More

    2 ವಾರದಲ್ಲಿ ವೇದಾಂತ ಆಸ್ಪತ್ರೆ ಸಜ್ಜು

    ಹುಬ್ಬಳ್ಳಿ: ವೇದಾಂತ ಕಂಪನಿಯವರು ತಮ್ಮ ಕಾಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್​ಆರ್) ನಿಧಿಯಿಂದ ಇಲ್ಲಿಯ ಕಿಮ್್ಸ ಆವರಣದಲ್ಲಿ ನಿರ್ವಿುಸಲಿರುವ 100 ಹಾಸಿಗೆಯ ಆಸ್ಪತ್ರೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬುಧವಾರ ಸಂಜೆ ಭೂಮಿ ಪೂಜೆ ನೆರವೇರಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೇಕ್ ಶಿಫ್ಟ್ (ಸ್ಥಳಾಂತರ ಸಾಧ್ಯವಾಗುವ) ಮಾದರಿಯ ಆಸ್ಪತ್ರೆ ಇದಾಗಿದೆ. ತಮ್ಮ ಕೋರಿಕೆಯ ಮೇರೆಗೆ ವೇದಾಂತ ಕಂಪನಿಯವರು 6 ಕೋಟಿ ರೂ.ಗಿಂತ ಅಧಿಕ ವೆಚ್ಚದಲ್ಲಿ ನಿರ್ವಿುಸಿಕೊಡಲಿದ್ದಾರೆ. ಈಗಾಗಲೇ ಕಬ್ಬಿಣದ ಕಂಬ, ಭಾರಿ ಗಾತ್ರದ ತೊಲೆ, ಆಂಗಲ್ ಪಟ್ಟಿ ಇತ್ಯಾದಿಗಳು ಬಂದಿದ್ದು, ಕೇವಲ 2 ವಾರದಲ್ಲಿ ನಿರ್ಮಾಣ ಪೂರ್ಣಗೊಳ್ಳಲಿದೆ. ತೀವ್ರ ನಿಗಾ ಘಟಕ, ಎಲ್ಲ ನೂರು ಹಾಸಿಗೆಗಳು ಆಕ್ಸಿಜನ್ ವ್ಯವಸ್ಥೆ ಹೊಂದಿರುವುದು ಇದರ ವಿಶೇಷವಾಗಿದೆ. ಕೋವಿಡ್ ರೋಗಿಗಳ ಉಪಚಾರಕ್ಕಾಗಿಯೇ ಈ ಆಸ್ಪತ್ರೆಯನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

    ಈಗಾಗಲೇ ಕಿಮ್್ಸ ಅವರಣದಲ್ಲಿ ನಿರ್ವಣವಾಗಿರುವ 65 ಹಾಸಿಗೆಗಳ ಇನ್ನೊಂದು ಮೇಕ್ ಶಿಫ್ಟ್ ಆಸ್ಪತ್ರೆಯ ಸಂಪರ್ಕ ಮಾರ್ಗದಲ್ಲಿ ಪೇವರ್ಸ್ ಅಳವಡಿಕೆ ಮಾತ್ರ ಬಾಕಿ ಇದೆ. ಶುಕ್ರವಾರದ ಹೊತ್ತಿಗೆ ಅಲ್ಲಿ ರೋಗಿಗಳನ್ನು ದಾಖಲಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

    ಕಿಮ್್ಸ ಪ್ರಭಾರ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ, ಪ್ರಭಾರ ಪ್ರಾಚಾರ್ಯ ಡಾ. ಈಶ್ವರ ಹೊಸಮನಿ, ಆರ್​ಎಂಒ ಡಾ. ಸಿದ್ದೇಶ್ವರ ಕಟಕೋಳ, ಕೋವಿಡ್ ನೋಡಲ್ ಅಧಿಕಾರಿ ಡಾ. ಲಕ್ಷ್ಮೀಕಾಂತ ಲೋಕರೆ, ಇತರರು ಇದ್ದರು.

    ಕಿಮ್್ಸ ಆಸ್ಪತ್ರೆಗೆ 27 ವೆಂಟಿಲೇಟರ್ ಹಸ್ತಾಂತರ

    ಪಿಎಂ ಕೇರ್ ಫಂಡ್​ನಿಂದ ಪೂರೈಕೆಯಾದ 27 ವೆಂಟಿಲೇಟರ್​ಗಳನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕಿಮ್್ಸ ಆಸ್ಪತ್ರೆಗೆ ಹಸ್ತಾಂತರಿಸಿದರು. ತುರ್ತು ಅವಶ್ಯಕತೆ ಇರುವ ಸಂದರ್ಭದಲ್ಲೇ ಈ ಸೌಲಭ್ಯ ಒದಗಿಸಿದ್ದಕ್ಕಾಗಿ ಪ್ರಧಾನ ಮಂತ್ರಿ ಹಾಗೂ ರಾಜ್ಯ ಸರ್ಕಾರಕ್ಕೆ ಕೃತಜ್ಞರಾಗಿರುವುದಾಗಿ ಅವರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts