More

    2ಎ ಮೀಸಲಾತಿ ಪಡದೇ ತೀರುತ್ತೇವೆ

    ಗೋಕಾಕ, ಬೆಳಗಾವಿ: ಪಂಚಮಸಾಲಿ ನಾಯಕರು ಮಾತನಾಡಿದರೆ ಕೆಲವರು ಅವರ ಮೇಲೆ ಹರಿಹಾಯುತ್ತಿದ್ದಾರೆ. ಪಂಚಮಸಾಲಿಗಳು ಒಂದಾಗುತ್ತಿದ್ದರೆ ಬೇರೆಯವರಿಗೆ ತೊಂದರೆಯಾಗುತ್ತಿದೆ. ಇದು ಕಾಂಗ್ರೆಸ್, ಬಿಜೆಪಿಯದ್ದಲ್ಲ, ಸಮುದಾಯದ ಹೋರಾಟ. ಡಿಸೆಂಬರ್ 12ರ ಒಳಗೆ ಮೀಸಲಾತಿ ಪಡದೇ ತೀರುತ್ತೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

    ನಗರದ ನ್ಯೂ ಇಂಗ್ಲಿಷ್ ಶಾಲಾ ಆವರಣದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಜಿಲ್ಲಾ ಘಟಕ ಬೆಳಗಾವಿ ಹಾಗೂ ತಾಲೂಕು ಘಟಕ ಗೋಕಾಕ ವತಿಯಿಂದ 2ಎ ಮೀಸಲಾತಿಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಲಿಂಗಾಯತ ಪಂಚಮಸಾಲಿ ಸಮಾವೇಶದಲ್ಲಿ ಅವರು ಮಾತನಾಡಿದರು. ಅರಬಾವಿ ಮತ್ತು ಗೋಕಾಕದಲ್ಲಿ ಸಭೆ ಮಾಡಲು ಅಂಜಿಕೆಯಾಗುತ್ತಿತ್ತು. ಆದರೆ, ಈರಣ್ಣ ಕಡಾಡಿ ಸಹಕಾರದಿಂದ ಸಾಧ್ಯವಾಗಿದೆ. ಮೀಸಲಾತಿ ಹೋರಾಟಕ್ಕೆ ಗೋಕಾಕ 5ಜಿ ಶಕ್ತಿ ತಂದು ಕೊಟ್ಟಿದೆ ಎಂದರು. ಈರಣ್ಣ ಕಡಾಡಿ ಅವರಿಗೆ ಅವಮಾನ ಮಾಡಿದ್ದು ಖಂಡನೀಯ. ಪಂಚಮಸಾಲಿ ಸಮುದಾಯ ಅದನ್ನು ಖಂಡಿಸುತ್ತದೆ ಎಂದರು.

    ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಾತನಾಡಿ, ಲಿಂಗಾಯತರು 11 ರೂ ಪಟ್ಟಿ ಕೊಟ್ಟವರು ಎಂದು ಸಮುದಾಯವನ್ನು ಟೀಕಿಸಿದ್ದವರಿಗೆ ಲಿಂಗಾಯತರು ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ. ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ನಮ್ಮ ಸಮುದಾಯದವರೇ ಅನ್ಯಾಯ ಮಾಡಿದಾಗ ಅವರ ಪರವಾಗಿ ಮಾತನಾಡಿದ್ದು ನಾನೇ. ಯಮಕನಮರಡಿ ಸಾಮಾನ್ಯ ಕ್ಷೇತ್ರವಾಗಿದ್ದರೆ ನಾನೇ ಚುನಾವಣೆಗೆ ನಿಲ್ಲುತ್ತಿದ್ದೆ ಎಂದು ಸತೀಶ ಜಾರಕಿಹೊಳಿ ಅವರಿಗೆ ಟಾಂಗ್ ನೀಡಿದರು. ಹಿಂದುತ್ವದ ಬಗ್ಗೆ ಮಾತನಾಡಿ ಕ್ಷೇಮೆ ಕೇಳಿದ್ದೀರಿ. ಮುಂದೆ ಮಾತನಾಡಿದರೆ ಕ್ಷಮಿಸಲು ಸಾಧ್ಯವಿಲ್ಲ ಎಂದು ಗುಡುಗಿದರು.
    ಮಾಜಿ ಶಾಸಕ ಎಚ್.ಎಸ್.ಶಿವಶಂಕರ ಮಾತನಾಡಿ, ಪೊಲೀಸ್ ಸರ್ಪಗಾವಲಿನಲ್ಲಿ ಪಂಚಮಸಾಲಿ ಸಮಾವೇಷ ನಡೆಯುತ್ತಿರುವುದು ವಿಷಾದವೆನಿಸುತ್ತದೆ. ನಮ್ಮ ಸಮಾಜಕ್ಕೆ ಪೊಲೀಸರ ಅವಶ್ಯಕತೆ ಇಲ್ಲ. ಸತೀಶ ಅವರು ತಮ್ಮ ನಿಲುವು ಪ್ರಸ್ತಾಪಿಸಿದ್ದರು. ಅದಕ್ಕೆ ಯತ್ನಾಳ ತಮ್ಮ ಅಭಿಪ್ರಾಯ ಹೇಳಿದ್ದರು. ಕೆಲವರು ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡು ಯತ್ನಾಳ ಗೋಕಾಕ ಸಮಾವೇಶಕ್ಕೆ ಬಂದರೆ ನೋಡಿಕೊಳ್ಳುತ್ತೇನೆ ಎಂದು ಕೆಲವರು ಹೇಳಿದ್ದು ಕೇಳಿದ್ದೆ. ಯತ್ನಾಳ ಸಮಾವೇಶಕ್ಕೆ ಬಂದಿದ್ದಾರೆ.

    ಎಲ್ಲಿದ್ದಿರಪ್ಪ ಎಂದು ಸತೀಶ ಜಾರಕಿಹೊಳಿ ಅಭಿಮಾನಿಗಳನ್ನು ಕೆಣಕಿದರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಸಚಿವ ವಿನಯ ಕುಲಕರ್ಣಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ವಿಜಯಾನಂದ ಕಾಶಪ್ಪನವರ, ಶಾಸಕ, ಅರವಿಂದ ಬೆಲ್ಲದ ಮಾತನಾಡಿದರು. ಪಂಚಮಸಾಲಿ ಸಮುದಾಯದ ಮುಖಂಡರು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts