More

    ಇದೋ ನೋಡಿ… 1600 ವರ್ಷಗಳ ಹಿಂದೆ ಮುಳುಗಿದ್ದ ಚರ್ಚ್…!

    ಟರ್ಕಿಯ ಪಶ್ಚಿಮ ಪ್ರದೇಶದ ಇಜ್ನಿಕ್ ಸರೋವರದ ಸ್ವಚ್ಛವಾದ ನೀರಿನ ಆಳದಲ್ಲಿ, 1,600 ವರ್ಷಗಳ ಹಿಂದಿನ ಒಂದು ಬೃಹತ್ ರಚನೆಯನ್ನು ಕಂಡುಬಂದಿದೆ.  ಅಂದಾಜು 1,600 ವರ್ಷಗಳ ಹಿಂದೆ ಟರ್ಕಿಯ ಸರೋವರದಲ್ಲಿ ಮುಳುಗಿರುವ ಪುರಾತನ ಚರ್ಚ್, ನೀರಿನ ಮಾಲಿನ್ಯದ ತೀವ್ರ ಇಳಿಕೆಯಿಂದಾಗಿ ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ.
    ಲಾಕ್ಡೌನ್ ನಿಂದಾಗಿ ಈ ಪ್ರದೇಶದಲ್ಲಿ ಜನಜಂಗುಳಿ ಕಡಿಮೆಯಾಗಿ ಜಲಮಾಲಿನ್ಯ ಕಡಿಮೆಯಾಗಿದೆ. ಈ ವೈಮಾನಿಕ ಫೋಟೋ ಸರೋವರದ ಸ್ವಚ್ಛ ನೀರಿನ ಆಳದಲ್ಲಿ ರೋಮನ್ ಶೈಲಿಯ ಚರ್ಚ್ ಅನ್ನು ಸ್ಪಷ್ಟವಾಗಿ ತೋರಿಸುತ್ತದೆ. ಡ್ರೋನ್ ತೆಗೆದ ಚಿತ್ರಗಳು, ಆ ಕಟ್ಟಡದ ಬೃಹತ್ ಗೋಡೆಗಳು ಮತ್ತು ಅವಶೇಷಗಳನ್ನು ತೋರಿಸುತ್ತವೆ.

    ಇದನ್ನೂ ಓದಿ: ಕೆಪಿಎಸ್​​ಸಿ ಪ್ರಕಟಿಸಿದ ವಿವಿಧ ಹುದ್ದೆಗಳ ಪರೀಕ್ಷೆಯ ವೇಳಾಪಟ್ಟಿ ಇಲ್ಲಿದೆ ನೋಡಿ

    ವರದಿಗಳ ಪ್ರಕಾರ, ಚರ್ಚ್‌ನ ಪ್ರಾಚೀನ ಅವಶೇಷಗಳನ್ನು 2014 ರಲ್ಲಿ ಪತ್ತೆಹಚ್ಚಲಾಯಿತು ಇದು ಅಮೆರಿಕದ ಪುರಾತತ್ವ ಸಂಸ್ಥೆಯ ‘ವರ್ಷದ ಟಾಪ್ 10 ಆವಿಷ್ಕಾರ’ಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ. ಪುರಾತತ್ತ್ವಜ್ಞರ ಪ್ರಕಾರ, ಬೆಸಿಲಿಕಾ ಎಂದು ಕರೆಯಲ್ಪಡುವ ಚರ್ಚ್​​​​ – ಕ್ರಿ.ಶ. ಸುಮಾರು 390 ರಲ್ಲಿ(ಇಸ್ತಾಂಬುಲ್, ಕಾನ್ಸ್ಟಾಂಟಿನೋಪಲ್ ಆದಾಗ) ರಚಿಸಲ್ಪಟ್ಟಿದೆ.
    ಕ್ರಿ.ಶ 740 ರಲ್ಲಿ ಭೂಕಂಪದಿಂದ ಚರ್ಚ್ ನಾಶವಾಯಿತು ಮತ್ತು ಅದರ ಅವಶೇಷಗಳು ಸರೋವರದ ಆಳದಲ್ಲೇ ನೆಲೆಗೊಂಡಿವೆ ಎಂದು ಲೈವ್ ಸೈನ್ಸ್ ವರದಿ ಮಾಡಿದೆ. ಚರ್ಚ್ನ ಅವಶೇಷಗಳು ನೀರಿನ ಮೇಲ್ಮೈಯಿಂದ ಸುಮಾರು 10 ಅಡಿ ಕೆಳಗೆ ಮತ್ತು ಇಜ್ನಿಕ್ ಸರೋವರದ ತೀರದಿಂದ ಸುಮಾರು 160 ಅಡಿಗಳಷ್ಟು ದೂರದಲ್ಲಿವೆ.

    ಇದನ್ನೂ ಓದಿ: ಅಯ್ಯೋ.. ಏನಾಯ್ತು..? ಅಂತ ಕೇಳಿದರೆ ಈ ಮೂಕ ಪ್ರಾಣಿ ಹೇಳೀತಾದರೂ ಏನನ್ನ?

    “ಮೊದಲು ಸರೋವರದ ಚಿತ್ರಗಳನ್ನು ನೋಡಿದಾಗ, ಚರ್ಚ್ ರಚನೆಯನ್ನು ಸ್ಪಷ್ಟವಾಗಿ ನೋಡಿದಾಗ ನನಗೆ ಆಶ್ಚರ್ಯವಾಯಿತು. ನಾನು 2006 ರಿಂದ ಇಜ್ನಿಕ್‌ನಲ್ಲಿ ಕ್ಷೇತ್ರ ಸಮೀಕ್ಷೆ ಮಾಡುತ್ತಿದ್ದೆ ಮತ್ತು ಇಲ್ಲಿಯವರೆಗೆ ಅಂತಹ ಭವ್ಯವಾದ ರಚನೆಯನ್ನು ನಾನು ಪತ್ತೆ ಮಾಡಿರಲಿಲ್ಲ “ಎಂದು ಉಲುಡಾಗ್ ವಿಶ್ವವಿದ್ಯಾಲಯದ ಪುರಾತತ್ವ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಮುಸ್ತಫಾ ಹಿನ್ ಲೈವ್ ಸೈನ್ಸ್‌ಗೆ ತಿಳಿಸಿದರು.
    ಸ್ಥಳೀಯ ಸರ್ಕಾರದ ಮುಖಂಡ ಅಲಿನೂರ್ ಅಕ್ತಾಸ್ ಮತ್ತು ಶಿನ್ ಈ ರಚನೆಯನ್ನು ಟರ್ಕಿಯ ‘ಮೊದಲ ನೀರಿನಾಳದ ಪುರಾತತ್ವ ವಸ್ತು ಸಂಗ್ರಹಾಲಯ’ ವನ್ನಾಗಿ ಮಾಡಲು ಕರೆ ನೀಡಿದ್ದಾರೆ.

    ಭಾರತದ ಆರ್ಥಿಕತೆ ಸದೃಢ ಮಾಡಲು ಧನಸಹಾಯ ಮಾಡ್ತಾರಂತೆ ಪಾಕ್​ ಪ್ರಧಾನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts