More

    ಐಪಿಎಲ್​ ದಾಖಲೆ ಹಿಂದಿಕ್ಕಿದ ಪ್ರಧಾನಿ ಮೋದಿಯ ಲಾಕ್​ಡೌನ್​ ಘೋಷಣೆ: ಟಿವಿ ಲೋಕದಲ್ಲಿ ಹೊಸ ಇತಿಹಾಸ

    ನವದೆಹಲಿ: ಕಿಲ್ಲರ್​ ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಮಹತ್ವದ ಲಾಕ್​ಡೌನ್​ ನಿರ್ಧಾರದ ಭಾಷಣವೂ ಟಿವಿ ಲೋಕದಲ್ಲಿ ಹೊಸ ಇತಿಹಾಸ ಬರೆದಿದೆ.

    ಭಾರತೀಯ ಬ್ರಾಡ್​ಕಾಸ್ಟ್​ ಆಡಿಯನ್ಸ್​ ರೀಸರ್ಚ್​ ಕೌನ್ಸಿಲ್​(ಬಿಎಆರ್​ಸಿ) ಮತ್ತು ನೈಲ್ಸೆನ್​ ಸಂಸ್ಥೆ ಶುಕ್ರವಾರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ ಬರೋಬ್ಬರಿ 197 ಮಿಲಿಯನ್(19.7 ಕೋಟಿ)​ ಮಂದಿ ಮೋದಿ ಭಾಷಣವನ್ನು ದೇಶಾದ್ಯಂತ ವೀಕ್ಷಣೆ ಮಾಡಿದ್ದಾರೆ.

    ಅಂದಹಾಗೆ ಪ್ರಧಾನಿ ಮೋದಿ ಅವರು ಮಾರ್ಚ್​ 24ರ ರಾತ್ರಿ 8 ಗಂಟೆಗೆ ರಾಷ್ಟ್ರವ್ಯಾಪಿ ಸಂಪೂರ್ಣ ಲಾಕ್​ಡೌನ್​ಗೆ ಕರೆಕೊಟ್ಟರು. ವಿಡಿಯೋ ಕಾನ್ಫರೆನ್ಸ್​ ಮೂಲಕ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ಇದು ಈವರೆಗಿನ ಅತ್ಯಂತ ದೊಡ್ಡ ನ್ಯೂಸ್​ ಈವೆಂಟ್ ಎನಿಸಿಕೊಂಡಿದೆ. ಈ ಮೂಲಕ ಐಪಿಎಲ್​ ಟೂರ್ನಿಯ 133 ಮಿಲಿಯನ್​ ವೀಕ್ಷಣೆಯ ದಾಖಲೆಯನ್ನು ಹಿಂದಿಕ್ಕಿದೆ.​

    ಲಾಕ್​ಡೌನ್​ ಘೋಷಣೆ ವೀಕ್ಷಿಸಿದ ಸಮಯಗಳ ಸಂಖ್ಯೆಯೂ 3,891 ಮಿಲಿಯನ್ ನಿಮಿಷಗಳಾಗಿವೆ. ಹಾಗೇ ದೇಶಾದ್ಯಂತ 201 ಚಾನೆಲ್​ಗಳು ಮೋದಿ ಭಾಷಣವನ್ನು ವರದಿ ಮಾಡಿವೆ.​​ ಒಟ್ಟಾರೆ ಪ್ರಧಾನಿ ಮೋದಿ ಅವರ ಈ ಹಿಂದಿನ ಭಾಷಣಗಳ ದಾಖಲೆಯನ್ನೇ ಲಾಕ್​ಡೌನ್​ ಘೋಷಣೆ ಮುರಿದಿದೆ.

    ಜಮ್ಮು ಮತ್ತು ಕಾಶ್ಮೀರಕ್ಕೇ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿರುವುದಾಗಿ 2019, ಆಗಸ್ಟ್​ 8ರಂದು ಪ್ರಧಾನಿ ಮೋದಿ ಮಾಡಿದ್ದ ಘೋಷಣೆಯನ್ನು 65 ಮಿಲಿಯನ್​(6.5 ಕೋಟಿ) ಮಂದಿ ವೀಕ್ಷಿಸಿದ್ದರು. ವೀಕ್ಷಣೆಯ ಸಮಯ 934 ಮಿಲಿಯನ್​ ನಿಮಿಷಗಳಾಗಿತ್ತು.

    ಇನ್ನೂ 2020, ಮಾರ್ಚ್​ 19ರಂದು ಪ್ರಧಾನಿ ಕರೆ ನೀಡಿದ್ದ ಜನತಾ ಕರ್ಫ್ಯೂ ಅನ್ನು 83 ಮಿಲಿಯನ್ (8.3 ಕೋಟಿ) ಮಂದಿ ನೋಡಿದ್ದರು. ವೀಕ್ಷಣೆಯ ಸಮಯ 1275 ನಿಮಿಷಗಳಾಗಿತ್ತು. 2016, ನವೆಂಬರ್​ 8ರ ನೋಟ್​ ಬ್ಯಾನ್​ ಆದೇಶವನ್ನು 57 ಮಿಲಿಯನ್​ (5.7 ಕೋಟಿ) ಮಂದಿ ವೀಕ್ಷಣೆ ಮಾಡಿದ್ದರು. ವೀಕ್ಷಣೆಯ ಸಮಯ 842 ಮಿಲಿಯನ್​ ನಿಮಿಷಗಳಾಗಿತ್ತು. (ಏಜೆನ್ಸೀಸ್​)

    ಭಾರತದ ಜಿಡಿಪಿ ಬೆಳವಣಿಗೆ ಮುನ್ನೋಟ ಶೇಕಡ 2.5ಕ್ಕೆ ಇಳಿಕೆ: ಡೇಟಾ ಪರಿಷ್ಕರಿಸಿದ ಮೂಡಿ’ಸ್

    ಚೀನಾದಲ್ಲಿ ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಿದ ಮಹತ್ವದ ನಿರ್ಧಾರವೇ ನಮ್ಮನ್ನೂ ಕಾಪಾಡಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts