More

    ಒಂದೇ ದಿನದಲ್ಲಿ ಮಂಡ್ಯ 71, ದಾವಣಗೆರೆ 22… 12 ಜಿಲ್ಲೆ ಶಾಂತ… ನಿಮ್ಮಲ್ಲೆಷ್ಟು ಕರೊನಾ ಕೇಸ್​?

    ಬೆಂಗಳೂರು: ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆಯವರೆಗೆ ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 149ಕ್ಕೆ ಏರಿದೆ. ಮಂಡ್ಯ ಹಾಗೂ ದಾವಣಗೆರೆಯಲ್ಲಿ ಹಿಂದೆಂದಿಗಿಂತಲೂ ಈ ವೈರಸ್​ ತನ್ನ ರೌದ್ರಾವತಾರ ತೋರಿದ್ದರೆ, ಉಳಿದ ಜಿಲ್ಲೆಗಳನ್ನೂ ಇದು ಬಿಟ್ಟಿಲ್ಲ.

    ಇಲ್ಲಿಯವರೆಗೆ ಕರೊನಾ ಸೋಂಕಿತರು ಕರ್ನಾಟಕದಲ್ಲಿ 1395 ಆಗಿದ್ದು, ಈ ಪೈಕಿ 543 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 811 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಾಗಲೇ ಕರೊನಾ ಮಾರಿ 40 ಮಂದಿಯನ್ನು ಬಲಿ ಪಡೆದಿದೆ.

    ಇದನ್ನೂ ಓದಿ: ಅಸಾಧ್ಯ ಎಂದು ಸರ್ಕಾರವೇ ಕೈಚೆಲ್ಲಿದಾಗ, ಈ ಅಪ್ಪ-ಮಗ ಮಾಡಿ ತೋರಿಸಿದರೊಂದು ಅದ್ಭುತ!

    ಕಳೆದ 24 ಗಂಟೆಗಳಲ್ಲಿ ಮಂಡ್ಯದಲ್ಲಿ 71, ಕಲಬುರಗಿಯಲ್ಲಿ 22, ದಾವಣಗೆರೆ 22, ಶಿವಮೊಗ್ಗ 10, ಬೆಂಗಳೂರು ನಗರ 6, ಬಾಗಲಕೋಟೆ 5, ಚಿಕ್ಕಮಗಳೂರು 5, ಉತ್ತರಕನ್ನಡ 4, ಉಡುಪಿ 4, ಹಾಸನ 3 ಹಾಗೂ ವಿಜಯಪುರ, ಬೀದರ್​, ಗದಗ, ಯಾದಗಿರಿ, ಚಿತ್ರದುರ್ಗ, ರಾಯಚೂರುಗಳಲ್ಲಿ ತಲಾ ಕೇಸ್​ಗಳು ಪತ್ತೆಯಾಗಿವೆ.

    ಬೆಳಗಾವಿ, ಮೈಸೂರು, ಬಳ್ಳಾರಿ, ತುಮಕೂರು, ಕೋಲಾರ, ಬೆಂಗಳೂರು ಗ್ರಾಮಾಂತರ, ಹಾವೇರಿ, ಕೊಪ್ಪಳ, ಕೊಡಗುವಿನಲ್ಲಿ ಯಾವುದೇ ಹೊಸ ಕೇಸ್​ ಪತ್ತೆಯಾಗಿಲ್ಲ.

    ಇದನ್ನೂ ಓದಿ:  ಅಬ್ಬಬ್ಬಾ ನೇಪಾಳವೆ! ಲಾಕ್​ಡೌನ್​ ಇರುವಾಗಲೇ ಸದ್ದಿಲ್ಲದೆ ಭಾರತವನ್ನೂ ಕಬಳಿಸಿತಾ?

    ನಿಜಾಮುದ್ದೀನ್‌ ಮರ್ಕಜ್‌ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ಉಚಿತ ಆರೋಗ್ಯ ಸಹಾಯವಾಣಿ 080-29711171 ಸಂಪರ್ಕಿಸುವಂತೆ ಸರ್ಕಾರ ಸೂಚಿಸಿದೆ.

    ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್‌ ಅಪ್ಲಿಕೇಷ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್‌ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ: 104/ 9745697456.

                                                              ಸಂಪೂರ್ಣ ವಿವರ ಈ ಕೆಳಗಿನಂತಿದೆ:

    ಒಂದೇ ದಿನದಲ್ಲಿ ಮಂಡ್ಯ 71, ದಾವಣಗೆರೆ 22... 12 ಜಿಲ್ಲೆ ಶಾಂತ... ನಿಮ್ಮಲ್ಲೆಷ್ಟು ಕರೊನಾ ಕೇಸ್​? ಒಂದೇ ದಿನದಲ್ಲಿ ಮಂಡ್ಯ 71, ದಾವಣಗೆರೆ 22... 12 ಜಿಲ್ಲೆ ಶಾಂತ... ನಿಮ್ಮಲ್ಲೆಷ್ಟು ಕರೊನಾ ಕೇಸ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts