More

    ನಿಯಮ ಉಲ್ಲಂಘಿಸಿದ ಸವಾರನಿಗೆ 17 ಸಾವಿರ ರೂ. ದಂಡ!

    ಶಿವಮೊಗ್ಗ: ವಾಹನ ಚಾಲಕರು ಸಂಚಾರ ನಿಯಮ ಉಲ್ಲಂಘಿಸುವುದು, ದಂಡ ಪಾವತಿಸುವುದು ಸಾಮಾನ್ಯ ಸಂಗತಿ. ಆದರೆ ಸುಮಾರು 10 ಸಾವಿರ ರೂ. ಮೌಲ್ಯದ ಹಳೆಯ ದ್ವಿಚಕ್ರ ವಾಹನದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ಇಲ್ಲೊಬ್ಬರು ಬರೋಬ್ಬರಿ 17 ಸಾವಿರ ರೂ. ದಂಡ ಪಾವತಿಸಿದ್ದಾರೆ. ಸುಮಾರು ಒಂದು ಮೀಟರ್ ಉದ್ದದಷ್ಟು ದಂಡದ ರಸೀದಿ ಕಂಡು ಹೌಹಾರಿದ್ದಾರೆ!

    ಆಶ್ಚರ್ಯಕರವಾದರೂ ಇದು ಸತ್ಯ. ಶಿವಮೊಗ್ಗದ ನಾಗರಿಕರೊಬ್ಬರು ಸಂಚಾರದ ಎಲ್ಲ ನಿಯಮವನ್ನೂ ಉಲ್ಲಂಘಿಸಿ ಹೊಸ ದಾಖಲೆಯನ್ನೇ ನಿರ್ಮಿಸಿದ್ದಾರೆ. ಇವರ ಖಾತೆಯಲ್ಲಿ ಸಿಗ್ನಲ್ ಜಂಪ್, ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿರುವುದು, ಮೊಬೈಲ್‌ನಲ್ಲಿ ಮಾತನಾಡುತ್ತಾ ಬೈಕ್ ಓಡಿಸಿರುವುದು… ಹೀಗೆ ಏನೆಲ್ಲಾ ಸಾಧ್ಯವೋ ಅಷ್ಟು ಬಗೆಯಲ್ಲಿ ಇವರು ನಿಯಮ ಉಲ್ಲಂಘನೆ ಮಾಡಿದ್ದಾರೆ.
    ಶಿವಮೊಗ್ಗದ ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಸಂಚಾರ ನಿಯಮ ಕಟ್ಟುನಿಟ್ಟಾಗಿ ಪಾಲನೆಯಾಗಲಿ ಎಂಬ ಕಾರಣಕ್ಕೆ ಮನೆ ವಿಳಾಸಕ್ಕೆ ದಂಡದ ನೋಟಿಸ್ ತಲುಪಿಸುವ ವ್ಯವಸ್ಥೆ ಮಾಡಿದ ಬಳಿಕ ದುಬಾರಿ ದಂಡ ಪ್ರಯೋಗವಾಗಿರುವ ಮೊದಲ ಪ್ರಕರಣವಿದು.
    ಶಿವಪ್ಪನಾಯಕ ವೃತ್ತದಲ್ಲಿ ಸಂಚಾರಿ ಠಾಣೆ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಈ ದುಬಾರಿ ದಂಡ ವಿಧಿಸಬೇಕಾದ ಬೈಕ್ ಪತ್ತೆಯಾಗಿದೆ. ಇದರ ಮಾಲೀಕರು ಸ್ಥಳದಲ್ಲಿ ದಂಡ ಕಟ್ಟದ ಕಾರಣ ಬೈಕ್ ಹಾಗೂ ಮಾಲೀಕರನ್ನು ಠಾಣೆಗೆ ಕರೆದೊಯ್ಯಲಾಯಿತು. ಸಂಚಾರ ಠಾಣೆ ಎಎಸ್‌ಐ ರಾಜಕುಮಾರ್ ದಂಡ ವಿಧಿಸಿದ ರಸೀದಿಯನ್ನು ವಾಹನ ಮಾಲೀಕರಿಗೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts