More

    ಬೂದಿಯಾಯಿತು 2.42 ಕ್ವಿಂಟಾಲ್ ಗಾಂಜಾ

    ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಅವಳಿನಗರ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಗಳು ಹಾಗೂ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಗಳ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾದ 2.42 ಕ್ವಿಂಟಾಲ್ ಗಾಂಜಾ ಹಾಗೂ ಮಾದಕ ವಸ್ತುಗಳನ್ನು ಶನಿವಾರ ತಾರಿಹಾಳ ಹೊರವಲಯದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಯಿತು.

    ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಈ ಕಾರ್ಯಾಚರಣೆ ನಡೆಯಿತು. ಕಮೀಷನ ರೇಟ್​ನ ವಿವಿಧ ಠಾಣೆ ವ್ಯಾಪ್ತಿಯಲ್ಲಿ 2020ರಿಂದ 2021ನೇ ಸಾಲಿನ ಇಲ್ಲಿಯವರೆಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಹಾಗೂ ಸಂಗ್ರಹ ಮಾಡಿ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿ 2 ಕ್ವಿಂಟಾಲ್ 34 ಕೆಜಿ 750 ಗ್ರಾಂ ಗಾಂಜಾ ಹಾಗೂ ಮಾದಕ ವಸ್ತು ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅವುಗಳನ್ನೆಲ್ಲ ಸೀಲ್ ಮಾಡಿ ಇಡಲಾಗಿತ್ತು. ವರ್ಷಗಳಿಂದ ವಶಪಡಿಸಿಕೊಂಡಿದ್ದ ಅಕ್ರಮ ಗಾಂಜಾವನ್ನು ಪೊಲೀಸರು ಏನು ಮಾಡುತ್ತಾರೆ ಎಂಬ ಸಹಜ ಕುತೂಹಲ ಸಾರ್ವಜನಿಕರಲ್ಲಿ ಇತ್ತು.

    ಇದೀಗ ಪೊಲೀಸರು ಜನರ ಕುತೂಹಲ ತಣಿಸಿದ್ದಾರೆ. ನ್ಯಾಯಾಲಯದ ಅನುಮತಿ ಮೇರೆಗೆ ಮಾದಕ ದ್ರವ್ಯ ವಿರೋಧಿ ದಿನದಂದೇ ಮುಹೂರ್ತ ಇಟ್ಟು ಗಾಂಜಾವನ್ನು ವೈಜ್ಞಾನಿಕ ರೀತಿಯಲ್ಲಿ ಸುಟ್ಟು ಹಾಕಿದ್ದಾರೆ.

    ನ್ಯಾಯಾಲಯದ ಸೂಚನೆ ಮೇರೆಗೆ ಪೊಲೀಸ್ ಇಲಾಖೆಯು ಮಾದಕ ವಸ್ತುಗಳ ವಿಲೇವಾರಿ ಸಮಿತಿ ರಚಿಸಿತ್ತು. ಸಮಿತಿ ಅಧ್ಯಕ್ಷ ಸಂಚಾರ ವಿಭಾಗದ ಡಿಸಿಪಿ ಆರ್.ಬಿ. ಬಸರಗಿ ಅವರ ನೇತೃತ್ವದಲ್ಲಿ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ವೈದ್ಯಕೀಯ ತ್ಯಾಜ್ಯ ಸುಡುವ ಮಾದರಿಯಲ್ಲಿ ಗಾಂಜಾವನ್ನು ಸುಟ್ಟು ಹಾಕಲಾಯಿತು.

    ಎಸ್​ಪಿ ಅಧ್ಯಕ್ಷತೆಯಲ್ಲಿ ನಾಶ

    ಧಾರವಾಡ; ಜಿಲ್ಲಾ ಪೊಲೀಸ್ ಇಲಾಖೆಯಿಂದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ದಾಳಿ ನಡೆಸಿದ 6 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 8 ಕೆಜಿ 766 ಗ್ರಾಂ ಗಾಂಜಾವನ್ನು ಎಸ್​ಪಿ ಕೃಷ್ಣಕಾಂತ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಾಶಪಡಿಸಲಾಯಿತು. ತಾರಿಹಾಳ ಕೈಗಾರಿಕಾ ಪ್ರದೇಶದ ರಿವೋಗ್ರೀನ್ ಇಂಡಿಯಾ ಲಿ., ಕಾಮನ್ ಬಯೋಮೆಡಿಕಲ್ ವೇಸ್ಟ್ ಟ್ರೀಟ್​ವೆುಂಟ್ ಮತ್ತು ಡಿಸ್ಪೋಸಲ್ ಫೆಸಿಲಿಟಿ ಕೇಂದ್ರದಲ್ಲಿ ಪ್ಯಾಕಿಂಗ್ ಬಿಡಿಸಿ ಬೆಂಕಿಗೆ ಹಾಕಲಾಯಿತು. ಈ ಹಿಂದೆ, 19 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 11 ಕೆಜಿ 146 ಗ್ರಾಂ ಗಾಂಜಾವನ್ನು ಮಾ. 6ರಂದು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿತ್ತು ಎಂದು ಎಸ್​ಪಿಯವರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts