More

    1,600 ಜಿಲೆಟಿನ್ ಕಡ್ಡಿ ವಶ, ಒಬ್ಬನ ಬಂಧನ

    ಧಾರವಾಡ: ತಾಲೂಕಿನ ಅಮ್ಮಿನಭಾವಿಯಲ್ಲಿರುವ ಡಿ.ಬಿ. ಮಾಸೂರ ಸ್ಟೋನ್ ಕ್ರಷಿಂಗ್ ಇಂಡಸ್ಟ್ರೀಸ್ ಮೇಲೆ ಸೋಮವಾರ ದಾಳಿ ನಡೆಸಿದ ಗ್ರಾಮೀಣ ಠಾಣೆ ಪೊಲೀಸರು, 1,600 ಜಿಲೆಟಿನ್ ಕಡ್ಡಿ ಹಾಗೂ 700 ಡಿಟೋನೇಟರ್​ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ಹೇಳಿದರು.

    ತಮ್ಮ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಯಾನಂದ ಬಸವರಾಜ ಮಾಸೂರ ಮಾಲೀಕತ್ವದ ಸ್ಟೋನ್ ಕ್ರಷಿಂಗ್ ಇಂಡಸ್ಟ್ರೀಸ್ ಮೇಲೆ ದಾಳಿ ನಡೆಸಲಾಗಿದೆ. ಇವರು ಬಾಗಲಕೋಟೆಯ ನವೀನಕುಮಾರ ಎ. ವಾಲಿ ಎಂಬಾತನಿಂದ ಜಿಲೆಟಿನ್ ಕಡ್ಡಿಗಳನ್ನು ತರಿಸಿಕೊಂಡಿದ್ದರು. ಅಕ್ರಮವಾಗಿ ಸ್ಪೋಟಕ ವಸ್ತುಗಳನ್ನು ಸಂಗ್ರಹಿಸಿರುವ ಕುರಿತು ಖಚಿತ ಮಾಹಿತಿ ಬಂದಿತ್ತು. ತಮ್ಮ ಹಾಗೂ ಡಿವೈಎಸ್​ಪಿ ಎಂ.ಬಿ. ಸಂಕದ ಮಾರ್ಗದರ್ಶನದಲ್ಲಿ ಇನ್​ಸ್ಪೆಕ್ಟರ್​ಗಳಾದ ವಿಜಯಕುಮಾರ ಬಿರಾದಾರ ಹಾಗೂ ಶ್ರೀಧರ ಸತಾರೆ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು. ಈ ವೇಳೆ ಅಕ್ರಮವಾಗಿ ಸಂಗ್ರಹಿಸಿದ್ದ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕ್ರಷರ್ ಘಟಕದ ಸಿಬ್ಬಂದಿ ಶಂಕರಗೌಡ ಶಿವನಗೌಡ ಗೌಡರ ಎಂಬಾತನನ್ನು ಬಂಧಿಸಲಾಗಿದ್ದು, ಇನ್ನಿಬ್ಬರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

    ದಾಳಿ ನಡೆಸಿ ಭಾರಿ ಪ್ರಮಾಣದ ಜಿಲೆಟಿನ್ ಕಡ್ಡಿಗಳು ಹಾಗೂ ಡಿಟೋನೇಟರ್​ಗಳನ್ನು ವಶಪಡಿಸಿಕೊಂಡ ತಂಡಕ್ಕೆ ಸೂಕ್ತ ಬಹುಮಾನ ನೀಡಲಾಗುವುದು ಎಂದರು. ಡಿವೈಎಸ್​ಪಿ ಎಂ.ಬಿ. ಸಂಕದ, ಇನ್​ಸ್ಪೆಕ್ಟರ್​ಗಳಾದ ವಿಜಯಕುಮಾರ ಬಿರಾದಾರ ಹಾಗೂ ಶ್ರೀಧರ ಸತಾರೆ, ಗ್ರಾಮೀಣ ಠಾಣೆ ಪಿಎಸ್​ಐ ಮಹೇಂದ್ರಕುಮಾರ ನಾಯಕ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts