More

    2.79 ಲಕ್ಷ ಪಡಿತರ ಕುಟುಂಬಗಳಿಗೆ 16.23 ಕೋಟಿ ರೂ.ಜಮಾ

    ಚಿತ್ರದುರ್ಗ: ಜಿಲ್ಲೆಯಲ್ಲಿರುವ 4,02,618 ಪಡಿತರ ಚೀಟಿಗಳ ಪೈಕಿ ಸಕ್ರಿಯ ಮತ್ತು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಆಗಿರುವ ಅರ್ಹ 27983 6 ಅರ್ಹ ಪಡಿತರ ಕುಟುಂಬಗಳ ಮುಖ್ಯಸ್ಥರ ಬ್ಯಾಂಕ್ ಖಾತೆಗಳಿಗೆ ಒಟ್ಟು 16.23 ಕೋಟಿ ರೂ.ಗಳನ್ನು ಜಮಾ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ತಿಳಿಸಿದ್ದಾರೆ.


    ಆದ್ಯತಾ ಮತ್ತು ಅಂತ್ಯೋದಯ ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ ಹೆಚ್ಚುವರಿಯಾಗಿ 5 ಕೆ.ಜಿ ಅಕ್ಕಿ ವಿತರಿಸಲು ಉದ್ದೇಶಿಸಲಾ ಗಿದ್ದು,5 ಕೆ.ಜಿ ಅಕ್ಕಿಯ ಬದಲಿಗೆ ಪಡಿತರ ಚೀಟಿ ಕುಟುಂಬದ ಪ್ರತಿ ಫಲಾನುಭವಿಗೆ ಪ್ರತಿ ಕೆ.ಜಿ.ಗೆ 34 ರೂ.,ಪ್ರತಿ ಸದಸ್ಯರಿಗೆ 170 ರೂ. ಗಳಂತೆ ಕುಟುಂಬದ ಮುಖ್ಯಸ್ಥರ ಖಾತೆಗೆ ನಗದು ವರ್ಗಾವಣೆ ಮಾಡಲಾಗಿದೆ.

    ಅಂತ್ಯೋದಯ ಅನ್ನಯೋಜನೆ ಪಡಿತರ ಚೀಟಿ ಹೊಂದಿರುವ ಕುಟುಂಬದಲ್ಲಿ 3 ಅಥವಾ 3ಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬ ವು ಈಗಾಗಲೇ ಪ್ರತಿ ತಿಂಗಳು 35 ಕೆ.ಜಿ ಆಹಾರಧಾನ್ಯ ಪಡೆಯುತ್ತಿರುವುದರಿಂದ ಅಂತಹ ಕುಟುಂಬಗಳಿಗೆ ನಗದು ಸೌಲಭ್ಯ ಇಲ್ಲ. ಆದರೆ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಯ ಕುಟುಂಬದಲ್ಲಿ 4 ಸದಸ್ಯರಿದ್ದರೆ ಈ ಕುಟುಂಬವು ರೂ.170/-ಗಳನ್ನು,5 ಸ ದಸ್ಯರನ್ನು ಹೊಂದಿರುವ ಕುಟುಂಬವು 510 ರೂ.,6 ಸದಸ್ಯರನ್ನು ಹೊಂದಿರುವ ಕುಟುಂಬವು 850 ರೂ.ಪಡೆಯುತ್ತಿದ್ದು,ಹೆಚ್ಚಿನ ಸದಸ್ಯ ರಿದ್ದಲ್ಲಿ ಇದೇ ಅನುಪಾತದಲ್ಲಿ ನಗದು ಜಮಾ ಮುಂದುವರಿಯುತ್ತದೆ.

    ಕಳೆದ ಮೂರು ತಿಂಗಳಲ್ಲಿ ಪಡಿತರ ಆಹಾರಧಾನ್ಯ ಪಡೆದಿರುವ ಕುಟುಂಬಗಳು ನಗದು ಸೌಲಭ್ಯಕ್ಕೆ ಅರ್ಹವಾಗಿದೆ. ನಗದು ಸೌಲಭ್ಯದ ಕುರಿತಂತೆ ಪಡಿತರ ಚೀಟಿದಾರರು ಹೆಚ್ಚಿನ ಮಾಹಿತಿಗೆ ನ್ಯಾಯ ಬೆಲೆ ಅಂಗಡಿಗಳನ್ನು ಸಂಪರ್ಕಿಸುವಂತೆ ಡಿಸಿ ತಿಳಿಸಿದ್ದಾರೆ.


    (ಡಿಸಿ ಮಗ್ ಶಾಟ್)


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts