More

    ಜಿಲ್ಲೆಯಲ್ಲಿ ಮಳೆಯಿಂದ 188 ಕೋಟಿ ರೂ. ಹಾನಿ

    ಕಾರವಾರ: ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಬಂದಿದೆ. ಈಗ ಹಾನಿಯ ಲೆಕ್ಕಾಚಾರ ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ ಮಳೆಯಿಂದ ಇದುವರೆಗೆ 188.91 ಕೋಟಿ ರೂ. ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಸಿಎಂ ಸಿದ್ದರಾಮಯ್ಯ ಅವರಿಗೆ ವರದಿ ನೀಡಿದೆ.
    ನೆರೆ ಹಾನಿ ಪರಿಸ್ಥಿತಿಯ ಕುರಿತು ಅವರು ರಾಜ್ಯ ಎಲ್ಲ ಜಿಲ್ಲಾಧಿಕಾರಿಗಳ ಜತೆ ಬುಧವಾರ ವಿಡಿಯೋ ಸಂವಾದ ನಡೆಸಿದ್ದರು. ಜಿಲ್ಲೆಯ ಪರವಾಗಿ ಜಿಲ್ಲಾಧಿಕಾರಿ ಗಂಗುಬಾಯಿ ಮಾನಕರ್ ಅವರು ಜೂನ್ ನಿಂದ ಇದುವರೆಗಿನ ಹಾನಿಯ ವರದಿ ನೀಡಿದ್ದಾರೆ.

    ಜಿಲ್ಲಾಧಿಕಾರಿ ಹಾಗೂ ವಿವಿಧ ತಹಸೀಲ್ದಾರರ ಪಿಡಿ ಖಾತೆಯಲ್ಲಿ ವಿಪತ್ತು ಪರಿಹಾರಕ್ಕಾಗಿ 6.44 ಕೋಟಿ ರೂ. ಬಾಕಿ ಇದೆ ಎಂದು ತಿಳಿಸಲಾಗಿದೆ.

    ಇದನ್ನೂ ಓದಿ: ವಾಹನ ಚಾಲನೆಯೇ ಸವಾಲು
    ಜಿಲ್ಲೆಯಲ್ಲಿ ಒಟ್ಟು 1.91 ಕೋಟಿ ರೂ. ಮೌಲ್ಯದ 78 ಸರ್ಕಾರಿ ಶಾಲೆಗಳು, 2.68 ಕೋಟಿ ರೂ.ಮೌಲ್ಯದ 73 ಅಂಗನವಾಡಿಗಳು,8 ಲಕ್ಷ ರೂ ಮೌಲ್ಯದ 8 ಪಿಎಚ್‌ಸಿಗಳು, 142 ಕೋಟಿ ರೂ.ಮೌಲ್ಯದ 561 ಕಿಮೀ ಪಿಡಬ್ಲುಡಿ ರಸ್ತೆಗಳು, ಅಂದಾಜು 14 ಕೋಟಿ ರೂ.

    ಮೌಲ್ಯದ 291 ಕಿಮೀ ಗ್ರಾಮೀಣ ರಸ್ತೆಗಳು, ಒಟ್ಟು 20.60 ಕೋಟಿ ರೂ., ಮೌಲ್ಯದ 91 ಸೇತುವೆ ಹಾಗೂ ಕಲ್ವರ್ಟ್ಗಳು, 6.2 ಕೋಟಿ ರೂ. ಮೌಲ್ಯದ 13.2 ಕಿಮೀ ನಗರ ರಸ್ತೆಗಳು, 5.55 ಕೋಟಿ ರೂ. ಮೌಲ್ಯದ ಹೆಸ್ಕಾಂ ಆಸ್ತಿಗಳಿಗೆ ಹಾನಿಯಾಗಿದೆ.

    3 ಜೀವಗಳು ಬಲಿಯಾಗಿವೆ. 0.40 ಹೆಕ್ಟೇರ್ ಕೃಷಿ ಬೆಳೆ ನಷ್ಟವಾಗಿದೆ. ಇದುವರೆಗೆ 279 ಮನೆಗಳಿಗೆ ಹಾನಿಯಾಗಿದೆ. 18 ಜಾನುವಾರುಗಳು ಮೃತಪಟ್ಟಿವೆ ತಕ್ಷಣ ಪರಿಹಾರ ನೀಡುವ ಕ್ರಮವಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಮಳೆ ಇನ್ನಷ್ಟು ಕಡಿಮೆ

    ಮಳೆ ಹಂತ, ಹಂತವಾಗಿ ಮಳೆ ಇನ್ನಷ್ಟು ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜು.28 ರಂದು ಆರೇಂಜ್ ಹಾಗೂ ನಂತರ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

    ಮಳೆ ಕಡಿಮೆ ಎಂದರೂ ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾದ 10 ಪ್ರದೇಶಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೆಸರೇ ಇದೆ. ಗುರುವಾರ ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳಲ್ಲಿ ಕುಮಟಾದ ಹೆಗಡೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಎಂದರೆ 129 ಮಿಮೀ ಮಳೆಯಾಗಿದೆ.

    ಸಿದ್ದಾಪುರ ಕೋಡ್ಕಣಿ-117.5, ಸೊಪ್ಪಿನ ಹೊಸಳ್ಳಿ, 110, ಕದ್ರಾ-107.5, ತೊರ್ಕೆ-105.5, ಮೂರೂರು 103 ಮಿಮೀ ಮಳೆಯಾಗಿದೆ. ಅಂಕೋಲಾ-68, ಭಟ್ಕಳ-55.4, ದಾಂಡೇಲಿ-40, ಹಳಿಯಾಳ-43.6, ಹೊನ್ನಾವರ-59.6, ಜೊಯಿಡಾ-76, ಕಾರವಾರ-67.2, ಕುಮಟಾ-86.3, ಮುಂಡಗೋಡ-33.6, ಸಿದ್ದಾಪುರ-102.2, ಶಿರಸಿ-45.3, ಯಲ್ಲಾಪುರ-69.6 ಮಿಮೀ ಮಳೆಯಾಗಿದೆ.

    ಮಳೆಯಿಂದ ಬುಧವಾರ ಹಳಿಯಾಳದ 3 ಮನೆಗಳು ಸಂಪೂರ್ಣ ಬಿದ್ದು ಹೋಗಿವೆ. ಭಟ್ಕಳ, ದಾಂಡೇಲಿ ಹಾಗೂ ಹೊನ್ನಾವರದ ತಲಾ 1 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

    ಜಿಲ್ಲೆಯ ವಿವಿಧ ತಾಲೂಕುಗಳ ಒಟ್ಟು 26 ಮನೆಗಳಿಗೆ ಅಲ್ಪ ಹಾನಿಯಾಗಿದೆ. ಯಲ್ಲಾಪುರದಲ್ಲಿ 1 ಜಾನುವಾರು ಕೊಚ್ಚಿ ಹೋಗಿದೆ. ಕದ್ರಾ ಕೊಡಸಳ್ಳಿ ಅಣೆಕಟ್ಟೆಗಳಲ್ಲಿ ನೀರು ಬಿಡುವುದನ್ನು ಮುಂದುವರಿಸಲಾಗಿದೆ. ಗುರುವಾರ ಭಟ್ಕಳದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.

    ಜಲಾಶಯಗಳ ನೀರಿನ ಮಟ್ಟ
    ಅಣೆಕಟ್ಟೆ ಗರಿಷ್ಠ ಮಟ್ಟ ಇಂದಿನ ಮಟ್ಟ ಒಳಹರಿವು ಹೊರ ಹರಿವು
    (ಮೀಟರ್‌ಗಳಲ್ಲಿ ) (ಕ್ಯೂಸೆಕ್‌ಗಳಲ್ಲಿ )
    ಕದ್ರಾ 34.50 30.12 43,196 46,555
    ಕೊಡಸಳ್ಳಿ 75.50 69.28 21,384 25,141
    ಸೂಪಾ 564.00 542.45 44,573 00,00
    ಗೇರುಸೊಪ್ಪ 55.00 49.18 7904 8883

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts