More

    “18 ಸಚಿವರ ಮೇಲೆ ಗಂಭೀರ ಕ್ರಿಮಿನಲ್ ಕೇಸುಗಳಿವೆ”

    ಪಟ್ನಾ : ಅರ್ಧಕ್ಕಿಂತ ಹೆಚ್ಚು ಬಿಹಾರ ರಾಜ್ಯದ ಸಚಿವರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂಬ ವರದಿಯನ್ನು ಇಂದು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಸದನದಲ್ಲಿ ಮಂಡಿಸಿದರು. ರಾಜ್ಯದ 31 ಸಚಿವರಲ್ಲಿ 18 ಜನರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಕೊಲೆ, ಅಪಹರಣ, ದರೋಡೆಯಂತಹ ಗಂಭೀರ ಆರೋಪಗಳೂ ಸೇರಿವೆ ಎಂದರು.

    ವಿಧಾನಸಭಾ ಕಲಾಪದ ಶೂನ್ಯ ವೇಳೆಯಲ್ಲಿ ಸ್ಪೀಕರ್ ವಿಜಯಕುಮಾರ್ ಸಿನ್ಹಾರ ಅನುಮತಿಯೊಂದಿಗೆ ಆರ್​ಜೆಡಿ ಪಕ್ಷದ ಶಾಸಕ ಯಾದವ್, ಅಸೋಸಿಯೇಷನ್ ಫಾರ್ ಡೆಮೊಕ್ರೆಟಿಕ್ ರಿಫಾರ್ಮ್​ನ ವರದಿಯನ್ನು ಮಂಡಿಸಿದರು. ಇದರ ಪ್ರಕಾರ ಬಿಹಾರದ 18 ಸಚಿವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿದ್ದು, ಈ ವಿಚಾರವನ್ನು ಕಲಾಪದ ಭಾಗವಾಗಿ ಸೇರಿಸಬೇಕು ಎಂದು ಒತ್ತಾಯಿಸಿದರು.

    ಇದನ್ನೂ ಓದಿ: ಬಿಜೆಪಿ ಸೇರಿದ ತೆರೆಯ ಮೇಲಿನ ‘ರಾಮ’

    ಇದಕ್ಕೆ ಸ್ಪೀಕರ್​ ಸಿನ್ಹಾ, “ಇದಾಗಲೇ ಸಾರ್ವಜನಿಕವಾಗಿರುವ ವರದಿ, ಇದರಲ್ಲಿ ಹೊಸತೇನಿದೆ ಎಂದು ಕೇಳಿದರು. ಈ ವರದಿಯಲ್ಲಿ ಚುನಾವಣಾ ನೀತಿ ಸಂಹಿತೆಗಳ ಉಲ್ಲಂಘನೆಯ ಮೊಕದ್ದಮೆಗಳೂ ಸೇರಿವೆ. ನನ್ನ ಮೇಲೇ ಈ ರೀತಿಯ 10 ವರ್ಷ ಹಳೆಯ ಕೇಸ್​ ಇದೆ. ನೀವೂ(ಯಾದವ್) ಸೇರಿದಂತೆ ಇನ್ನೂ ಹಲವರು ಈ ರೀತಿಯ ಕೇಸುಗಳನ್ನು ಎದುರಿಸುತ್ತಿರಬಹುದು” ಎಂದರು.

    ಸದನದಲ್ಲಿ ಈ ಬಗ್ಗೆ ತಾವು ಮುಂಚೆಯೂ ಪ್ರಸ್ತಾಪ ಮಾಡಿದ್ದು, ಇದೀಗ ಲಿಖಿತ ಪುರಾವೆಯನ್ನು ತಂದಿರುವುದಾಗಿ ಯಾದವ್ ಹೇಳಿದರು. ಪ್ರಶ್ನೋತ್ತರದ ವೇಳೆಯ ನಂತರ ಈ ಬಗ್ಗೆ ಚರ್ಚೆ ಮಾಡಬಹುದು ಎಂದ ಸ್ಪೀಕರ್ ಸಿನ್ಹಾ, ಈ ವಿಚಾರವನ್ನು ಕಲಾಪಗಳ ಭಾಗವಾಗಿಸಲು ಸಾಧ್ಯವಿಲ್ಲ ಎಂದರು. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಎರಡು ಮಕ್ಕಳ ತಂದೆಯನ್ನು ಮದುವೆಯಾದಳು, ತನ್ನದೇ ಮಗು ಹುಟ್ಟಿದಾಗ ಮೆಟರ್ನಿಟಿ ಲೀವ್ ಕೇಳಿದಳು… ಹೈಕೋರ್ಟ್ ಏನು ಹೇಳಿತು ನೋಡಿ…

    ಈ ಮುದ್ದು ಮಗು ಮುಂದೆ ಬಿಗ್ ಬಾಸ್ ಖ್ಯಾತಿ ಗಳಿಸಿದಾಕೆ… ಯಾರೆಂದು ಊಹಿಸಬಲ್ಲಿರಾ?!

    ಬಿಡುಗಡೆಯ ಬೆನ್ನಲ್ಲೇ ನೆಟ್ಟಿಗರ ಹುಬ್ಬೇರಿಸಿದ “ಮುಂಬೈ ಸಗಾ”

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts