More

    17 ಆರ್‌ಒ ಘಟಕ ನಿರ್ಮಾಣಕ್ಕೆ ಸಮ್ಮತಿ

    ವಿಜಯವಾಣಿ ಸುದ್ದಿಜಾಲ ಮುಳಬಾಗಿಲು
    ಕರೊನಾ ಹಿನ್ನೆಲೆಯಲ್ಲಿ ಸರ್ಕಾರದಲ್ಲಿ ಹಣದ ಕೊರತೆಯಿಂದ ಆರ್‌ಒ ಘಟಕ ನಿರ್ಮಾಣಕ್ಕೆ ಆದ್ಯತೆ ಸಿಕ್ಕಿಲ್ಲ. ಸಚಿವ ಎಚ್.ನಾಗೇಶ್ ತಾಲೂಕಿಗೆ 47 ಹೊಸ ಆರ್‌ಒ ಘಟಕ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, 17 ಘಟಕಗಳಿಗೆ ಮಾತ್ರ ಅನುಮತಿ ಸಿಕ್ಕಿದೆ ಎಂದು ತಾಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್ ಹೇಳಿದರು.
    ಬುಧವಾರ ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ತಾಲೂಕಿನ 30 ಗ್ರಾಪಂಗಳಲ್ಲಿ 14ನೇ ಹಣಕಾಸು ಯೋಜನೆಯಲ್ಲಿ 9.50 ಕೋಟಿ ಉಳಿತಾಯವಿದ್ದು, ಈ ಹಣದ ಜತೆಗೆ 15ನೇ ಹಣಕಾಸು ಯೋಜನೆಯಲ್ಲಿ ಬಂದಿರುವ ಅನುದಾನ ಉಪಯೋಗಿಸಿಕೊಂಡು ಪ್ರತಿ ಗ್ರಾಪಂನಲ್ಲಿ ತಲಾ 1 ಲಕ್ಷ ರೂ. ಮೌಲ್ಯದ ಸ್ಯಾನಿಟೈಸರ್ ಮತ್ತು ಮಾಸ್ಕ್ ಖರೀದಿಸಲು ಕ್ರಿಯಾ ಯೋಜನೆ ತಯಾರಿಸಿಕೊಳ್ಳಬೇಕು. ಕಂಟೇನ್ಮೆಂಟ್ ವಲಯದಲ್ಲಿ ತಕ್ಷಣ ವಿತರಣೆ ಮಾಡಬೇಕು ಎಂದರು.
    ಸದಸ್ಯ ಸಿ.ವಿ.ಗೋಪಾಲ್ ಮಾತನಾಡಿ, ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಸದಸ್ಯರ ಗಮನಕ್ಕೆ ತರದೆ ಕಾಮಗಾರಿ ಅನುಷ್ಠಾನ ಮಾಡುತ್ತಿದ್ದಾರೆ. ಕಮಿಷನ್‌ಗಾಗಿ ಕಾಮಗಾರಿ ಮಾಡುವುದು ಸರಿಯಲ್ಲ. ಯೋಜನೆ ಅನುಷ್ಠಾನ ಮುಖ್ಯ. ನೀರು ಬರದ ಸ್ಥಳಗಳಲ್ಲಿ ಕೃಷಿ ಇಲಾಖೆಯಿಂದ ಚೆಕ್‌ಡ್ಯಾಂ ನಿರ್ಮಿಸಿರುವುದು ಬೇಜಾಬ್ದಾರಿತನ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಜಿಪಂ ಎಇ ಪ್ರಸನ್ನಕುಮಾರ್ ಮಾತನಾಡಿ, ತಾಲೂಕಿನಲ್ಲಿ 390 ಗ್ರಾಮಗಳಿದ್ದು, 190 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಂಡುಬಂದಿದೆ. 107 ಗ್ರಾಮಗಳಲ್ಲಿ ರೀಬೋರ್ ಮಾಡಲಾಗಿದ್ದು, ಸಮಸ್ಯೆ ಸುಧಾರಿಸಿದೆ. 88 ಗ್ರಾಮಗಳಲ್ಲಿ ಸಮಸ್ಯೆಯಿದೆ ಎಂದರು.
    ಸಿಡಿಪಿಒ ಇಲಾಖೆಯಲ್ಲಿ ಯಾವುದೇ ಮಾಹಿತಿಗಳನ್ನು ಜನಪ್ರತಿನಿಧಿಗಳಿಗೆ ಸರಿಯಾಗಿ ನೀಡುವುದಿಲ್ಲ ಎಂದು ಸದಸ್ಯ ಆವನಿ ರವಿಶಂಕರ್ ಸಿಡಿಪಿಒ ಆರ್.ಪ್ರಭಾವತಿ ಅವರನ್ನು ತರಾಟೆ ತೆಗೆದಕೊಂಡರು.
    ಬಿಇಒ ಡಿ.ಗಿರಿಜೇಶ್ವರದೇವಿ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸರ್ಕಾರ ನಿಗದಿಪಡಿಸಿದ ದಿನಾಂಕದಂದು ನಡೆಯಲಿದೆ. ಎಲ್ಲ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ. ರೋಟರಿ ಮುಳಬಾಗಿಲು ಸೆಂಟ್ರಲ್‌ನವರು ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಮಾಸ್ಕ್ ನೀಡಲು ಮುಂದೆ ಬಂದಿದ್ದು, ಸ್ಕೌಟ್ಸ್-ಗೈಡ್ಸ್ ಸಹಕಾರದಿಂದ ವಿತರಿಸಲಾಗುವುದು ಎಂದರು.
    ತಹಸೀಲ್ದಾರ್ ಕೆ.ಎನ್.ರಾಜಶೇಖರ್, ಸದಸ್ಯರಾದ ಗಂಗಿರೆಡ್ಡಿ, ವಿ.ಮಾರಪ್ಪ, ಶಶಿಕಲಾ ನಾಗರಾಜ್, ಭಾಗ್ಯಮ್ಮ ಮುನಿಸ್ವಾಮಿಗೌಡ, ತೊರಡಿ ಎಂ.ಹರೀಶ್, ನಂಗಲಿ ಕೆ.ಆರ್.ಶ್ರೀನಾಥ್, ಹೆಬ್ಬಣಿ ಕೆ.ಎಸ್.ಉಷಾಶಂಕರ್‌ರೆಡ್ಡಿ, ಟಿ.ವಿ.ಬಾಲಕೃಷ್ಣ, ಪಿ.ಸುಬ್ಬರೆಡ್ಡಿ ಮತ್ತಿತರರು ಇದ್ದರು.

    72 ಜನರಿಗೆ ನೆಗೆಟಿವ್: ತಾಲೂಕಿನಲ್ಲಿ 5 ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಿ ಪರೀಕ್ಷೆಗೆ ಒಳಪಡಿಸಿದ್ದು, 72 ಜನರಿಗೆ ನೆಗೆಟಿವ್ ಬಂದಿದೆ. ಅಜ್ಮೀರ್‌ನಿಂದ ಬಂದ 22 ಜನರಿಗೂ ನೆಗೆಟಿವ್ ಬಂದಿದೆ. ಸೊನ್ನವಾಡಿ ಸೋಂಕಿತ ವ್ಯಕ್ತಿಯ ಸಂಪರ್ಕಿತರ ವರದಿ ಬರಬೇಕಿದ್ದು, ಒಂದೆರಡು ದಿನಗಳಲ್ಲಿ ವರದಿ ಬರಲಿದೆ ಎಂದು ಟಿಎಚ್‌ಒ ಡಾ.ಕೆ.ಎಂ.ವರ್ಣಶ್ರೀ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts