More

    2 ಕೆ.ಜಿ ಅಕ್ರಮ ಗಾಂಜಾ ವಶ, ನಾಲ್ವರ ಬಂಧನ

    ಚಿತ್ರದುರ್ಗ: ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮ ಗಾಂಜಾ ಸಾಗಣಿಕೆ ಮಾಡುತ್ತಿದ್ದ 2 ಪ್ರತ್ಯೇಕ ಪ್ರಕರಣ ಬೇಧಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿ 2 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

    ಹಿರಿಯೂರು ತಾಲೂಕು ಗಾರೇದಿಂಡು ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಅಕ್ರಮ ಗಾಂಜಾ ಸಾಗಣೆ ಮಾಡುತ್ತಿದ್ದ ಕಂದಿಕೆರೆ ಗ್ರಾಮದ ಯಶವಂತ, ಹಿರಿಯೂರು ಪಟ್ಟಣದ ಎಚ್.ಎನ್.ಭರತ್ ಎಂಬ ಆರೋಪಿತರನ್ನು ಬಂಧಿಸಿ 300 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಇನ್ಸ್‌ಪೆಕ್ಟರ್ ಎ.ವನಿತಾ, ಎಎಸ್‌ಐ ನಾಗರಾಜ, ಕಾನ್ಸ್‌ಟೇಬಲ್ ರಾಮಾಂಜನೇಯ, ವಾಹನ ಚಾಲಕ ನಾಗರಾಜ ಕೆ.ತೋಳಮಟ್ಟಿ ಇದ್ದರು.

    ಮೊಳಕಾಲ್ಮುರು ತಾಲೂಕಿನ ವೆಂಕಟಾಪುರ ಗ್ರಾಮದ ಹಡಗಿಲಿ ಬಳಿ ದ್ವಿಚಕ್ರ ವಾಹನದಲ್ಲಿ ಅಕ್ರಮ ಗಾಂಜಾ ಸಾಗಣೆ ಮಾಡುತ್ತಿದ್ದ, ಆಂಧ್ರಪ್ರದೇಶದ ರಾಯದುರ್ಗ ತಾಲೂಕಿನ ಮಲ್ಲಪ್ಪ, ಗೊಲ್ಲ ಕೆಂಜಅಡಪ್ಪ ಆರೋಪಿತರನ್ನು ಬಂಧಿಸಿ 1,726 ಗ್ರಾಂ ಗಾಂಜಾ ವಶಪಡಿಸಿಕೊಳ್ಳಾಗಿದೆ. ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಜಿಲ್ಲಾ ವಿಚಕ್ಷಣಾ ದಳದ ಅಬಕಾರಿ ಎಎಸ್‌ಐ ಕೆ.ಸಿದ್ದೇಶ್‌ನಾಯ್ಕ್, ಕಾನ್ಸ್‌ಟೇಬಲ್ ಜೆ.ಬಸವರಾಜ, ವಾಹನ ಚಾಲಕ ಎಸ್.ತಿಪ್ಪೆಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts