More

    ಕರೊನಾ ಶಂಕಿತೆಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಹೈಡ್ರಾಮ ಸೃಷ್ಟಿಸಿ ಪೇದೆಗಳಿಬ್ಬರು ಪರಾರಿ

    ಗುರುಗ್ರಾಮ(ಹರಿಯಾಣ): ಕರ್ತವ್ಯದಲ್ಲಿದ್ದ ಪಾನಮತ್ತ ಪೇದೆಗಳಿಬ್ಬರು ಕರೊನಾ ಶಂಕಿತೆ ಮಾನಸಿಕ ಅಸ್ವಸ್ಥೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾದ ಘಟನೆ ಗುರುಗ್ರಾಮದ ಆಸ್ಪತ್ರೆಯೊಂದರಲ್ಲಿ ನಡೆದಿದೆ.

    ಆರೋಪಿ ಪೇದೆಗಳನ್ನು ಬಂಧಿಸಲು ಹೋದಾಗ ಪೊಲೀಸರಿಗೆ ಗುಂಡು ಹಾರಿಸುವುದಾಗಿ ಬೆದರಿಸಿ ಪರಾರಿಯಾಗಿದ್ದಾರೆ. ಇಬ್ಬರನ್ನು ತಕ್ಷಣವೇ ಅಮಾನತು ಮಾಡಲಾಗಿದ್ದು, ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆ ಬಲೆ ಬೀಸಿದ್ದಾರೆ.

    ಇದನ್ನೂ ಓದಿ: ಮಧ್ಯರಾತ್ರಿ ಮನೆಯೊಳಗೆ ನುಗ್ಗಿದ ಕಾರಿನಿಂದ ಗಾಡ ನಿದ್ರೆಯಲ್ಲಿದ್ದ ಕುಟುಂಬದ ಸ್ಥಿತಿ ಏನಾಯ್ತು?

    ಘಟನೆ ಮಂಗಳವಾರ ನಡೆದಿದ್ದು, ಶುಕ್ರವಾರ ಎಫ್​ಐಆರ್​ ದಾಖಲಾಗಿದೆ. ಎಫ್​ಐಆರ್​ ಪ್ರಕಾರ ಮಂಗಳವಾರ ರಾತ್ರಿ ಗುರುಗ್ರಾಮದ ಸೆಕ್ಟರ್​ 31ರಲ್ಲಿ ಬರುವ ಸರ್ಕಾರಿ ಪಾಲಿಕ್ಲೀನಿಕ್​ನಲ್ಲಿ ಆರೋಪಿಗಳನ್ನು ದುಷ್ಕೃತ್ಯ ಎಸಗಿದ್ದಾರೆ. ಪೇದೆಗಳಾದ ರಾಜೇಶ್​ ಮತ್ತು ಬಿಜೆಂದರ್​ರನ್ನು ಆಸ್ಪತ್ರೆಯ​ ಕೈದಿಗಳ ವಾರ್ಡ್​ ಹೊರಭಾಗದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅವರ ಬಳಿ ಒಂದು ರೈಫಲ್​ ಕೂಡ ಇತ್ತು.

    ಕರ್ತವ್ಯದಲ್ಲಿ ಇರುವಾಗಲೇ ಇಬ್ಬರು ಮದ್ಯ ಸೇವನೆ ಮಾಡಲು ಆರಂಭಿಸಿದ್ದಾರೆ. ಕುಡಿತದ ಗುಂಗಿನಲ್ಲಿದ್ದ ಆರೋಪಿಗಳು ಬಳಿಕ ಆಸ್ಪತ್ರೆಯ ಪ್ರತ್ಯೇಕ ವಾರ್ಡ್​ ಕಡೆ ಚಲಿಸಿ, ಕರೊನಾ ಶಂಕಿತೆ ಮಾನಸಿಕ ಅಸ್ವಸ್ಥೆಯೊಂದಿಗೆ ಜತೆ ಅಸಭ್ಯ ವರ್ತನೆ ಮಾಡಲು ಆರಂಭಿಸಿದ್ದಾರೆ. ಈ ವೇಳೆ ಮಹಿಳೆ ಅವರಿಬ್ಬರಿಂದ ಬಿಡಿಸಿಕೊಳ್ಳಲು ಯತ್ನಿಸಿದ್ದಾಳೆ. ಸಾಧ್ಯವಾಗದಿದ್ದಾಗ ಅರಚುತ್ತಾ, ಅಳುವುದಕ್ಕೆ ಆರಂಭಿಸಿದ್ದಾಳೆ. ಇದನ್ನು ಕೇಳಿದ ಆಸ್ಪತ್ರೆ ಸಿಬ್ಬಂದಿ ತಕ್ಷಣ ಘಟನಾ ಸ್ಥಳವನ್ನು ಸೇರಿದ್ದಾರೆ.

    ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದ ಪೇದೆಗಳು ಸಿಸಿಟಿವಿ ಕ್ಯಾಮರಾವನ್ನು ಹೊಡೆದು ಹಾಕಿ ಸಾಕ್ಷ್ಯಾನಾಶ ಮಾಡುವುದಾಗಿ ಕೂಗಾಡಿದ್ದಾರೆ. ಈ ವೇಳೆ ಕರ್ತವ್ಯದಲ್ಲಿದ್ದ ಪೇದೆಗಳು ಓಡಿಬಂದು ತಡೆಯಲು ಯತ್ನಿಸಿದ್ದಾರೆ. ಆದರೆ, ಅವರ ಮಾತನ್ನು ಕೇಳದೇ, ಸುಮಾರು 20 ನಿಮಿಷ ಸ್ಥಳದಲ್ಲಿ ಹೈಡ್ರಾಮ ಸೃಷ್ಟಿಸಿ, ಫೈರಿಂಗ್​ ಮಾಡುವುದಾಗಿ ಬೆದರಿಕೆಯೊಡ್ಡಿ, ರೈಫಲ್​ನೊಂದಿಗೆ ಓಡಿಹೋಗಿದ್ದಾರೆ.

    ಇದನ್ನೂ ಓದಿ: ವಿದ್ಯುತ್ ಬಿಲ್ ನೀಡಲು ತೆರಳಿದ ಮನೆ ಮಾಲೀಕರು ನವ ದಂಪತಿಯ ಸ್ಥಿತಿ ಕಂಡು ಕಂಗಾಲಾಗಿದ್ದೇಕೆ?

    ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿಯ ದೂರಿನನ್ವಯ ಎಫ್​ಐಆರ್​ ದಾಖಲಾಗಿದೆ. ಪೇದೆಗಳಿಬ್ಬರ ವಿರುದ್ಧ ಐಪಿಸಿ ಸೆಕ್ಸನ್​ 354 (ಕಿರುಕುಳ), 34 (ಸಾಮಾನ್ಯ ಉದ್ದೇಶ), 427 (ಆಸ್ತಿ ಹಾನಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. (ಏಜೆನ್ಸೀಸ್​)

    VIDEO| ಲಾಕ್​ಡೌನ್​ ಉಲ್ಲಂಘಿಸಿದವನಿಗೆ ಡ್ಯಾನ್ಸ್​ ಮಾಡಲು ಹೇಳಿ ಎಡವಟ್ಟು ಮಾಡ್ಕೊಂಡ ಪೊಲೀಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts