More

    ಆನೆಕಾಲು ರೋಗ ಮುಕ್ತ ಚಿಂಚೋಳಿ ನಿರ್ಮಿಸೋಣ

    ಚಿಂಚೋಳಿ: ಆನೆಕಾಲು ಮುಕ್ತ ಚಿಂಚೋಳಿ ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದ್ದು, ಆರೋಗ್ಯ ಇಲಾಖೆಗೆ ತಾಲೂಕು ಆಡಳಿತ ಸಂಪೂರ್ಣ ಸಹಕಾರ ನೀಡಬೇಕು ಎಂದು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಹೇಳಿದರು.

    ಚಂದಾಪುರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಗುರುವಾರ ಆಯೋಜಿಸಿದ್ದ ಸಾಮೂಹಿಕ ಔಷಧಿ ಸೇವನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಎಲ್ಲರೂ ಮಾತ್ರೆ ಸೇವಿಸಿ, ರೋಗದಿಂದ ದೂರವಿರಬೇಕು. ಸೊಳ್ಳೆ ಕಡಿತದಿಂದ ಆನೆಕಾಲು ರೋಗ ಹರಡುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು. ಅಲ್ಬೆಂಡಜೋಲ್ ಸೇರಿ ಇನ್ನಿತರ ಮಾತ್ರಗಳಿಂದ ಯಾವುದೇ ಅಡ್ಡಪರಿಣಾಮವಿಲ್ಲ ಎಂದರು.

    ತಾಪಂ ಇಒ ಶಂಕರ ರಾಠೋಡ್, ಕ್ಷೇತ್ರ ಶಿಕ್ಷಣ ಇಲಾಖೆ ಸಮನ್ವಯ ಅಧಿಕಾರಿ ನಾಗಶೆಟ್ಟಿ ಭದ್ರಶೆಟ್ಟಿ, ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಶಾಮರಾವ ಮೋಘಾ, ಪ್ರೇಮಿಳಾ, ಮೀನಾಕ್ಷಿ, ಡಾ.ಸಂತೋಷ ಪಾಟೀಲ್, ರವಿಕುಮಾರ ಚಿಟ್ಟಾ, ನೀಲಕಂಠ ಜಾಧವ್, ಕಿರಣಕುಮಾರ, ಕವಿತಾ ಇತರರಿದ್ದರು.

    ಚಿಂಚೋಳಿಯಲ್ಲಿ ಸುಮಾರು ೧,೩೨,೦೩೫ ಲಕ್ಷ ಜನರಿಗೆ ಡಿಇಸಿ ಮಾತ್ರೆ ವಿತರಿಸುವ ಗುರಿ ಹೊಂದಲಾಗಿದೆ. ೨೭,೬೯೯ ಮನೆ ಮನೆಗಳಿಗೆ ಭೇಟಿ ನೀಡಿ ಮಾತ್ರೆ ಸೇವನೆಗೆ ಮುಂದಾಗಲಿದೆ. ಪ್ರತಿ ೧೦ ಜನಕ್ಕೆ ಒಂದು ತಂಡ ಮಾಡಿ ೨೦ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ.
    | ಡಾ.ಮಹ್ಮದ್ ಗಫಾರ್, ತಾಲೂಕು ಆರೋಗ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts