More

    173 ಕೋವಿಡ್ ಸೋಂಕು ದೃಢ: ಸೋಂಕಿಗೆ ಇಬ್ಬರು ಬಲಿ

    ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ 173 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 702ಕ್ಕೆ ಏರಿಕೆಯಾಗಿದೆ. ಇಬ್ಬರು ಮೃತಪಟ್ಟಿದ್ದಾರೆ.

    ಸೋಂಕಿನಿಂದ ಮೃತಟ್ಟಿರುವ ಇಬ್ಬರೂ ಬೆಂಗಳೂರು ನಗರದವರಾಗಿದ್ದು, 59 ವರ್ಷದ ವ್ಯಕ್ತಿ ಜ್ವರ, ಕೆಮ್ಮು, ತೀವ್ರ ಉಸಿರಾಟದ ತೊಂದರೆಯಿಂದ ಡಿ. 15ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಲಿಸದೆ ಡಿ. 29ರಂದು ಮೃತಪಟ್ಟಿದ್ದಾರೆ. ಇವರು ಕೋವಿಡ್ ಲಸಿಕೆ ಪಡೆದಿದ್ದರು. 69 ವರ್ಷ ವೃದ್ಧ ಜ್ವರ ಹಾಗೂ ಕೆಮ್ಮಿನಿಂದ ಡಿ. 25ರಂದು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಡಿ. 27ರಂದು ಸಾವನ್ನಪ್ಪಿದ್ದಾರೆ. ಇವರು ಕೋವಿಡ್ ಲಸಿಕೆ ಪಡೆದಿರಲಿಲ್ಲ. ಇದರೊಂದಿಗೆ ಮರಣ ಪ್ರಮಾಣ ದರ ಶೇ. 1.15 ತಲುಪಿದೆ.

    ಕಳೆದ 24 ಗಂಟೆಗಳಲ್ಲಿ 8,349 ಶಂಕಿತರಿಗೆ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದ್ದು, ಬೆಂಗಳೂರಿನಲ್ಲಿ 82, ಮೈಸೂರು 16, ದಕ್ಷಿಣ ಕನ್ನಡ 13, ಹಾಸನ 9, ವಿಜಯನಗರ 7, ಬಳ್ಳಾರಿ, ಚಿಕ್ಕಬಳ್ಳಾಪುರ ಮತ್ತು ಮಂಡ್ಯದಲ್ಲಿ ತಲಾ 6, ಚಾಮರಾಜನಗರ, ಚಿತ್ರದುರ್ಗ, ಗದಗ ಮತ್ತು ಶಿವಮೊಗ್ಗದಲ್ಲಿ ತಲಾ 4, ದಾವಣಗೆರೆ, ಕೋಲಾರ ಮತ್ತು ಉತ್ತರ ಕನ್ನಡದಲ್ಲಿ ತಲಾ ಇಬ್ಬರು ಹಾಗೂ ಬೆಳಗಾವಿ, ಚಿಕ್ಕಮಗಳೂರು, ಧಾರವಾಡ, ಕಲಬುರಗಿ, ಕೊಡಗು ಮತ್ತು ರಾಮನಗರದಲ್ಲಿ ತಲಾ ಒಬ್ಬರಂತೆ 173 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

    ಒಟ್ಟು ಸೋಂಕಿತರಲ್ಲಿ 649 ಮಂದಿ ಮನೆ ಆರೈಕೆಗೆ ಒಳಗಾಗಿದ್ದು, 53 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲಿ 12 ಮಂದಿಗೆ ತುರ್ತು ನಿಗಾ ಘಟಕದಲ್ಲಿ ಹಾಗೂ 41 ಮಂದಿಗೆ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts