ಎಂ.ಕೆ.ಹುಬ್ಬಳ್ಳಿ : ಸ್ಥಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಸರ್ಕಾರದ ಆದೇಶದನ್ವಯ ಕಬ್ಬಿನ ತೂಕ ಹಾಗೂ ಸಕ್ಕರೆ ಇಳುವರಿ ಪ್ರಮಾಣ ಪರಿಶೀಲನೆಗಾಗಿ ಗುರುವಾರ ವಿವಿಧ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ದಿಢೀರ್ ಭೇಟಿ ನೀಡಿದ ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಕೀರಪುರ ಅವರು ಕಾರ್ಮಿಕರ ರಣೆಗೆ ಸುರತಾ ಕ್ರಮ ಮತ್ತು ಸಲಕರಣೆ ಒದಗಿಸದ ಕುರಿತಾಗಿ ಕಾರ್ಖಾನೆ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯನ್ನು ಪ್ರಶ್ನಿಸಿದರು.
ಕಾರ್ಖಾನೆ ನಿರ್ದೇಶಕರು ಕಾರ್ಮಿಕರ ಸುರತೆ ಕೈಗವಸು, ಹೆಲ್ಮೆಟ್ ಸೇರಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು. 3 ದಿನಗಳ ನಂತರ ಕಾರ್ಖಾನೆಗೆ ಭೇಟಿ ನೀಡಿ ವರದಿ ಒಪ್ಪಿಸುವಂತೆ ಕಿತ್ತೂರು ತಹಸೀಲ್ದಾರ್ ರವೀಂದ್ರ ಹಾದಿಮನಿ ಅವರಿಗೆ ಸೂಚಿಸಿದರು. ಕಬ್ಬಿನ ತೂಕ ಹಾಗೂ ಸಕ್ಕರೆ, ಕಾರ್ಖಾನೆ ದಾಖಲಾತಿ ಹಾಗೂ ಲ್ಯಾಬ್ ವರದಿ ಪರಿಶೀಲಿಸಿದರು. ಸಕ್ಕರೆ ತಯಾರಿಕೆ, ಗುಣಮಟ್ಟ, ಡಿಸ್ಟಿಲರಿ ಟಕ ಸೇರಿ ಎಲ್ಲ ವಿಭಾಗದ ಕಾರ್ಯಚಟುವಟಿಕೆಯ ಮಾಹಿತಿ ಪಡೆದರು ತಹಸೀಲ್ದಾರ್ ರವೀಂದ್ರ ಹಾದಿಮನಿ, ಬೆಳಗಾವಿ ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಬೇಸಾಯ ಶಾಸದ ಸಹಾಯಕ ಅಧ್ಯಾಪಕ ಆರ್.ಬಿ.ಸುತಗುಂಡಿ, ಆಹಾರ ಇಲಾಖೆಯ ರಾಹುಲ ತಿಗಡಿ, ಎಚ್.ಬಿ.ಪಿರಜಾದೆ, ಕಾನೂನು ಮಾಪನ ಶಾಸ್ತ್ರ ಇಲಾಖೆ ಬಸವಪ್ರಭು, ಆಡಳಿಯ ಮಂಡಳಿ ನಿರ್ದೇಶಕರು, ರೆತ ಮುಖಂಡರು ಇತರರಿದ್ದರು.
ಕಾರ್ಮಿಕರಿಗೆ ಸುರಕ್ಷತಾ ಸಲಕರಣೆ ಒದಗಿಸಲಿ
ಉಪ್ಪಿನಕಾಯಿ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ; ತಿಳಿದ್ರೆ ನೀವು ಮಿಸ್ ಮಾಡೋದೆ ಇಲ್ಲ | Health Tips
ಈ ವರ್ಷ ಗೂಗಲ್ನಲ್ಲಿ ಅತಿ ಹೆಚ್ಚು ಹುಡುಕಿದ ಪಾಕವಿಧಾನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಇದರಲ್ಲಿ ಉಪ್ಪಿನಕಾಯಿ ಭಾರತದಲ್ಲಿ…
ಟಾಯ್ಲೆಟ್ನ ಕೊಳಕು ವಾಸನೆ, ಹಳದಿ ಕಲೆ ತೆಗೆದುಹಾಕುವುದೇಗೆ?; ಇಲ್ಲಿದೆ ಸಿಂಪಲ್ ವಿಧಾನ | Tips
ಮನೆಯನ್ನು ಸ್ವಚ್ಛಗೊಳಿಸಲು ಮತ್ತು ಅಲಂಕರಿಸಲು ಜನರು ಶ್ರಮಿಸುತ್ತಾರೆ. ಹೊರಗಿನಿಂದ ಅವರ ಮನೆಯು ಸಾಕಷ್ಟು ಐಷಾರಾಮಿಯಾಗಿ ಕಾಣುತ್ತದೆ.…
ಚಳಿಗಾಲದಲ್ಲಿ ಬಿಸಿ ಚಹಾ ಮತ್ತು ಕಾಫಿ ಸೇವಿಸುತ್ತಿದ್ದೀರಾ; ಅಪಾಯ ತಪ್ಪಿದಲ್ಲ.. ಎಚ್ಚರದಿಂದಿರಿ | Health Tips
ಚಳಿಗಾಲ ಬಂದ ಕೂಡಲೆ ಟೀ, ಕಾಫಿ ಸೇವನೆ ಹೆಚ್ಚುತ್ತದೆ. ಈ ಬಿಸಿ ಪಾನೀಯವು ದೇಹಕ್ಕೆ ಶಾಖವನ್ನು…