More

    ನಾಲ್ಕೇ ನಾಲ್ಕು ಡೆಡ್​ಬಾಡಿ ಇರಿಸುವಷ್ಟು ಜಾಗದಲ್ಲಿದ್ದವು 17 ಡೆಡ್​ಬಾಡಿಗಳು: ಕರೊನಾ ಸೋಂಕಿತರಿಗೆ ಚಿಕಿತ್ಸೆಕೊಡುತ್ತಿದ್ದ ನರ್ಸಿಂಗ್ ಹೋಮ್​ನ ಕಥೆ-ವ್ಯಥೆ!

    ನ್ಯೂಜೆರ್ಸಿ: ಅಲ್ಲಿ ಇದ್ದುದು ನಾಲ್ಕೇ ನಾಲ್ಕು ಡೆಡ್​ಬಾಡಿ ಇರಿಸುವಷ್ಟು ಜಾಗ ಮಾತ್ರ. ಆದರೆ ಅಲ್ಲಿ ಪತ್ತೆಯಾದುದು ಬರೋಬ್ಬರಿ 17 ಡೆಡ್​ಬಾಡಿಗಳು!

    ಹೌದು.. ಇದು ನ್ಯೂಜೆರ್ಸಿ ಟೌನ್​ನ ಸಣ್ಣ ಪಟ್ಟಣ ಆಂಡೋವರ್​ನ ನರ್ಸಿಂಗ್ ಹೋಮ್ ಒಂದರ ಕಥೆ ಮತ್ತು ವ್ಯಥೆ. ರಾಜ್ಯದ ಅತಿದೊಡ್ಡ ನರ್ಸಿಂಗ್ ಹೋಮ್​ನಲ್ಲಿ ಶವಗಳನ್ನು ಈ ರೀತಿ ಇರಿಸಿರುವ ಬಗ್ಗೆ ಆಂಡೋವರ್​ನ ಪೊಲೀಸರಿಗೆ ಸೋಮವಾರ ಅನಾಮಧೇಯ ಕರೆಯೊಂದು ಬರುತ್ತದೆ. ಆ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಪೊಲೀಸರು ಅಕ್ಷರಶಃ ಬೆಚ್ಚಿಬಿದ್ದಿದ್ದರು. ನರ್ಸಿಂಗ್ ಹೋಮ್​ನ ಶೆಡ್​ ಒಂದರಲ್ಲಿ ನಾಲ್ಕೇ ನಾಲ್ಕು ಶವ ಇರಿಸುವಷ್ಟು ಜಾಗ ಇತ್ತಷ್ಟೆ. ಅಲ್ಲಿ ಬರೋಬ್ಬರಿ 17 ಶವಗಳಿದ್ದವು!!!

    ಈ ಬಗ್ಗೆ ಆಂಡೋವರ್​ನ ಪೊಲೀಸ್ ಮುಖ್ಯಸ್ಥ ಎರಿಕ್​ ಸಿ ಡೇನಿಯಲ್​ಸನ್​ ಪ್ರತಿಕ್ರಿಯಿಸಿದ್ದು, ಅಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರಿದ್ದಾರೆ. ಅವರಿಗೆ ಚಿಕಿತ್ಸೆ ಕಷ್ಟ ಸಾಧ್ಯ. ದೀರ್ಘಾವಧಿಯ ಕೇರ್​ ಫೆಸಿಲಿಟಿಗೆ ಸಂಬಂಧಿಸಿದ 68 ಸಾವುಗಳ ಪೈಕಿ ಈ ಹದಿನೇಳು ಕೂಡ ಸೇರಿಕೊಂಡಿವೆ. ಅಷ್ಟೇ ಅಲ್ಲ, ಆಂಡೋವರ್​ ಸಬಾಕ್ಯೂಟ್​ ಆ್ಯಂಡ್ ರಿಹ್ಯಾಬಿಲಿಟೇಷನ್ ಸೆಂಟರ್​ 1 ಮತ್ತು 2ರಲ್ಲಿನ ಇಬ್ಬರು ದಾದಿಯರೂ ಇದ್ದಾರೆ. 68 ಸಾವಿನ ಪ್ರಕರಣಗಳಲ್ಲಿ 26 ಜನರಿಗೆ ಕರೊನಾ ಪಾಸಿಟಿವ್​ ಖಚಿತವಾಗಿತ್ತು. ಇನ್ನು ಉಳಿದವರ ಸಾವಿಗೆ ಕಾರಣವನ್ನು ಇನ್ನೂ ಪತ್ತೆ ಹಚ್ಚಲಾಗಿಲ್ಲ.

    ಈ ನರ್ಸಿಂಗ್ ಹೋಮ್​ನ ಎರಡು ಕಟ್ಟಡಗಳಲ್ಲಿ ಬಾಕಿ ಉಳಿದಿರುವ 76 ಜನರಿಗೆ ಕರೊನಾ ಪಾಸಿಟಿವ್ ಖಚಿತವಾಗಿದೆ. ಅಲ್ಲದೆ, ಒಬ್ಬ ಆಡಳಿತಾಧಿಕಾರಿ ಸೇರಿ 41 ಸಿಬ್ಬಂದಿಗೆ ಕೋವಿಡ್ 19 ಸೋಂಕು ತಗುಲಿದೆ ಎಂಬುದು ಬುಧವಾರ ಫೆಡರಲ್ ಅಧಿಕಾರಿ ಪ್ರಕಟಿಸಿದ ಮಾಹಿತಿಯಲ್ಲಿದೆ.

    ಆಂಡೋವರ್ ಸಬಾಕ್ಯೂಟ್ ಒಂದೇ ಈ ರೀತಿ ಆಗಿರುವುದಲ್ಲ. ನ್ಯೂಯಾರ್ಕ್​ ಪ್ರಾಂತ್ಯದ ಬಹುತೇಕ ನರ್ಸಿಂಘ್ ಹೋಮ್​ಗಳಲ್ಲಿ ಕರೊನಾ ಚಿಕಿತ್ಸೆಗೆ ಇರಬೇಕಾದ ಸೌಲಭ್ಯಗಳ ಕೊರತೆ, ಹೆಚ್ಚುತ್ತಿರುವ ಸೋಂಕು ಹರಡುವಿಕೆ, ವೈಯಕ್ತಿಕ ಸುರಕ್ಷತೆ ಕಾಪಾಡಲು ಸೂಕ್ತ ಮುಂಜಾಗ್ರತಾ ಕ್ರಮಗಳ ಕೊರತೆ ಎಲ್ಲವೂ ಕಾಡುತ್ತಿವೆ. ಆಂಡೋವರ್ ಸಬಾಕ್ಯೂಟ್​ 700 ಬೆಡ್​ಗಳೊಂದಿಗೆ ಆ ಪ್ರಾಂತ್ಯದಲ್ಲಿ ಅತಿದೊಡ್ಡ ನರ್ಸಿಂಗ್ ಹೋಮ್ ಆಗಿ ಆಶಾದಾಯಕವಾಗಿ ಕಾಣಿಸಿಕೊಂಡಿತ್ತು. ಆದರೆ, ದುರದೃಷ್ಟವಶಾತ್ ಸೌಲಭ್ಯಗಳ ಕೊರತೆ ಕಾಡಿದೆ. (ಏಜೆನ್ಸೀಸ್)

    ಕರೊನಾದ ನಡುವೆಯೇ ಪಾಕ್‌ನಿಂದ ರೂಪುಗೊಂಡಿವೆ ಹೊಸ ಉಗ್ರರ ಗುಂಪು!: ಭಾರತೀಯ ಸೇನೆಯ ಮೇಲೆ ದಾಳಿಗೆ ಸಿದ್ಧತೆ

    ಮುತ್ತಪ್ಪ ರೈ ಅವರನ್ನು ಎರಡು ತಾಸು ವಿಚಾರಣೆಗೆ ಒಳಪಡಿಸಿದ ಸಿಸಿಬಿ ಪೊಲೀಸರು: ಯಾಕೆ ರೈ ಏನು ಮಾಡಿದ್ರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts