿ ರಸ್ತೆ ಅಭಿವೃದ್ಧಿಗೆ ತಲಾ 10 ಲಕ್ಷ ರೂ. ಅನುದಾನ ನೀಡಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದರು.
    ಪ್ರವಾಹದಿಂದಾಗಿ ಹಾನಿಯಾದ ಮರಸಣಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜೀವಿ, ರೋನಿ ಸಿಕ್ವೇರಾ, ಸರೋಜಿನಿ, ಸೀತು ಕುಟುಂಬಕ್ಕೆ ಸರ್ಕಾರದ ಚೆಕ್ ವಿತರಿಸಲಾಯಿತು. ಕಾಂಗ್ರೆಸ್ ಮುಖಂಡರಾದ ಪ್ರಭಾಕರ ಗೌಡ, ಶ್ರೇಣಿಕ್, ವಿಶ್ವನಾಥ್ ಮರಸಣಿಗೆ, ಜಗದೀಶ್ ಭಂಡಾರಿ, ವೀರೇಂದ್ರ ಜೈನ್, ಮಹಮ್ಮದ್ ರಫೀಕ್, ಕೆ.ಸಿ.ಮಹೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts